ಪರೀಕ್ಷಾ ಶುಲ್ಕ: ಪೊಲೀಸ್‌ ಠಾಣೆ ಮೆಟ್ಟಲೇರಿದ ವಿದ್ಯಾರ್ಥಿಗಳು

ಪದವಿ ಶುಲ್ಕ
Advertisement

ಕುಷ್ಟಗಿ: ಸ್ನಾತಕೋತ್ತರ ಪದವಿ ಮಹಾವಿದ್ಯಾಲಯದ ಪ್ರವೇಶಾತಿ ವ್ಯತ್ಯಾಸದ ಶುಲ್ಕ ಪಾವತಿಸಿದರೂ ಪುನಃ ಪಾವತಿಸುವಂತೆ ಕಾಲೇಜಿನ ಪ್ರಾಚಾರ್ಯರು ಒತ್ತಾಯಿಸುತ್ತಿದ್ದಾರೆ. ಆಡಳಿತ ಮಂಡಳಿಯ
ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು ಅನುಮತಿ ನೀಡುವಂತೆ
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪದವಿ ಕಾಲೇಜಿನ ವಿದ್ಯಾರ್ಥಿಗಳು ಪೊಲೀಸ್ ಠಾಣೆಯ ಮೆಟ್ಟಲೇರಿದ ಪ್ರತಿಭಟನೆ ಅವಕಾಶ ನೀಡುವಂತ
ಪಿಎಸ್‌ಐ ಮೌನೇಶ ರಾಠೋಡ್‌ ಗೆ ಮನವಿ ಮಾಡಿದರು.
ವಿ.ಎಸ.ಕೆ ಮಹಾವಿದ್ಯಾಲಯದ ನಿರ್ದೇಶನದಂತೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಬಾಕಿ ಶುಲ್ಕ ಪಾವತಿಸಿದ ನಂತರ ಅಂಕಪಟ್ಟಿ ನೀಡಲಾಗುತ್ತದೆ ಎಂದು ಪ್ರಾಚಾರ್ಯ ಎಸ್.ವಿ.ಡಾಣಿ ಹೇಳುತ್ತಿದ್ದಾರೆ.ಇದರಿಂದ ವಿದ್ಯಾರ್ಥಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಶಿಷ್ಯವೇತನ ಜಮಾ ಆಗಿಲ್ಲ.ಪೂರ್ಣ ಪ್ರಮಾಣದ ಶುಲ್ಕ ಪಾವತಿಸಿದರೂ ಬಾಕಿ ಇದೆ ಎಂದು ಹೇಳಿ ಅಂಕ ಪಟ್ಟಿ ನೀಡುತ್ತಿಲ್ಲ. ಒಟ್ಟಿಗೇ ೧೦-೧೨ಸಾವಿರ ರೂ. ಪಾವತಿಸುವುದು ಕಷ್ಟಸಾಧ್ಯವಾಗುತ್ತಿದೆ ಎಂದು ವಿದ್ಯಾರ್ಥಿಗಳು ಅಲವತ್ತುಕೊಳ್ಳುತ್ತಿದ್ದು, ಹಾಲಿ, ಮಾಜಿ ಶಾಸಕರುಗಳ ಕಚೇರಿ ಹಾಗೂ ನಿವಾಸಕ್ಕೆ ತೆರಳಿ ಸಮಸ್ಯೆ ಹೇಳಿಕೊಂಡಿದ್ದಾರೆ.ಆದರೆ ಯಾವುದೇ ಪ್ರಯೋಜವಾಗಿಲ್ಲ ಹೀಗಾಗಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಲು ಪೊಲೀಸರ ಮೊರೆ ಹೋಗಿದ್ದಾರೆ.
ಪೊಲೀಸ್ ಠಾಣೆಗೆ ಭೇಟಿ ನೀಡಿದ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ವಿ.ಡಾಣಿ ಬಾಕಿ ಶುಲ್ಕ ಹಾಗೂ ವಿಶ್ವವಿದ್ಯಾಲಯಕ್ಕೆ ಪಾವತಿಸಿರುವ ಮಾಹಿತಿಯನ್ನೊಳಗೊಂಡ ದಾಖಲೆಯೊಂದಿಗೆ ಪಿಎಸ್‌ಐ ಮೌನೇಶ ರಾಠೋಡಗೆ ವಿವರಿಸಿದರು. ಪ್ರಾಚಾರ್ಯರು ನೀಡಿದಂತೆ ನಿಮ್ಮಲ್ಲಿಯೂ ದಾಖಲೆ ಇದ್ದರೆ ನೀಡಿ ಎಂದು ಪಿಎಸ್‌ಐ ವಿದ್ಯಾರ್ಥಿಗಳಿಗೆ ಸೂಚಿಸಿದರು. ಈಗಾಗಲೇ ಬಹುತೇಕ ವಿದ್ಯಾರ್ಥಿಗಳು ಬಾಕಿ ಶುಲ್ಕ ಪಾವತಿಸಿದ್ದಾರೆ. ಈ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡಿದರೆ ಪಾವತಿಸಿದವರಿಗೆ ಹಿಂತಿರುಗಿಸಬೇಕಾಗುತ್ತದೆ ಎಂದು ತಿಳಿಸಿದರು.