ಫಯಾಜ್ ಗೆ ಗಲ್ಲು ಶಿಕ್ಷೆಯಾಗಲಿ

Advertisement

ಕುಳಗೇರಿ ಕ್ರಾಸ್: ಪ್ರಾಣ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಮಾಡುವ ನಮ್ಮ ಭಾರತ ದೇಶದಲ್ಲಿ ಪ್ರಾಣ ತೆಗೆಯುವ ಹಕ್ಕಿಲ್ಲ. ಅಂತದರಲ್ಲಿ ಒಬ್ಬ ಭಾರತೀಯ ಮಹಿಳೆಯನ್ನ ಕೊಂದು ಕಾನೂನು ಕೈಗೆತ್ತಿಕೊಂಡ ಧುರುಳ ಫಯಾಜ್‌ಗೆ ಗುಂಡಿಕ್ಕಿ ಕೊಲ್ಲಬೇಕು ಎಂದು ಮಾಜಿ ತಾಪಂ ಸದಸ್ಯ ಅಂದಾನಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನೇಹಾ ಹಿರೇಮಠ ಅವರನ್ನ ಕೊಂದ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ ಹಿಂದೂ ಕಾರ್ಯಕರ್ತರು ಜಂಗಮ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿ ಉಪತಹಸಿಲ್ದಾರ್ ಬಿ ಎಸ್ ಕೊಪ್ಪಳ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಮೊಂಬತ್ತಿ ಹಚ್ಚಿ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಮೌನ ಆಚರಿಸಲಾಯಿತು.

ಬಾಂಡ್‌ರೈಟರ್ ಸಿದ್ಧಲಿಂಗಯ್ಯ ಹಿರೇಮಠ ಮಾತನಾಡಿ ಸಾರ್ವಜನಿಕ ಸ್ಥಳದಲ್ಲಿ ಕೊಲೆ ಮಾಡಿದ ಫಯಾಜ್‌ನನ್ನು ಸಾರ್ವಜನಿಕ ಸ್ಥಳದಲ್ಲೇ ನೇಣಿಗೆ ಹಾಕಬೇಕು ಎಂದು ಒತ್ತಾಯಿಸಿದರು. ಹಿಂದೂ ಕಾರ್ಯಕರ್ತ ಈರಣ್ಣ ಹುನಗುಂದ ಮಾತನಾಡಿ ಹಿಂದೂಗಳು ಒಗ್ಗಟ್ಟಾಗಬೇಕು ಸಮಾಜದಲ್ಲಿ ನಡೆಯುವ ಅನ್ಯಾಯ ತಡೆಯದಿದ್ದರೆ ನಮ್ಮೆಲ್ಲರಿಗೂ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.

ವಕೀಲ ವೀರೇಶ ಹೋಳಿ ಮಾತನಾಡಿ ಕಾನೂನನ್ನೇ ಕೈಗೆತ್ತಿಗೊಂಡ ಆರೋಪಿ ಫಯಾಜ್ ಪರ ಯಾರೂ ವಕಾಲತ್ತು ವಹಿಸಬಾರದು ಎಂದು ವಕೀಲರಲ್ಲಿ ಮನವಿ ಮಾಡಿದರು. ಪ್ರವೀಣ ಹುಳ್ಳಿ ಮಾತನಾಡಿ ಬರಿ ಶ್ರದ್ಧಾಂಜಲಿ ಆಚರಿಸೋದಲ್ಲ ಇಂಥ ಫಾಗಲ್ ಪ್ರೇಮಿಗಳನ್ನ ತುಂಡು ತುಂಡಾಗಿ ಕತ್ತರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದಯ್ಯ ಹಿರೇಮಠ, ಆರ್ ಎಂ ಶಿಲವಂತಮಠ, ಎಂ ಎಸ್ ಮೇಟಿ, ಪಂಚಯ್ಯ ಹಿರೇಮಠ, ನೂರಂದಯ್ಯ ಮೇಟಿಮಠ, ಶಿವಮೂರ್ತಿ ಹಿರೇಮಠ, ಚನ್ನಬಸಪ್ಪ ಮೆಣಸಗಿ, ಅಂದಾನಗೌಡ ಪಾಟೀಲ, ವೆಂಕಣ್ಣ ಹೊರಕೇರಿ, ಮಾರುತಿ ತಳವಾರ, ವಿರೇಶ ಹೋಳಿ, ಈರಣ್ಣ ಹುನಗುಂದ, ಪ್ರಧೀಪ ಮೇಟಿ, ಬಿ ಜಿ ಪಟ್ಟಣಶೆಟ್ಟಿ, ವಿರುಪಾಕ್ಷ ಮಿಟ್ಟಲಕೋಡ, ಪ್ರವೀಣ ಹುಳ್ಳಿ, ಸುನಿಲ ಲೋಕಾಪೂರ, ಮಲ್ಲು ಬಡಕಪ್ಪನವರ, ಸಿಂದೂರಲಕ್ಷ್ಮಣ ಲೋಕಾಪೂರ, ರಾಘು ರೂಡ್ಗಿ, ಚಂದ್ರು ಕಂಬಾರ, ಮಹಾಂತೇಶ ತಿಮ್ಮಾಪೂರ, ಪ್ರಕಾಶ ಕಾರಿ, ಶಿವು ಹುಳ್ಳಿ, ಸಂಗಮೇಶ, ಸುಭಾಸ, ಮಳಿಯಪ್ಪ, ಮುತ್ತು, ಸಂಜು ಸೇರಿದಂತೆ ಗ್ರಾಮಸ್ಥರು ಹಿಂದೂ ಕಾರ್ಯಕರ್ತರು ಇದ್ದರು.