ಬಜರಂಗ ದಳ ನಿಷೇಧದ ಬಗ್ಗೆ ಜಗದೀಶ ಶೆಟ್ಟರ ನಿಲುವೇನು

ಪ್ರಲ್ಹಾದ್ ಜೋಶಿ
Advertisement

ಹುಬ್ಬಳ್ಳಿ : ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಮಾಡುವುದಾಗಿ ಹೇಳಿದೆ. ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರೆ ಸಾಲದು ಜಗದೀಶ ಶೆಟ್ಟರ ತಮ್ಮ ನಿಲುವು ಏನು ಎಂಬುದನ್ನು ಬಹಿರಂಗವಾಗಿ ಘೋಷಿಸಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡ್ತೇನೆ ಎಂದರೆ ಏನರ್ಥ ಎಂದು ಪ್ರಶ್ನಿಸಿದ ಅವರು, ಶೆಟ್ಟರ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿಕೆ ನೀಡುವುದು ಬಿಟ್ಟು, ತಮ್ಮ ನಿಲುವು ಏನು ಎಂಬುದನ್ನು ಬಹಿರಂಗಪಡಿಸಲಿ ಎಂದು ಒತ್ತಾಯ ಮಾಡಿದರು.
ಬಜರಂಗ ದಳ ನಿಷೇಧ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿ ಅದಕ್ಕೆ ಜನಾಕ್ರೋಶ ವ್ಯಕ್ತವಾದ ಬಳಿಕ ಕಾಂಗ್ರೆಸ್ ನಾಯಕರು ತೇಪೆ ಹಚ್ಚುವ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪಶ್ಚಾತಾಪ ಪಟ್ಟವರಂತೆ ಮಾತನಾಡುತ್ತಿದ್ದಾರೆ. ಅವರು ಬರೀ ಪಶ್ಚಾತಾಪ ಪಟ್ಟರಷ್ಟೇ ಸಾಲದು. ಅವರು ಕೆಣಕಿರುವುದು ಬಜರಂಗಬಲಿಯನ್ನು ಅದಕ್ಕಾಗಿ ಹನುಮಾನ್ ದೇವಸ್ಥಾನಕ್ಕರ ಹೋಗಿ ಪೂಜೆ ಮಾಡಿ ಪಾಪ ಕಳೆದುಕೊಳ್ಳಲಿ ಎಂದು ಪ್ರಲ್ಹಾದ ಜೋಶಿ ಸಲಹೆ ನೀಡಿದರು.