ಬಿಜೆಪಿಗೆ ೪೦೦ ಸೀಟು ಬರಿ ಬುರುಡೆ

ಖರ್ಗೆ
Advertisement

ಅಮೃತಸರ: `ಬಿಜೆಪಿಗೆ ೪೦೦ ಸೀಟು ಬರೀ ಬುರುಡೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಅವರು ಅಮೃತಸರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಬಿಜೆಪಿ ೨೦೦ ಸೀಟು ದಾಟೋಲ್ಲ. ಕಾಂಗ್ರೆಸ್ ತನ್ನ ಬಲ ಹೆಚ್ಚಿಸಿಕೊಳ್ಳುತ್ತಿರುವಾಗ ಬಿಜೆಪಿಗೆ ೪೦೦ ಸೀಟು ಬರಲು ಹೇಗೆ ಸಾಧ್ಯ? ಬಿಜೆಪಿ ತಮಿಳುನಾಡಿನಲ್ಲಿ ಇಲ್ಲ. ಕೇರಳ ಮತ್ತು ತೆಲಂಗಾಣದಲ್ಲಿ ಇಲ್ಲವೇ ಇಲ್ಲ.ಕರ್ನಾಟಕ ಪ್ರಬಲವಾಗಿಲ್ಲ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಒಡಿಶಾಗಳಲ್ಲಿ ದುರ್ಬಲ. ಹೀಗಿರುವಾಗ ೪೦೦ ಎಲ್ಲಿಂದ ಬರುತ್ತದೆ. ಅಮಿತ್ ಶಾ ಮಾತುಗಳಿಗೆ ಉತ್ತರಿಸಿದ ಅವರು, ನಾನು ರಾಜಕೀಯದಲ್ಲಿ ಚಿಕ್ಕವಯಸ್ಸಿನಿಂದ ಇದ್ದೇನೆ. ಮೋದಿಗೆ ಎಷ್ಟು ವಯಸ್ಸಾಗಿದೆಯೋ ಅಷ್ಟು ರಾಜಕೀಯದಲ್ಲಿದ್ದೇನೆ. ಜೂನ್ ೪ ರ ನಂತರ ಅಮಿತ್ ಶಾ ತಮ್ಮ ಕೆಲಸದ ಬಗ್ಗೆ ಚಿಂತಿಸಬೇಕು. ನಾವು ಜನರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಬಗ್ಗೆ ಭರವಸೆ ನೀಡಿದ್ದೇವೆ. ಅಗ್ನಿಪಥ ಮತ್ತು ನಿರುದ್ಯೋಗ ಬಿಜೆಪಿ ವಿಫಲ ಯೋಜನೆಗಳು. ಕೇಂದ್ರ ಸರ್ಕಾರದಲ್ಲಿ ೩೦ ಲಕ್ಷ ಖಾಲಿ ಹುದ್ದೆಗಳಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಭರ್ತಿ ಮಾಡಲಾಗುವುದು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್ ಪ್ರಭಾವ ಕಂಡಿದ್ದರೆ ಅವರಿಗೆ ನಮ್ಮ ಪಕ್ಷದವರೊಬ್ಬರನ್ನು ಕಳುಹಿಸಿ ಅವರ ಅಭಿಪ್ರಾಯದಲ್ಲಿ ಎಲ್ಲಿ ತಪ್ಪಿದೆ ಎಂಬುದನ್ನು ಹೇಳುತ್ತೇವೆ. ಮಾದಕ ವಸ್ತುಗಳ ದಂಧೆಯನ್ನು ನಿವಾರಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು