ಪ್ರಮೋದ ಮುತಾಲಿಕ್ ಕೆಂಡಾಮಂಡಲ

ಮುತಾಲಿಕ್
Advertisement

ಹುಬ್ಬಳ್ಳಿ: ೩೧ ವರ್ಷದ ಹಿಂದಿನ ಪ್ರಕರಣವನ್ನು ರಾಜ್ಯ ಸರ್ಕಾರವು ರೀ ಓಪನ್ ಮಾಡಿರುವುದು ಹಿಂದು ಸಂಘಟನೆಯವರಾದ ನಾವೆಲ್ಲ ಖಂಡಿಸುತ್ತೇವೆ. ೩೧ ವರ್ಷ ಸರ್ಕಾರಗಳು ನಿದ್ದೆ ಮಾಡಿದ್ದವೆ ಎಂದು ಶ್ರೀರಾಮಸೇನೆ ಸಂಘಟನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಕೆಂಡಕಾರಿದ್ದಾರೆ.
ಈಗ ಇಡೀ ದೇಶದಲ್ಲಿ ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣವಾಗಿ ಒಳ್ಳೆಯ, ಆನಂದದ ವಾತಾವರಣ ಇದೆ. ಈ ಸಮಯದಲ್ಲಿ ೩೧ ವರ್ಷದ ಹಿಂದಿನ ಪ್ರಕರಣದಡಿ ಬಂಧನ ಮಾಡಿ ಭಯಭೀತ ಮಾಡುವಂಥದ್ದು ಸರ್ಕಾರಕ್ಕೆ ಶೋಭೆ ತರುವಂಥದ್ದಲ್ಲ ಎಂದು ಖಂಡಿಸಿದ್ದಾರೆ. ಮೈಸೂರಿನಲ್ಲಿ ಗಲಾಟೆ ಪ್ರಕರಣದಲ್ಲಿ ಪಿಎಫ್‌ಐ ಮೇಲಿನ ೨೦೦ ಪ್ರಕರಣ ರದ್ದು ಮಾಡಿದ್ದಾರೆ. ಕೇರಳದಿಂದ ಬಂದು ಗಲಾಟೆ ಮಾಡಿದವರ ಕೇಸ್ ವಾಪಸ್ ಪಡೆದಿದ್ದಾರೆ. ಹುಬ್ಬಳ್ಳಿಯಲ್ಲಿ ಗಲಾಟೆ ಮಾಡಿದವರನ್ನು ಅಮಾಯಕರು ಎಂದು ತನ್ವೀರ್ ಸೇಠ್ ಬರೆದ ಪತ್ರಕ್ಕೆ ಕಾಂಗ್ರೆಸ್ ಸರ್ಕಾರ ಸ್ಪಂದಿಸಿತ್ತು. ಮುಸ್ಲಿಮರ ಓಲೈಕೆಗಾಗಿಯೇ ಕಾಂಗ್ರೆಸ್ ದ್ವೇಷಕ್ಕಾಗಿ ಪ್ರಕರಣ ರೀ ಓಪನ್ ಮಾಡಿದ್ದಾರೆ. ಇದು ಅತ್ಯಂತ್ರ ಕ್ರೂರವಾದುದು ಎಂದು ಖಂಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಪೊಲೀಸರು ಬಂಧಿಸಿರುವ ಶ್ರೀಕಾಂತ ಅವರಿಗೆ ಈಗ ೭೦ ವರ್ಷ. ಅಂಥವರನ್ನು ಜೈಲಿಗೆ ಕ್ರಮ ಕೈಗೊಳ್ಳುವುದೇ? ಇಂತಹ ಉದ್ದೇಶ ಪೂರ್ವಕ ಕ್ರಮವನ್ನು ಶ್ರೀರಾಮ ಸೇನೆ ಖಂಡಿಸುತ್ತದೆ. ಕಾನೂನು ರೀತಿ ಹೋರಾಟವನ್ನೂ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.