ಪ್ರಕೃತಿ ದೋಷ ರಹಿತ ಶ್ರೀರಾಮಚಂದ್ರ

PRATHAPPHOTOS.COM
Advertisement

ಶ್ರೀ ರಾಮದೇವರಿಗೆ ಚಂದ್ರ ಎಂಬ ಉಪಾಧಿಯನ್ನು ಕೊಟ್ಟು ಶ್ರೀರಾಮಚಂದ್ರ ಎಂದು ಹೇಳುತ್ತೇವೆ. ಅಂದರೆ ಚಂದ್ರನಂತ ಪ್ರಶಾಂತತೆ ಶ್ರೀರಾಮನಲ್ಲಿದೆ ಎಂದು ಹೇಳ ಹೊರಟ ಮಾತಿದು. ಪಾಪ ಪರಿಹಾರ ಮಾಡುವ `ರಾಮ’ ಎಂಬ ಶಬ್ದ ದೊಡ್ಡದು. ಭಗವಂತನ ಗುಣಗಳೇ ದೇವತೆಗಳಲ್ಲಿ ಪ್ರತಿಬಿಂಬವಾಗಿವೆ. ಚಂದ್ರ ಮನೋಅಭಿಮಾನಿ ದೇವತೆಯಾಗಿದ್ದಾನೆ. ಆ ತರಹದ ಚಂದ್ರನ ವಿಶೇಷವಾದ ಸಾಮ್ಯ ಇದೆ ಎಂಬ ಭಾವವದು. ಚಂದ್ರ ಯಾವ ರೀತಿಯ ಸಂಕಟಗಳನ್ನು ಪರಿಹಾರ ಮಾಡುತ್ತಾನೂ.. ಹಾಗೆಯೇ ಭಗವಂತನು ಸಂತಪಗಳನ್ನು ಪರಿಹಾರ ಮಾಡುತ್ತಾನೆ.
ಚಂದ್ರ ತಾತ್ಕಾಲಿಕವಾಗಿ ಅಂದರೆ ಹಗಲಿನಲ್ಲಿ ಇದ್ದ ಪ್ರಖರವಾದ ಬಿಸಿಲಿನ ತಾಪದಿಂದ ಸಾಯಂಕಾಲ ಸಂತಾಪವನ್ನು ಪರಿಹಾರ ಮಾಡುತ್ತಾನೆ. ಹೀಗೆ ಚಂದ್ರ ನಮಗೆ ತಂಪು ಮಾಡೋದು ಮತ್ತೇ ಬಿಸಿ ಆಗೋದು.. ಆದರೆ ದೇವರು ಮಾತ್ರ ಒಮ್ಮೆ ಮಾತ್ರ ಸಂತುಷ್ಟವಾಗಿ ನಮಗೆ ಮೋಕ್ಷವನ್ನು ನಮಗೆ ಪ್ರಧಾನ ಮಾಡಿದರೆ ಸಂಸಾರದ ತಾಪಗಳನ್ನು ಪರಿಹಾರ ಮಾಡಿದರೆ ಮತ್ತೊಮ್ಮೆ ತಾಪಗಳೇ ಬರುವುದಿಲ್ಲ… ಹಾಗೆ ತಾಪಗಳನ್ನು ಪರಿಹಾರ ಮಾಡಿ ನಮಗೆ ಶಾಂತಿಯನ್ನು ಮೋಕ್ಷದಲ್ಲಿ ಕೊಡುವಂತಹ ನಿಜವಾದ ಚಂದ್ರ ಅವನೇ ಶ್ರೀರಾಮಚಂದ್ರ, ಚಂದ್ರನಿಗಿಂತಲೂ ಶ್ರೀರಾಮಚಂದ್ರ ವೈಶಿಷ್ಟ್ಯ ಏನು ಎಂದರೆ ಚಂದ್ರಕೃಷ್ಣ ಪಕ್ಷದಲ್ಲಿ ಕ್ಷಯ ಹೊಂದುತ್ತಾನೆ ಶುಕ್ಲಪಕ್ಷದಲ್ಲಿ ಬೆಳೆದು ವೃದ್ಧಿಹೊಂದಿ ನಿಲ್ಲುತ್ತಾನೆ.
ಶ್ರೀರಾಮಚಂದ್ರನಿಗೆ ಮಾತ್ರ ಕ್ಷಯವೇ ಇಲ್ಲ.. ದಕ್ಷಿಣ ಸುಖಾಪ್ತ ಬಲ… ಎಂದಿಗೂ ಕ್ಷಯವಿಲ್ಲದ ಏಕಸ್ವರೂಪಿಯಾಗಿರುವ ಪರಮಾತ್ಮ ಚಂದ್ರನಿಗಿಂತ ಶ್ರೇಷ್ಠ. ಚಂದ್ರನಿಗೆ ಬೇರೆ ಬೇರೆ ಸಂದರ್ಭದಲ್ಲಿ ಅಪರಾಧ ಮಾಡಿರುವದರಿಂದ ದುಃಖಪ್ರಾಪ್ತಿ ಆಗಿರುತ್ತದೆ ಮನಸ್ಸಿಗೆ ಖೇದವಾದದ್ದು ಉಂಟು… ಆದರೆ ಶ್ರೀರಾಮಚಂದ್ರ ಯಾವ ದುಃಖವೂ ಇಲ್ಲ ಖೇದವು ಇಲ್ಲ. ನಾನು ಅನಂತ ಸುಖವಾಗಿ ಅನಂತ ರೂಪವಾಗಿ ಇರುತ್ತಾನೆ. ತಾನು ಸುಖಿಯಾಗಿರುವುದಲ್ಲದೆ ತನ್ನ ಭಕ್ತರಿಗೂ ಕೂಡ ಸುಖಗಳನ್ನು ಕೊಟ್ಟು ದುಃಖವನ್ನು ಕಳೆದು ಸಂತೋಷವಾಗಿ ಇಟ್ಟು ಆನಂದವಾಗಿ ಮೋಕ್ಷ ಸಾಧನೆಯನ್ನು ಮಾಡುವಂತೆ ಅವನೇ ಅನುಗ್ರಹಿಸಿ, ಮುಂದೆ ಮೋಕ್ಷವನ್ನು ಆಗುವಂತೆ ಅವನೇ ಕರುಣಿಸುತ್ತಾನೆ. ಈ ಕಾರಣಕ್ಕಾಗೆ ಆ ಪರಮಾತ್ಮನನ್ನು ಶ್ರೀರಾಮಚಂದ್ರ ಎಂದು ಕರೆದಿದ್ದಾರೆ. ಅದನ್ನು ಮೋಹನದಾಸರು ಕೂಡ ಶ್ರೀಮದಾಚಾರ್ಯರು ಹೇಳಿದಂತೆ… ಶ್ರೀ ರಾಮಚಂದ್ರ ದೇವರ ಪ್ರತಿಷ್ಠಾಪನೆ ಮಾಡುವ ಮೂಲಕ ಶ್ರೀರಾಮ ದೇವರು ಜನರ ದುಃಖಗಳನ್ನು ಪರಿಹಾರ ಮಾಡುತ್ತಾರೆ. ಇದರಲ್ಲಿ ಸಂಶಯವೇ ಇಲ್ಲ.