ಬಿಜೆಪಿಯಿಂದ ಸಂಪೂರ್ಣ ನಿರ್ಲಕ್ಷದ ಹಿನ್ನೆಲೆಯಲ್ಲಿ ರಾಜಿನಾಮೆ

Advertisement


ಹುಬ್ಬಳ್ಳಿ: ನಾನು ಮೂಲತಃ ರಾಜಕೀಯ ವೃತ್ತಿಯವನಲ್ಲ. ನಮ್ಮ ಸಮಾಜದ ಕುಲಕಸಬು ಉಳಿಯಬೇಕು ಎಂಬ ಹಿನ್ನೆಲೆಯಲ್ಲಿ ರಾಜಕೀಯಕ್ಕೆ ಬಂದಿದ್ದೇನು. ಎಲ್ಲ ಕಾಯಕ ಸಮಾಜಗಳು ನಿರ್ಲಕ್ಷ್ಯಕ್ಕೆ ಒಳಗಾದ ಹಿನ್ನೆಲೆಯಲ್ಲಿ ರಾಜಕೀಯಕ್ಕೆ ಬಂದಿದ್ದೇನು. ಆದರೆ ಬಿಜೆಪಿಯಿಂದ ಸಮಾಜಕ್ಕೆ ಯಾವುದೇ ಉಪಯೋಗವಾಗಿಲ್ಲ.‌ನನನ್ನು ಬಳಸಿಕೊಳ್ಳಲು ಇಲ್ಲ. ಹೀಗಾಗಿ ರಾಜಿನಾಮೆ ನೀಡುತ್ತಿದ್ದೇನೆ ಎಂದು ವಿಶ್ವಕರ್ಮ ಸಮಾಜದ ಮುಖಂಡ, ವಿಧಾನ ಪರಿಷತ್ ಸದಸ್ಯ ಕೆ.ಪಿ. ನಂಜುಂಡ್ಡಿ ಹೇಳಿದರು.
ರಾಜುನಾಮೆ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದಾಗ ಇವರು ಸಮಾಜದ ಉಳಿವಿಗಾಗಿ ಶ್ರಮಿಸುತ್ತಾರೆ ಅಂದುಕೊಂಡಿದ್ದೆ. ಒಂದು ಕಾಲ ಬಿಎಸ್ ವೈ ಜೊತೆ ರಾಜ್ಯ ಪ್ರವಾಸ ಮಾಡಿದ್ದೇನು. ಆಗ ನನಗೆ ವಿಧಾನ ಪರಿಷತ್ ಸದಸ್ಯ ಮಾಡಿದ್ದರು. ಬಿಜೆಪಿ ಯವರು ಕಾಯಕ ಸಮಾಜದ ಸಮಸ್ಯೆಗಳ ಒಂದು ಬೇಡಿಕೆಯನ್ನು ಈಡೇರಿಸಲಿಲ್ಲ. ಬಹಳಷ್ಟು ನೀರಿಕ್ಷೆ ಇಟ್ಟುಕೊಂಡಿದ್ದೇನು. ಸ್ಪಂದಿಸುವ ಕೆಲಸ ಬಿಜೆಪಿ ಮಾಡಲಿಲ್ಲ. ಎಂಎಲ್ ಸಿ ಮಾಡುವುದರಿಂದ ಸಮಾಜಕ್ಕೆ ಏನು ಸಿಗುವುದಿಲ್ಲ. ಅದು ಗೌರವವಷ್ಟೇ, ಕೆಲಸ ಕೇಳಿದಾಗ ಬರೀ ಎಂಎಲ್ ಸಿ ಮಾಡಿದ್ದೇವೆ ಎಂದು ಹೇಳುತ್ತಾ ನಿರ್ಲಕ್ಷ ಮಾಡಿದ್ದಾರೆ ಎಂದರು.
ನಮ್ಮ ಸಮಾಜ ಎರಡು ವರ್ಷ ದಿಂದ ರಾಜಿನಾಮೆ ಸಲ್ಲಿಸಲು ಒತ್ತಾಯ ಮಾಡಿದ್ದರು. ನಾನು ಪಕ್ಷ ಮತ್ತು ಮೋದಿ ಅವರ ವಿರುದ್ಧ ಮಾತನಾಡಿಲ್ಲ. ನನ್ನನ್ನು ಬಳಸಿಕೊಂಡಿಲ್ಲ ಎಂದು ನಾನು ಪಕ್ಷ ಕೈ ಬಿಟ್ಟಿದ್ದೇನೆ. ನಾನು ನಮ್ಮ ಕಾಯಕ ಸಮಾಜ ಗಟ್ಟಿ ಮಾಡಿ ಎಂದು ಕೇಳಿಕೊಂಡಿದ್ದೇನೆ. ಆದರೆ ಯಾರು ಗಮನಹರಿಸಲಿಲ್ಲ. ಸಾವಿರ ಕೋಟಿ ಅನುದಾನ ಸಮಾಜಗಳಿಗೆ ಕೊಡುವುದಾಗಿ ಹೇಳಿ ಕೊಡಲಿಲ್ಲ. ಸಚಿವ ಸ್ಥಾನವನ್ನು ಕೂಡ ಕೊಡಲಿಲ್ಲ. ಈ ಎಲ್ಲ ಕಾರಣಗಳಿಂದ ಬಿಜೆಪಿ ಬಿಡುತ್ತಿದ್ದೇನೆ ಎಂದರು.

ನಾಳೆ ಕಾಂಗ್ರೆಸ್ ಸೇರ್ಪಡೆ: ಏ.೨೪ ರಂದು ಕೆಪಿಸಿಸಿ ಕಚೇರಿ ಬೆಳಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಕಾಂಗ್ರೆಸ್ ಸೇರುತ್ತಿದ್ದೇನೆ ಎಂದು ನಂಜುಂಡ್ಡಿ‌ ತಿಳಿಸಿದರು.