ಬಿಜೆಪಿ ನಾಯಕರಿಂದ ನಮ್ಮ ಬೆಂಬಲಿಗರಿಗೆ ಐಟಿ, ಇಡಿ ದಾಳಿ ಬೆದರಿಕೆ

ಜಗದೀಶ ಶೆಟ್ಟರ್‌
Advertisement

ಹುಬ್ಬಳ್ಳಿ: ಸೋಲಿನ ಭೀತಿಯಲ್ಲಿರುವ ಬಿಜೆಪಿ ನಾಯಕರು ನಮ್ಮ ಬೆಂಬಲಿಗರಿಗೆ ಆದಾಯ ತೆರಿಗೆ ಇಲಾಖೆ, ಇಡಿ ದಾಳಿ ಬೆದರಿಕೆ ಹಾಕುತ್ತಿದ್ದಾರೆ. ಇಂಥದ್ದಕ್ಕೆಲ್ಲ ನಾನಾಗಲಿ, ನಮ್ಮ ಬೆಂಬಲಿಗರಾಗಲಿ ಹೆದರಲ್ಲ. ಪ್ರತಿ ಬಾರಿಗಿಂತ ಈ ಬಾರಿ ಹೆಚ್ಚನ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಹು- ಧಾ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ, ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಜಗದೀಶ ಶೆಟ್ಟರ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ಹಲವು ಬಿಜೆಪಿ ನಾಯಕರು ಫೋನ್ ಮಾಡಿ ನಮ್ಮ ಬೆಂಬಲಿಗೆ ದಮ್ ಕೊಟ್ಟಿದ್ದಾರೆ. ಯಾರ್ಯಾರು ನನ್ನ ಪರವಾಗಿ ಕೆಲಸ ಮಾಡುತ್ತಿದ್ದಾರೆ, ಬಿಜೆಪಿ ತೊರೆದು ಯಾರ್ಯಾರು ನನ್ನೊಂದಿಗೆ ಕಾಂಗ್ರೆಸ್ ಸೇರಿದ್ದಾರೊ, ನನ್ನೊಂದಿಗೆ ಕೆಲಸ ಮಾಡುತ್ತಿರುವವರಿಗೆ ಬೆದರಿಕೆ ಹಾಕುತ್ತಿದ್ದಾರೆ. ಯಾವದೇ ದಾಳಿ ನಡೆಸಲಿ. ನಾನ್ಯಾವುದೇ ಅಕ್ರಮ ವ್ಯವಹಾರ ನಡೆಸಿಲ್ಲ. ಕಾನೂನು ಬದ್ಧ ಮತ್ತು ಪಾರದರ್ಶಕ ರೀತಿ ವ್ಯವಹಾರ, ರಾಜಕಾರಣ ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದರು.
ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಮುಗಿಸಲು ಬಿ.ಎಲ್. ಸಂತೋಷ ಹೇಗೆ ವ್ಯವಸ್ಥಿತ ತಂತ್ರ ಮಾಡಿದ್ದಾರೆ ಎಂಬುದು ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ಪತ್ರಿಕಾ ವರದಿಯೇ ಸಾಕ್ಷಿ. ಆ ವರದಿ ವೈರಲ್ ಆದ ಬಳಿಕ ಸುಳ್ಳು, ಫೇಕ್ ಎಂದು ಹಣೆ ಪಟ್ಟಿ ಕಟ್ಟಿದ್ದಾರೆ. ದೂರು ದಾಖಲಿಸಿದ್ದೇವೆ ಎನ್ನುತ್ತಿದ್ದಾರೆ. ವೈರಲ್ ಆಗಿರುವುದು ಪತ್ರವಲ್ಲ. ಪತ್ರಿಕಾ ವರದಿ. ಆ ವರದಿ ಯಾವ ಪತ್ರಿಕೆಯಲ್ಲಿ ಪ್ರಕಟವಾಗಿದೆ ಎಂಬುದನ್ನು ಪತ್ತೆ ಮಾಡಲು ಹೋಗಿಲ್ಲ. ಇದರ ಅರ್ಥ ಇಷ್ಟೇ. ಬಿ.ಎಲ್. ಸಂತೋಷ ಮಾತನಾಡಿದ್ದಾರೆ. ಈಗ ಅದಕ್ಕೆ ತೇಪೆ ಹಚ್ಚುವ ಕೆಲಸ ನಡೆದಿದೆ ಎಂದು ಹೇಳಿದರು.
ಪಕ್ಷ ಮುಖ್ಯವಾದರೆ ಮೋದಿ ಯಾಕೆ ಪ್ರಚಾರಕ್ಕೆ ಬಂದ್ರು?
ಬಿಜೆಪಿಯವರು ಮಾತೆತ್ತಿದರೆ ಪಕ್ಷ ಮುಖ್ಯ. ವ್ಯಕ್ತಿ ಅಲ್ಲ ಎಂದು ಸಿದ್ಧಾಂತದ ಮಾತನಾಡುತ್ತಾರೆ. ವ್ಯಕ್ತಿ ಮುಖ್ಯ ಆಗಿಲ್ಲದೇ ಇದ್ದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆತಂದು ರೋಡ್ ಶೋ ನಡೆಸಿದರು. ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ ರೋಡ್ ಶೋ ಮಾಡಿಸಿದರಲ್ಲ. ಪಕ್ಷ ಎನ್ನುವವರು ಪಕ್ಷದ ಹೆಸರು ಹೇಳಿಕೊಂಡು ಪ್ರಚಾರ ಮಾಡಬೇಕಿತ್ತಲ್ಲ. ಅವರಿಗೆ ಆ ತಾಕತ್ ಇಲ್ಲದೇ ಇದ್ದುದರಿಂದ ಮೋದಿ ಅವರಿಗೆ ಮೊರೆ ಹೋಗಿ ರೋಡ್ ಶೋ ಮಾಡಿಸಿದ್ದಾರೆ. ಅಮಿತ್ ಶಾ ಪ್ರಚಾರ ಮಾಡಿದ್ದಾರೆ. ಅವರು ವ್ಯಕ್ತಿ ಅಲ್ಲವೇ? ಎಂದು ಪ್ರಶ್ನಿಸಿದರು.
ಅಷ್ಟೇ ಏಕೆ ಪಕ್ಷ ಪಕ್ಷ ಮುಖ್ಗ ಎಂದು ಬಡಿದುಕೊಳ್ಳುವವರು ಅ್ವಲ್ಪ ಹಿಂದಕ್ಕೆ ತಿರುಗಿ ನೋಡಲಿ. ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ ಅವರು ವ್ಯಕ್ತಿಗಳಲ್ಲವೇ ಅವರ ಶಕ್ತಿಯಿಂದಲೇ ಬಿಜೆಪಿ ದೇಶದಲ್ಲಿ ನೆಲೆ ಕಂಡಿದಲ್ಲವೇ? ಯಡಿಯೂರಪ್ಪ ಯಾರು? ಅವರೂ ವ್ಯಕ್ತಿಯೇ. ವಯಸ್ಸಾಯಿತು ಎಂದು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದವರು. ಈಗ ಪ್ರಚಾರಕ್ಕೆ ಯಾಕೆ ಅವರನ್ನು ದುಂಬಾಲು ಬಿದ್ದು ಕರೆದೊಯ್ಯುತ್ತಿದ್ದಾರೆ. ಅವರ ಮೇಲೆ ಒತ್ತಡ ಹಾಕಿ ಹೇಳಿಕೆ ನೀಡಿಸುತ್ತಿದ್ದಾರೆ. ಶಕ್ತಿ ಅಲ್ಲದೇ ಇದ್ದರೆ, ವ್ಯಕ್ತಿ ಮುಖ್ಯ ಅಲ್ಲದೇ ಇದ್ದರೆ ಯಾಕೆ ಕರೆದುಕೊಂಡು ಓಡಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಕೊನೆ ಚುನಾವಣೆ ಘೋಷಣೆ ಪೂಋವ ನಿರ್ಧಾರ
ನಾನು ಈ ಬಾರಿಯ ಚುನಾವಣೆಗೆ ಸ್ಪರ್ಧಿಸುವುದು ಕೊನೆಯದು ಎಂಬ ನಿರ್ಧಾರ ಪೂರ್ವ ನಿರ್ಧಾರಿತವಾದುದು. ಈಗ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ, ಚುನಾವಣೆ ಸಂದರ್ಭದಲ್ಲಿ ನಿರ್ಧಾರ ಮಾಡಿದ್ದಲ್ಲ.
ಆದರೆ, ಸಕ್ರಿಯ ರಾಜಕಾರಣದಲ್ಲಿ ಮುಂದಿನ ಬಹುಕಾಲ ಇರುತ್ತೇನೆ. ಶಕ್ತಿ ಇರುವವರೆಗೂ ಕಾಂಗ್ರೆಸ್ ಪಕ್ಷಕ್ಕೆ ದುಡಿಯುತ್ತೇನೆ ಎಂದರು.