ಪಾಕಿಸ್ತಾನದ ಲಾಹೋರ್‌ನಲ್ಲೂ ಗಣಪ್ಪನ್ನ ಕೂರಿಸ್ತಿವಿ..‌

Advertisement

ಹುಬ್ಬಳ್ಳಿ: 2024ರಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ. ಆಗ ಪಾಕಿಸ್ತಾನದ ಲಾಹೋರದಲ್ಲೂ ಗಣೇಶ ವಿಗೃಹವನ್ನು ಪ್ರತಿಷ್ಠಾಪಿಸುತ್ತೇವೆ. ತಡೆತಯವ ತಾಕತ್ತಿದ್ದರೆ ತಡೆಯಿರಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸವಾಲು ಹಾಕಿದರು.
ರಾಣಿ ಚನ್ನಮ್ಮ (ಈದ್ಗಾ) ಮೈದಾನದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ದೇಶದಲ್ಲಿ ರಾಷ್ಟ್ರಧ್ವಜ ಹಾರಿಸಲು ಅನುಮತಿ ಕೇಳುವ ಅವಶ್ಯಕತೆ ಇಲ್ಲ. ಪಾಕಿಸ್ತಾನದಲ್ಲಿ ತಿನ್ನೋಕೆ ಅನ್ನವಿಲ್ಲ. ಹೀಗಿರುವಾಗ ಕೆಲವರು ಪಾಕಿಸ್ತಾನಕ್ಕೆ ಜೈ ಅಂತಾರೆ. ಮೋದಿಯವರು ಇನ್ನೊಮ್ಮೆ ಪ್ರಧಾನಿ ಆಗುತ್ತಾರೆ. ಆಗ, ಪಾಕಿಸ್ತಾನ ದಾಟಿ ಅಪ್ಘಾನಿಸ್ತಾನ್ ಬಾರ್ಡರ್‌ವರೆಗೆ ಹೋಗುತ್ತೇವೆ ಎಂದರು.
ಇನ್ನುಮುಂದೆ ಹುಬ್ಬಳ್ಳಿಯ ಈ ಮೈದಾನಕ್ಕೆ ಈದ್ಗಾ ಮೈದಾನ ಎಂದರೆ ಅನ್ಯ ಕೋಮಿನವರಿಗೆ ಹುಟ್ಟಿದಂತೆ. ಈದ್ಗಾ ಬದಲು ವೀರರಾಣಿ ಕಿತ್ತೂರು ಚನ್ನಮ್ಮ ಮೈದಾನ ಎಂದು ಕರೆಯುವಂತೆ ಮನವಿ ಮಾಡಿದ ಯತ್ನಾಳ, ಸನಾತನ ಧರ್ಮದ ವಿರುದ್ಧ ಮಾತನಾಡುವವರಿಗೆ ಏಡ್ಸ್ ಬರುತ್ತೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ವಿಘ್ನಗಳು ನಾಶವಾಗಲಿ ಎಂಬ ಕಾರಣಕ್ಕೆ ಗಣೇಶ ಹಬ್ಬದ ದಿನವೇ ಹೊಸ ಸಂಸತ್ ಭವನದಲ್ಲಿ ಮೋದಿ ಅಧಿವೇಶನ ಆರಂಭಿಸಿದ್ದಾರೆ.
ಹುಬ್ಬಳ್ಳಿಯ ಈದ್ಗಾ ಮೈದಾನ ಯಾರಪ್ಪನ ಆಸ್ತಿಯೂ ಅಲ್ಲಾ. ಗಣೇಶೋತ್ಸವದ ಬಳಿಕ ಶೋಕ ಸಭೆ ಮಾಡುವುದಾಗಿ ಹೇಳಿದ್ದ ಅಂಜುಮನ್ ಸಂಸ್ಥೆಗೆ ತಿರುಗೇಟು ನೀಡಿ, ಮಾರನೆದಿನವೇ ನಾವು ಗೋಮೂತ್ರ ಸಂಪಡಿಸಿ, ಹನುಮಾನ ಚಾಲೀಸ ಪಠಣ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು‌.
ಶೆಟ್ಟರ್ ವಿರುದ್ಧ ಪರೋಕ್ಷ ವಾಗ್ದಾಳಿ: ಹಿಂದಿನಿಂದ ನಾಟಕ ಮಾಡುತ್ತಿದ್ದಾರೆಂದು ಶೆಟ್ಟರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಯತ್ನಾಳ, ಎಂಪಿ ಎಲೆಕ್ಷನ್‌ಗೆ ನಿಲ್ಲಿ. ಜನ ನಿಮ್ಮನ್ನು 4ಲಕ್ಷ ಮತಗಳಿಂದ ಲಾಗಾ ಹೊಡೆಸುತ್ತಾರೆ ಎಂದು ಹರಿಹಾಯ್ದರು.