ಬಲಿಷ್ಠ ಭಾರತ ನಿರ್ಮಾಣಕ್ಕೆ ಮುನ್ನುಡಿ ಬರೆದ ಮುತ್ಸದ್ದಿ ಆಡಳಿತಗಾರ

Advertisement

ಬೆಂಗಳೂರು: ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಅವರ 102ನೇ ಜನ್ಮದಿನದ ಅಂಗವಾಗಿ ನಾಡಿನ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿ. ದೇಶದ ಪ್ರಗತಿಗೆ ಮಾಜಿ ಪ್ರಧಾನಿಯವರ ಕೊಡುಗೆಯನ್ನು ಸ್ಮರಿಸಿದ್ದಾರೆ. ರಾಜಕೀಯ ಹಾಗೂ ಆರ್ಥಿಕ ಸುಧಾರಣೆಯ ತಜ್ಞ ಚಾಣಕ್ಯ, ಮಾರ್ಗದರ್ಶಿ ಎಂದು ಪಿವಿಎನ್‌ ಕರೆಸಿಕೊಂಡಿದ್ದರು. ರಾಜಕೀಯದ ಚದುರಂಗದಾಟದಲ್ಲಿ ಇಡಬಹುದಾದ ಎಲ್ಲಾ ನಡೆ ಇಟ್ಟರು. ದಕ್ಷಿಣ ಭಾರತದ ಮೊದಲ ಪ್ರಧಾನಿ ಇಟ್ಟ ಹಲವು ನಡೆಗಳಿಗೆ ಎದುರಾಳಿಗಳು ಕೂಡಾ ಉತ್ತರ ಭಾರತದ ದಿಗ್ಗಜ ನಾಯಕರೇ ತಲೆದೂಗಿದ್ದರು. ೧೯೯೧ ರಲ್ಲಿ ರಾಜೀವ್ ಗಾಂಧಿಯವರ ಮರಣಾನಂತರ ನಡೆದ ಚುನಾವಣೆಯಲ್ಲಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ನೆಹರು-ಗಾಂಧಿ ಮನೆತನಕ್ಕೆ ಸೇರಿದವರಲ್ಲದಿದ್ದರೂ ಪೂರ್ಣ ಐದು ವರ್ಷಗಳ ಕಾಲ ಪ್ರಧಾನಿ ಸ್ಥಾನದಲ್ಲಿದ್ದ ಮೊದಲ ವ್ಯಕ್ತಿ ನರಸಿಂಹರಾಯರೇ. ಸಾಮಾನ್ಯವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸದಿದ್ದ ನರಸಿಂಹರಾವ್ ಅವರಿಗೆ ಸುದ್ದಿ ಮಾಧ್ಯಮದವರು ಇಟ್ಟ ಅಡ್ಡಹೆಸರು “ಚಾಣಕ್ಯ”! ರಾಜಕೀಯದಿಂದ ನಿವೃತ್ತಿ ಹೊಂದಿದ ನಂತರ ಭಾರತೀಯ ರಾಜಕೀಯದ ಬಗೆಗೆ “ದ ಇನ್‌ಸೈಡರ್” ಎಂಬ ಇಂಗ್ಲಿಷ್ ಕಾದಂಬರಿಯನ್ನು ಬರೆದರು. ನರಸಿಂಹರಾವ್ ಅವರ ಆತ್ಮಕಥನ ಇನ್ ಸೈಡರ್ ಕೃತಿ ಬಿಡುಗಡೆ ಮಾಡಿದ್ದು ಅಟಲ್ ಬಿಹಾರಿ ವಾಜಪೇಯಿ ಎಂಬುದು ವಿಶೇಷ. ಹೊಸ ಆರ್ಥಿಕ ನೀತಿ ತಂದು ಭಾರತದ ಸುಧಾರಣೆಯತ್ತ ಕೊಂಡೊಯ್ಯಲು ಪ್ರಥಮ ಹೆಜ್ಜೆ ಇರಿಸಿದರು. ಮಾನವ ಸಂಪನ್ಮೂಲ ಅಭಿವೃದ್ದಿ ಇಲಾಖೆ ಅಸ್ತಿತ್ವಕ್ಕೆ ಬಂತು. ನವೋದಯ ವಿದ್ಯಾಲಯ ಯೋಜನೆ ರಾವ್‌ರ ಕೊಡುಗೆ. ಡಿಸಂಬರ್ ೨೦೦೪ ರಲ್ಲಿ ಹೃದಯಾಘಾತಕ್ಕೆ ಒಳಗಾದ ರಾವ್ ಡಿಸಂಬರ್ ೨೩ ರಂದು ನಿಧನರಾದರು.

ಸಿದ್ದರಾಮಯ್ಯ: ದೇಶದ ಆರ್ಥಿಕತೆಯನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸುವ ಮೂಲಕ ಬಲಿಷ್ಠ ಭಾರತ ನಿರ್ಮಾಣಕ್ಕೆ ಮುನ್ನುಡಿ ಬರೆದ ಮುತ್ಸದ್ದಿ ಆಡಳಿತಗಾರ, ಮಾಜಿ ಪ್ರಧಾನಿ ಪಿ.ವಿ ನರಸಿಂಹರಾವ್ ಅವರ ಜನ್ಮದಿನದಂದು ಅವರನ್ನು ಗೌರವದಿಂದ ನೆನೆಯುತ್ತೇನೆ. ನರಸಿಂಹರಾವ್ ಅವರ ದಕ್ಷತೆ, ದೂರದೃಷ್ಟಿಯ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಲಿ ಎಂದಿದ್ದಾರೆ.

ಡಿ. ಕೆ. ಶಿವಕುಮಾರ: ಭಾರತದ ಆರ್ಥಿಕ ಸುಧಾರಣೆಯ ಹರಿಕಾರ, ದೇಶದ ಹೆಮ್ಮೆಯ ಮಾಜಿ ಪ್ರಧಾನಿ ಶ್ರೀ ಪಿ.ವಿ.ನರಸಿಂಹರಾವ್ ಅವರ ಜನ್ಮದಿನದಂದು ಶತಕೋಟಿ ನಮನಗಳನ್ನು ಸಲ್ಲಿಸುತ್ತೇನೆ. ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯರಾಗಿದ್ದ ನರಸಿಂಹ ರಾವ್ ಅವರು, ಪ್ರಧಾನಿಯಾಗಿ ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆಗಳು ಸ್ಮರಣೀಯ ಎಂದಿದ್ದಾರೆ.

ಎಂ. ಬಿ. ಪಾಟೀಲ: ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡು, ಸ್ವಾತಂತ್ರ್ಯಾ ನಂತರ ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳಾಗಿ, ಕೇಂದ್ರ ಸಚಿವರಾಗಿ, ಆನಂತರ ಪ್ರಧಾನಿಗಳೂ ಆಗಿದ್ದ ಪಿ.ವಿ. ನರಸಿಂಹರಾವ್ ಅವರ ಜನ್ಮದಿನದಂದು ಗೌರವದ ನಮನಗಳು. ತಮ್ಮ ಅಧಿಕಾರಾವಧಿಯಲ್ಲಿ ‘ಮುಕ್ತ ಆರ್ಥಿಕ ನೀತಿ’ಯಿಂದ ದೇಶದ ಆರ್ಥಿಕತೆಗೆ ಹೊಸ ಚೈತನ್ಯ ತುಂಬಿದ್ದು ಅನನ್ಯ ಸಾಧನೆಯಾಗಿದೆ ಎಂದಿದ್ದಾರೆ.