ಪ್ರಧಾನಿ ನರೇಂದ್ರ ಮೋದಿ ವಾಟ್ಸಾಪ್‌ನಲ್ಲಿಯೂ ಲಭ್ಯ

Advertisement

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರನ್ನು ವಾಟ್ಸಾಪ್‌ನಲ್ಲಿಯೂ ಸಂಪರ್ಕಿಸಬಹುದಾಗಿದೆ, ವಾಟ್ಸಾಪ್ ಚಾನೆಲ್ ಮುಖಾಂತರ ಸಂಪರ್ಕಿಸುವ ನೂತಸ ಅಪಡೆಟ್‌ನ್ನು whatsapp ನಿಡಿದೆ, ಪ್ರಧಾನಿ ಮೋದಿಯವರ ವಾಟ್ಸಾಪ್ ಚಾನೆಲ್ ಲೈವ್ ಆಗಿದೆ. ಇತ್ತೀಚೆಗೆ WhatsApp ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಈ ವೈಶಿಷ್ಟ್ಯವನ್ನು ಸೇರಿಸಿದೆ. ಇಂದು ಹೊಸ ಸಂಸತ್ ಭವನ ಕಟ್ಟಡದ ಚಿತ್ರವನ್ನು ನರೇಂದ್ರ ಮೋದಿ ಅವರು ತಮ್ಮ ವಾಟ್ಸಾಪ್ ಚಾನಲ್ಸ್​ನಲ್ಲಿ ಹಾಕಿದ ಮೊದಲ ಪೋಸ್ಟ್​ ಆಗಿದೆ. ನರೇಂದ್ರ ಮೋದಿ ಅವರು ವಾಟ್ಸಾಪ್ ಚಾನಲ್​ನಲ್ಲಿ ಇನ್ಮುಂದೆ ನಿಯಮಿತವಾಗಿ ಪೋಸ್ಟ್ ಮಾಡುತ್ತಿರುತ್ತಾರೆ. ಅವರ ಚಾನಲ್ ಫಾಲೋ ಮಾಡುತ್ತಿರುವವರು ಇದನ್ನು ನೋಡಬಹುದು. ಅಕ್ಷಯ್ ಕುಮಾರ್, ವಿಜಯ ದೇವರಕೊಂಡ, ಕತ್ರಿನಾ ಕೈಫ್ ಇತ್ಯಾದಿ ಹಲವು ಸೆಲಬ್ರಿಟಿಗಳು ವಾಪ್ಸಾಪ್ ಚಾನಲ್ಸ್ ಸೇರಿದ್ದಾರೆ. ಬೆಳೆಯುತ್ತಿರುವ ಈ ಪಟ್ಟಿಗೆ ನರೇಂದ್ರ ಮೋದಿ ಸೇರ್ಪಡೆ ಇನ್ನಷ್ಟು ಪುಷ್ಟಿ ಕೊಟ್ಟಿದೆ.
ನೀವು WhatsApp ನ ಇತ್ತೀಚಿನ ವೈಶಿಷ್ಟ್ಯದ ಸಹಾಯದಿಂದ ಇದನ್ನು ಮಾಡಬಹುದು. ಕಳೆದ ವಾರವಷ್ಟೇ WhatsApp ಚಾನೆಲ್ ವೈಶಿಷ್ಟ್ಯವನ್ನು ಹೊರತಂದಿದ್ದು, ಇದು ಕ್ರಮೇಣ ಎಲ್ಲಾ ಬಳಕೆದಾರರನ್ನು ತಲುಪುತ್ತಿದೆ. ಈ ವೇದಿಕೆಯ ಸಹಾಯದಿಂದ ನೀವು ಪ್ರಧಾನಿ ನರೇಂದ್ರ ಮೋದಿಯನ್ನು ಅನುಸರಿಸಬಹುದು. ಅನುಸರಿಸುವುದು ಹೇಗೆ? ವಾಟ್ಸಾಪ್‌ನಲ್ಲಿ ಪ್ರಧಾನಿ ಮೋದಿಯವರನ್ನು ಸಂಪರ್ಕಿಸಲು, ನೀವು ಮೊದಲು ನಿಮ್ಮ ವಾಟ್ಸಾಪ್ ಅನ್ನು ಅಪ್‌ಡೇಟ್ ಮಾಡಬೇಕು. ನಿಮ್ಮ WhatsApp ನಲ್ಲಿ ನೀವು ಚಾನಲ್ ವೈಶಿಷ್ಟ್ಯವನ್ನು ಹೊಂದಿಲ್ಲದಿದ್ದರೆ, ಅದನ್ನು ನವೀಕರಿಸಿ. ಇದರ ನಂತರ ನೀವು WhatsApp ಅನ್ನು ತೆರೆಯಬೇಕಾಗುತ್ತದೆ. ಸ್ಥಿತಿಯ ಬದಲಿಗೆ, ನೀವು ಈಗ ನವೀಕರಣದ ಆಯ್ಕೆಯನ್ನು ನೋಡುತ್ತೀರಿ ಎಂದು ನೀವು ಗಮನಿಸಬಹುದು.