ಬಾಲಕನಿಗೆ ಪಿಎಸ್‌ಐ ಕಪಾಳಮೋಕ್ಷ: ಸಾರ್ವಜನಿಕರಿಂದ ಪ್ರತಿಭಟನೆ

Advertisement

ಕುಷ್ಟಗಿ: ಬಾಲಕನೊಬ್ಬನಿಗೆ ಪಿಎಸ್‌ಐ ಮುದ್ದುರಂಗಸ್ವಾಮಿ ಕಪಾಳಮೋಕ್ಷ ಮಾಡಿ, ಬೂಟ್ ಕಾಲಿನಿಂದ ಒದ್ದಿದಿದ್ದಾರೆ. ಅಲ್ಲದೇ ಅವರು ಕಾಂಗ್ರೆಸ್ ಏಜೆಂಟರAತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ದಿಢೀರ್ ಪ್ರತಿಭಟನೆ ನಡೆಸಿದ ಪ್ರಸಂಗ ಶುಕ್ರವಾರ ಜರುಗಿತು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಮಾಜ ಸೇವಕ ವಿಜಯಕುಮಾರ್, ರವಿಕುಮಾರಸ್ವಾಮಿ ಮದ್ದಾನಿ ಹಿರೇಮಠ ಹಾಗೂ ಬೆಂಬಲಿಗರು ಧಿಕ್ಕಾರ ಕೂಗಿ ಪಿಎಸ್‌ಐ ಅಮಾನತು ಮಾಡುವಂತೆ ಒತ್ತಾಯಿಸಿದರು. ಸಿಪಿಐ ಯಶವಂತ ಬಿಸರಳ್ಳಿ, ಅಪರಾಧ ವಿಭಾಗದ ಪಿಎಸ್‌ಐ ಮಾನಪ್ಪ ವಾಲ್ಮೀಕಿ ಸಮಾಜಾಯಿಷಿ ನೀಡಿದರೂ ಪ್ರತಿಭಟನಾಕಾರರು ಜಗ್ಗಲಿಲ್ಲ.
ಘಟನೆಯ ವಿವರ: ರವಿಕುಮಾರಸ್ವಾಮಿ ಮದ್ದಾನಿ ಹಿರೇಮಠ ಅವರ ಮಗ ನಂದೀಶ್ ಬೆಂಗಳೂರಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾನೆ. ಶುಕ್ರವಾರ ಬೆಳಿಗ್ಗೆ ಬೆಂಗಳೂರಿನಿAದ ಕುಷ್ಟಗಿಯ ಮನೆಗೆ ಆಗಮಿಸಿದ್ದ ಸಂದರ್ಭದಲ್ಲಿ, ತನ್ನ ಅಜ್ಜಿಗಾಗಿ ಎಳನೀರು ತರಲು ಬೈಕ್ ತೆಗೆದುಕೊಂಡು ಬಂದಿದ್ದಾನೆ. ಕಂದಕೂರು ಜ್ಯೂವೆಲರ್ಸ್ ಬಳಿ ಎಳನೀರು ಅಂಗಡಿ ಮುಂದೆ ಆ ಬೈಕ್ ನಿಲ್ಲಿಸಿದ್ದು, ಅದೇ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಪಿಎಸ್‌ಐ ವಾಹನದಿಂದ ಇಳಿದು ಬಾಲಕನಿಗೆ ಕಪಾಳಮೋಕ್ಷ ಮಾಡಿದ್ದಲ್ಲದೆ, ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಬೂಟ್‌ನಿಂದ ಒದ್ದಿದ್ದಾರೆ ಎಂದು ರವಿಕುಮಾರ್ ಮದ್ದಾನಿ ಹಿರೇಮಠ ಹಾಗೂ ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ನನ್ನ ಮಗ ತಪ್ಪು ಮಾಡಿದ್ದರೆ ಅವನಿಗೆ ಬುದ್ಧಿವಾದ ಹೇಳಿ ದಂಡ ಹಾಕಬೇಕಾಗಿತ್ತು. ಅದನ್ನು ಬಿಟ್ಟು ಕಪಾಳಕ್ಕೆ ಹೊಡೆದಿದ್ದಲ್ಲದೆ, ಠಾಣೆಗೆ ಕರೆದುಕೊಂಡು ಹೋಗಿ ಒದ್ದಿದ್ದು ತೀರಾ ಖಂಡನೀಯವಾಗಿದೆ. ಹೀಗಾಗಿ ಪಿಎಸ್‌ಐ ಅವರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ಅ.೨೧ ರಂದು ಕುಷ್ಟಗಿ ಬಂದ್‌ಗೆ ಕರೆ ನೀಡಲಾಗಿದೆ ಎಂದರು.
ಪಿಎಸ್‌ಐ ಮುದ್ದುರಂಗಸ್ವಾಮಿ ಮಾತನಾಡಿ, ಯುವಕರು ಬೈಕ್ ಸೈಲೆನ್ಸರ್ ಕಿತ್ತು ರ‍್ರಾಬರ‍್ರಿ ಓಡಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಯುವಕ ಕಾಲೇಜು ಅಕ್ಕಪಕ್ಕ ಬೈಕ್ ಸೈಲೆನ್ಸರ್ ಕಿತ್ತು ಕರ್ಕಶ ಸೌಂಡ್ ಮಾಡಿಕೊಂಡು ವಾಹನ ಓಡಿಸುತ್ತಿರುವುದನ್ನು ಗಮನಿಸಿದ್ದೇನೆ. ಸಂಚಾರಿ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ನನಗೆ ಕಾಂಗ್ರೆಸ್, ಬಿಜೆಪಿ ಕಡೆಯವರು ಯಾವುದೂ ಗೊತ್ತಿಲ್ಲ. ನಮಗೂ ಹಾಗೂ ರವಿ ಅಜ್ಜನವರಿಗೂ ಯಾವುದೇ ವೈರತ್ವವಿಲ್ಲ ಎಂದು ಸ್ಪಷ್ಟಪಡಿಸಿದರು.
ಕುಷ್ಟಗಿ ಬಂದ್‌ಗೆ ಅನುಮತಿ ಇಲ್ಲ: ದಿಢೀರ್ ಪ್ರತಿಭಟನೆ ಮಾಡಿದ್ದು ಕಾನೂನು ಉಲ್ಲಂಘನೆಯಾಗಿದೆ. ಕುಷ್ಟಗಿ ಬಂದ್‌ಗೆ ಕರೆ ಕೊಟ್ಟರೆ ಯಾವುದೇ ರೀತಿಯಿಂದ ಅನುಮತಿ ನೀಡುವುದಿಲ್ಲ ಎಂದು ಸಿಪಿಐ ಯಶವಂತ್ ಬಿಸನಳ್ಳಿ ತಿಳಿಸಿದ್ದಾರೆ.
ರವಿಕುಮಾರ ಸ್ವಾಮಿ ಮದ್ದಾನಿ ಹಿರೇಮಠ ಅಭಿಮಾನಿಗಳು ಪ್ರತಿಭಟನೆಯಲ್ಲಿ ಇದ್ದರು.