ಪ್ರಕೃತಿಯ ಸರ್ವಶ್ರೇಷ್ಠ ಆವಿಷ್ಕಾರ ನೀರು

Advertisement

ಆರೋಗ್ಯ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಪ್ರಕೃತಿಯ ಸರ್ವಶ್ರೇಷ್ಠ ಆವಿಷ್ಕಾರ ‘ನೀರು’! ದೇಹದ ಶೇ.೭೨ ಭಾಗ ನೀರಿನಿಂದ ಆವೃತವಾಗಿದೆ. ದೇಹದ ಅತ್ಯಂತ ಪ್ರಮುಖ ಕಾರ್ಯಭಾಗ ಇಡೀ ದೇಹದಲ್ಲಿ ನೀರಿನ ಸರಾಗವಾದ, ಸುಲಲಿತ, ತಡೆರಹಿತ ಚಲನೆ. ಇದು ಸಾಧ್ಯವಾಗುವುದು ಪೂರಕ ಪ್ರಮಾಣದ ಸೇವನೆಯಿಂದ. ಇದು ಆಗದಾಗ ದೇಹ ನಿರ್ಜಲೀಕರಣಕ್ಕೆ ತುತ್ತಾಗಿ ಎಲ್ಲಾ ರೀತಿಯ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೆ ದೇಹವನ್ನು ಒಡ್ಡುತ್ತದೆ. ದೇಹದ ವಿವಿಧ ಭಾಗಗಳಲ್ಲಿ ನೀರಿನ ಕೊರತೆಯಿಂದ ಪ್ರಕಟವಾಗುವ ವಿವಿಧ ಲಕ್ಷಣಗಳು, ಸಂಕೇತಗಳು ಹಾಗೂ ತೊಡಕುಗಳನ್ನು ಔಷಧಶಾಸ್ತ್ರದ ಈಗಿನ ಚಿಂತನಾಕ್ರಮದಲ್ಲಿ ‘ರೋಗಗಳು’ ಎಂದೇ ವ್ಯಾಖ್ಯಾನಿಸಲಾಗುತ್ತಿದ್ದು, ನೀರೇ ಈ ಸಮಸ್ಯೆಗಳಿಗೆ ಪರಿಹಾರ ಎಂಬುದನ್ನು ಜನರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ; ಬಹುಶಃ ನೀರು ಅತಿ ಸುಲಭವಾಗಿ ಲಭ್ಯವಿರುವ ವಸ್ತುವೆಂಬ ತಾತ್ಸಾರವೂ ಕಾರಣವಿರಬಹುದು. ಈ ರೀತಿಯ ಮನೋಭಾವ ಅಗಾಧ ಪ್ರಭಾವ ಬೀರಬಲ್ಲ ನೀರಿನ ನೈಸರ್ಗಿಕವಾದ ಔಷಧೀಯ ಗುಣವನ್ನು ಕಡೆಗಣಿಸಿದಂತೆಯೇ!
ದೇಹದ ಆಯಾಯ ಭಾಗದಲ್ಲಿ ಕಾಣಿಸಿಕೊಳ್ಳುವ ನಿರ್ಜಲೀಕರಣದ ಪರಿಣಾಮವನ್ನು ಆಯಾ ಭಾಗದ ಕಾಯಿಲೆಯನ್ನಾಗಿ ಗುರುತಿಸುವ ಆಧುನಿಕ ಔಷಧಶಾಸ್ತ್ರ ಆ ಪ್ರಕಾರವೇ ಗುಳಿಗೆ ಇತ್ಯಾದಿ ಚಿಕಿತ್ಸಾ ವಿಧಾನಗಳನ್ನು ಅನುಸರಿಸುತ್ತಿದೆ. ಸಮಸ್ಯೆಯ ಮೂಲವನ್ನೇ ತಪ್ಪಾಗಿ ತಿಳಿದಾಗ ಚಿಕಿತ್ಸೆಯ ಪರಿಣಾಮವೂ ದಾರಿತಪ್ಪಬೇಕಲ್ಲವೇ? ದೇಹದಲ್ಲಿ ನೀರಿನ ನಿಯಂತ್ರಣ ಮತ್ತು ಅವಶ್ಯಕತೆ ಜೀವನದ ಮೂರು ಹಂತಗಳಲ್ಲಿ ವಿಸ್ತರಿಸಿದೆ: ಭ್ರೂಣಾವಸ್ಥೆ, ದೇಹ ಪೂರ್ಣವಾದ ಎತ್ತರ-ಅಗಲ ಸಾಧಿಸುವ ಬೆಳವಣಿಗೆ, ಸಂಪೂರ್ಣವಾಗಿ ಬೆಳೆದು ಮರಣದವರೆಗೆ. ಜೀವಸೃಷ್ಟಿ ವಿಕಾಸಗೊಳ್ಳುವ ಗರ್ಭಧಾರಣೆ ಸಂದರ್ಭದಲ್ಲಿ ತಾಯಿ ಅನುಭವಿಸುವ ಬೆಳಗಿನ ಬೇನೆ ನೀರಿನ ಕೊರತೆಯಿಂದ ಉಂಟಾದ ಬಾಯಾರಿಕೆಯ ಸಂಕೇತವಾಗಿರುತ್ತದೆ. ಗರ್ಭಾವಸ್ಥೆಯಲ್ಲಿ ನೀರಿನ ಪಾತ್ರ ಅತ್ಯಂತ ಮಹತ್ವದ್ದು. ಗರ್ಭಧಾರಣೆ ಸಂದರ್ಭದಲ್ಲಿ ನೀರಿನ ಯಥೇಚ್ಛ ಬಳಕೆ ಸುರಕ್ಷಿತವಿರಿಸುತ್ತದೆ. ಭ್ರೂಣದ ಆರೋಗ್ಯಪೂರ್ಣ ಬೆಳವಣಿಗೆಗೆ ಹಾಗೂ ತಾಯಿಯ ಎದೆಹಾಲಿನ ಉತ್ಪತ್ತಿಗೆ ನೀರಿನ ಕೊಡುಗೆ ಅತ್ಯಮೂಲ್ಯವಾದುದು. ಒತ್ತಡ ಅಥವಾ ನಿರ್ಜಲೀಕರಣದ ಪರಿಸ್ಥಿತಿಯಲ್ಲಿ ದೇಹ ತಾಯಿಯ ಜೀವಕ್ಕಿಂತ ಮಗುವಿನ ಉಳಿವಿಗಾಗಿ ಶ್ರಮಿಸುತ್ತದೆ! ಹೀಗಾಗಿ ತಾಯಿ ಮತ್ತು ಮಗು ಇಬ್ಬರ ಉಳಿವಿನಲ್ಲಿ ನೀರಿನ ಪ್ರಭಾವ ಅಗಾಧವಾಗಿರುತ್ತದೆ.
ಬಾಯಾರಿಕೆ ಆಗುವವರೆಗೆ ಕಾಯುವುದೆಂದರೆ ಅಕಾಲಿಕವಾದ ಹಾಗೂ ನೋವಿನಿಂದ ಕೂಡಿದ ಸಾವನ್ನು ನಿರೀಕ್ಷೆ ಮಾಡುವುದೆಂದೇ ಅರ್ಥ! ನಮ್ಮ ದೈನಂದಿನ ನೀರಿನ ಸೇವನೆ ಜೀವಕೋಶಗಳ ನಿರಂತರ ಚಟುವಟಿಕೆಗಳಿಗೆ ಅತ್ಯಗತ್ಯ ಅವಶ್ಯಕತೆಯನ್ನು ಪೂರೈಸುತ್ತದೆ. ನೀರಿನ ಸೇವನೆಯ ಪ್ರಮಾಣ ದೇಹದ ಅಪೇಕ್ಷಿತ ಮಟ್ಟದಲ್ಲಿ ಆಗದಿದ್ದಾಗ ಉಂಟಾಗುವ ನಿರ್ಜಲೀಕರಣ ಮುಂದಿನ ಎಲ್ಲಾ ಬಗೆಯ ಆರೋಗ್ಯ ಸಮಸ್ಯೆಗಳಿಗೆ ಕಾರಣ. ಆಗಲೂ ಸಹ ನೀರು ಸೇವಿಸಿದರೆ ಸಮಸ್ಯೆ ತನ್ನಿಂತಾನೇ ನಿಯಂತ್ರಣಕ್ಕೆ ಬರುತ್ತದೆ. ಆದರೆ ಅಂಥ ಸಂದರ್ಭದಲ್ಲಿ ನೀರಿನ ಬದಲು ಔಷಧ ಸೇವನೆ ಮಾಡಿದರೆ ಎಲ್ಲಾ ರೀತಿಯ ಎಡವಟ್ಟುಗಳನ್ನು ಸೃಷ್ಟಿಸುತ್ತದೆ. ಪ್ರೌಢಾವಸ್ಥೆಯನ್ನು ತಲುಪುತ್ತಿದ್ದಂತೆ ದೇಹ ಅನುಭವಿಸುವ ಬಾಯಾರಿಕೆಯನ್ನು ತಪ್ಪಾಗಿ ಅರ್ಥೈಸುವ ಅಭ್ಯಾಸ ಆರಂಭವಾಗುತ್ತದೆ. ನೀರಿಗಾಗಿ ಹಾತೊರೆಯುವ ದೇಹದ ಕರೆಯನ್ನು ಬಾಯಾರಿಕೆಯ ಬದಲು ‘ಹಸಿವು’ ಎಂಬುದಾಗಿ ತಪ್ಪಾಗಿ ತಿಳಿದು, ಹೊಟ್ಟೆತುಂಬಾ ತಿನ್ನುವ ಜೊತೆಗೆ ಕಾಫಿ, ಚಹಾ, ತಂಪುಪಾನೀಯಗಳ ಸೇವನೆ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸುತ್ತದೆ. ೨೫ನೇ ವಯಸ್ಸು ತಲುಪುತ್ತಿದ್ದಂತೆ ಈ ತಪ್ಪುನಡವಳಿಕೆ ಗಂಭೀರ ಅನಾರೋಗ್ಯವಾಗಿ ಕಾಡಲಾರಂಭಿಸಿದಾಗ ಈ ಹಂತದಲ್ಲೂ ನೀರು ಸೇವಿಸಿ ಸರಿಪಡಿಸಿಕೊಳ್ಳುವ ಅವಕಾಶ ಇದ್ದೇ ಇದೆ.
ಆಗಾಗ ಬಾಯಿ ಒಣಗುವುದು ನಿರ್ಜಲೀಕರಣದ ಆರಂಭಿಕ ಲಕ್ಷಣವಲ್ಲ; ಬದಲಿಗೆ ಅದು ಅದಾಗಲೇ ಆರಂಭವಾಗಿ ನೀರಿನ ಕೊರತೆ ದೇಹದೊಳಗಿನ ಅಂಗಾಂಗಗಳನ್ನು ಬಾಧಿಸುತ್ತಿರುವ ಸೂಚನೆಯಾಗಿರುತ್ತದೆ. ಮಾನವದೇಹದ ಪ್ರಮುಖ ಕ್ಷೀಣಗೊಳ್ಳುವ ಕಾಯಿಲೆಗಳಿಗೆ ದೀಘಾವಧಿಯ ನಿರ್ಜಲೀಕರಣವೇ ಮೂಲಕಾರಣ. ಪೆಪ್ಟಿಕ್ ಅಲ್ಸರ್, ಮೈಗ್ರೇನ್, ಅಸ್ತಮಾ, ಸಂಧಿವಾತ ಇವುಗಳನ್ನು ಆಧುನಿಕ ವೈದ್ಯಪದ್ಧತಿ ಗುಣಪಡಿಸುವುದಿಲ್ಲ; ಆದರೆ ನಿರಂತರವಾಗಿ ಔಷಧಿ ನೀಡುತ್ತಾ ಇರುತ್ತದೆ. ಅದರ ಬದಲಿಗೆ ಆಗಾಗ ನೀರು ಕುಡಿಯುತ್ತಿದ್ದರೆ ಯಾವ ಗುಳಿಗೆಯೂ ಇಲ್ಲದೆ ತನ್ನಷ್ಟಕ್ಕೆ ತಾನೇ ಗುಣವಾಗುತ್ತದೆ. ತೀವ್ರತೆರನ ಪೆಪ್ಟಕ್ ಅಲ್ಸರಿನಿಂದ ಬಳಲುವವರು ಪ್ರತಿ ಮೂರು ಗಂಟೆಗೊಮ್ಮೆ ಎರಡು ಲೋಟ ನೀರು ಕುಡಿಯುತ್ತಾ ಬಂದರೆ ಅತ್ಯಂತ ಕಡಿಮೆ ಅವಧಿಯಲ್ಲಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇಷ್ಟೇ ಅಲ್ಲ; ಮೈಗ್ರೇನ್, ಬೆನ್ನುನೋವು, ಎದೆಯುರಿ, ದೀಘಕಾಲದ ಮಲಬದ್ಧತೆ, ಹರ್ನಿಯ, ದೀರ್ಘಾವಧಿಯ ಸುಸ್ತು, ಬೈಪಾಸ್ ಸರ್ಜರಿ ಅಪೇಕ್ಷಿಸುವ ಹೃದಯಬೇನೆ, ಕ್ಯಾನ್ಸರ್, ಮೂಗಿನಲ್ಲಿ ರಕ್ತ ಒಸರುವಿಕೆ, ಅಲರ್ಜಿ, ಉಸಿರಾಟದ ತೊಂದರೆ, ಬೊಜ್ಜು, ಮರೆವಿನ ಕಾಯಿಲೆ, ಮಿದುಳು ಮತ್ತು ಬೆನ್ನುಹುರಿ ಸಮಸ್ಯೆ (ಮಲ್ಟಿಪಲ್ ಸ್ಕೆಲರೋಸಿಸ್)-ಹೀಗೆ ಬಹುತೇಕ ಆರೋಗ್ಯ ಸಮಸ್ಯೆಗಳ ಸಂದರ್ಭದಲ್ಲಿ ಮನಸ್ಸು ಅಪೇಕ್ಷಿಸುವ ಕಾಲದಲ್ಲಿ ಮತ್ತು ಪ್ರಮಾಣದಲ್ಲಿ ನೀರು ಕುಡಿದರೆ ಸಂಪೂರ್ಣ ಶಮನವಾಗುತ್ತದೆ. ಜಲೀಕರಣಗೊಂಡ ದೇಹ ಯಾವ ಕಾರಣಕ್ಕೂ ಬ್ಯಾಕ್ಟೀರಿಯಾ, ವೈರಸ್‌ಗಳಿಗೆ ದೇಹದಲ್ಲಿ ತಳವೂರಲು ಅವಕಾಶ ನೀಡುವುದಿಲ್ಲ. ಕ್ಯಾನ್ಸರಿನ ಹೆಚ್ಚಿನ ಸಂದರ್ಭಗಳು ಶೀತ, ತಲೆನೋವು, ಸೋಂಕು, ಮೈಕೈನೋವು ಮುಂತಾದ ಸೌಮ್ಯಲಕ್ಷಣಗಳನ್ನು ‘ಕಾಯಿಲೆಗಳಂತೆ ಪರಿಗಣಿಸಿ’ ಗುಳಿಗೆಗಳ ಮೂಲಕ ಪದೇಪದೇ ನಿಗ್ರಹಿಸಿದ ಕಾರಣದಿಂದಲೇ ಆಗಿರುತ್ತವೆ! ದೇಹದಿಂದ ಹೊರಹಾಕಲ್ಪಟ್ಟ ದ್ರವದ ಪ್ರಮಾಣಕ್ಕೆ ಸರಿಯಾಗಿ ನೀರಿನ ಸೇವನೆ ಇರಬೇಕು. ನಿರ್ಜಲೀಕರಣದ ಮೊದಲ ಹೊಡೆತ ಅನುಭವಿಸುವ ಅಂಗಗಳು: ಯಕೃತ್ತು ಮತ್ತು ಮೇದೋಜೀರಕ ಗ್ರಂಥಿಯ ಜೊತೆಗೆ ಮೂತ್ರಪಿಂಡಗಳು. ಅಷ್ಟೇ ಅಲ್ಲ; ಮರಳಿ ಸಾಮಾನ್ಯಸ್ಥಿತಿಗೆ ಬಾರದಷ್ಟು ದೂರ ಸಾಗಿರುತ್ತವೆ! ಹೊಟ್ಟೆಯ ಮೇಲ್ಮಧ್ಯ ಭಾಗದಲ್ಲಿನ ನೋವು (ಡಿಸ್ಪೆಪ್ಟಿಕ್ ಪೈನ್) ವಯಸ್ಸಿನ ಬೇಧವಿಲ್ಲದೆ ಬಹುತೇಕ ಮಂದಿಯನ್ನು ಕಾಡುತ್ತದೆ. ನಿರಂತರ ನಿರ್ಜಲೀಕರಣ ಇದೂ ಸೇರಿದಂತೆ ಹೆಚ್ಚಿನೆಲ್ಲಾ ರೋಗಗಳ ಮೂಲವೂ ಕೂಡಾ. ಡಿಸ್ಪೆಪ್ಟಿಕ್ ಪೈನ್ ದೀರ್ಘಾವಧಿ ಮುಂದುವರಿದರೆ ಕರುಳುಹುಣ್ಣಾಗಿ ಪರಿವರ್ತನೆಯಾಗಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಊಟಕ್ಕೆ ಅರ್ಧಗಂಟೆ ಮೊದಲು ಕುಡಿದ ನೀರು ಹೊಟ್ಟೆ ಘನ ಮತ್ತು ಆಮ್ಲೀಯ ಆಹಾರಗಳನ್ನು ಹೀರಿಕೊಳ್ಳಲು ಸಹಾಯಮಾಡುತ್ತದೆ. ಕಿಬ್ಬೊಟ್ಟೆ ನೋವು ನಿರ್ಜಲೀಕರಣದ ಪ್ರಥಮ ಸೂಚನೆ. ಕಿಬ್ಬೊಟ್ಟೆ ನೋವು ಆಗಾಗ ಮರುಕಳಿಸುತ್ತಿದೆಯೆಂದರೆ ಅದು ನಿರಂತರವಾಗಿ ನೀರಿನ ಕೊರತೆಯಿಂದ ಉಂಟಾದ ಮಲಬದ್ಧತೆಯ ಕಾರಣದಿಂದ ಎಂಬುದು ಸ್ಪಷ್ಟ. ದೊಡ್ಡಕರುಳಿನ ಮುಖ್ಯಕಾರ್ಯಗಳಲ್ಲಿ ಒಂದು; ಆಹಾರ ಜೀರ್ಣವಾದ ನಂತರದಲ್ಲಿ ವಿಸರ್ಜನೆಯಾಗುವ ಮಲದಲ್ಲಿ ಇರಬಹುದಾದ ಹೆಚ್ಚಿನ ನೀರಿನಂಶ ವೃಥಾ ನಷ್ಟವಾಗದಂತೆ ಹೀರಿಕೊಳ್ಳುವುದು. ನಿರ್ಜಲೀಕರಣ ಆಗಿದ್ದಾಗ ದೊಡ್ಡಕರುಳಿನ ಈ ಪ್ರಕ್ರಿಯೆ ಸುಸೂತ್ರವಾಗಿ ನಡೆಯುವುದಿಲ್ಲ. ಅದರ ಪರಿಣಾಮವೇ ಮಲಬದ್ಧತೆ. ಅಪೆಂಡಿಕ್ಸ್ ಕಾಡಿದಾಗ ಮೂರುಲೋಟ ನೀರುಸೇವನೆ ಪರಿಹಾರ. ಸಾಕಷ್ಟು ನೀರು ಕುಡಿಯದವರು, ಅತಿಯಾದ ಪ್ರಚೋದನೆಯ ಮೂಲಕ ದೇಹದ ನೀರಿನ ಸಂಗ್ರಹ ಖಾಲಿಮಾಡುವವರ ಜೀವಕೋಶಗಳು ತಮ್ಮ ನೀರಿನ ಪ್ರಮಾಣದಲ್ಲಿ ಶೇ.೨೮-೩೦ರಷ್ಟು ಕಳಕೊಂಡು, ಚರ್ಮ, ಹೊಟ್ಟೆ, ಯಕೃತ್ತು, ಮೂತ್ರಪಿಂಡ, ಹೃದಯ, ಮಿದುಳಿನ ಜೀವಕೋಶಗಳ ಕಾರ್ಯಕ್ಷಮತೆಯನ್ನು ಹಾಳುಗೆಡವುತ್ತವೆ; ದೇಹದಿಂದ ತ್ಯಾಜ್ಯಗಳ ವಿಲೇವಾರಿ ಅಸಾಧ್ಯವಾಗಿ, ಜೀವಕೋಶಗಳ ಹೊರಭಾಗದಲ್ಲಿ ನೀರು ಸಂಗ್ರಹವಾಗಲು ಆರಂಭವಾಗಿ(ವ್ಯಕ್ತಿಯ ಅರಿವಿಗೆ ಬರುವುದಿಲ್ಲ) ಕ್ರಮೇಣ ಕಾಲು, ಮುಖ, ಪಾದ, ತೋಳು, ಮೂತ್ರಪಿಂಡಗಳಲ್ಲಿ ಸಂಗ್ರಹಣೆಯಾಗುತ್ತದೆ. ಕೀಲುನೋವು ಸಮಸ್ಯೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರುಸೇವನೆಯೇ ಪರಿಹಾರ. ನೀರುಸೇವನೆ ಸಂದುಗಳಲ್ಲಿನ ಅಂಗಾಂಶಗಳನ್ನು ಪುನರ್ನಿರ್ಮಾಣ ಮಾಡುವ ಹಾರ್ಮೋನುಗಳ ಉತ್ಪಾದನೆಯನ್ನು ಸಕ್ರಿಯಗೊಳಿಸುತ್ತದೆ. ತಲೆನೋವಿನ ಮೂಲಕಾರಣ ನಿರ್ಜಲೀಕರಣ. ನೀರಿನ ಕೊರತೆ ಒತ್ತಡ ಮತ್ತು ಖಿನ್ನತೆಗೆ; ಸ್ತನಕ್ಯಾನ್ಸರಿಗೆ ರಹದಾರಿ.