ಬಿಜೆಪಿ ಬಾಡಿಗೆ ಮನೆ ಕಾಂಗ್ರೆಸ್ ಸ್ವಂತ ಮನೆ

ಗೋಪಾಲಕೃಷ್ಣ
Advertisement

ಚಿತ್ರದುರ್ಗ: ಬಿಜೆಪಿ ಬಾಡಿಗೆ ಮನೆ ಕಾಂಗ್ರೆಸ್ ಸ್ವಂತ ಮನೆ. ಬಾಡಿಗೆ ಮನೆ ಬಿಟ್ಟಿದ್ದೇನೆ. ಸ್ವಂತ ಮನೆಗೆ ಬಂದಿದ್ದೆನೆ. ಗೋ ಬ್ಯಾಕ್ ಗೋಪಾಲಕೃಷ್ಣ ಎಂದು ಹೇಳಲು ನೈತಿಕತೆ ಯಾರಿಗೂ ಇಲ್ಲ. ಕೈ ನಾಯಕರು ಟಿಕೆಟ್ ನೀಡಿದರೆ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಕೂಡ್ಲಿಗೆ ಶಾಸಕರಾಗಿದ್ದ ಎನ್.ವೈ.ಗೋಪಾಲಕೃಷ್ಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಶನಿವಾರ ಚಿತ್ರದುರ್ಗ ನಗರದ ದವಳಗಿರಿ ಬಡಾವಣೆಯ ಅವರ ನಿವಾಸದಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಮೂವತ್ತು ವರ್ಷ ಶಾಸಕನಾಗಿ ಚಿತ್ರದುರ್ಗ ಜಿಲ್ಲೆ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಕೂಡಾ ಕೆಲಸ ಮಾಡಿದ್ದೇನೆ. ಕೂಡ್ಲಿಗಿ ಕ್ಷೇತ್ರದ ಶಾಸಕನಾಗಿ ಕೆಲಸ ಮಾಡಿದ್ದೇನೆ. ನಾನು ಕೊಟ್ಟ ಮಾತನ್ನು ಕ್ಷೇತ್ರದಲ್ಲಿ ಉಳಿಸಿಕೊಂಡಿದ್ದೇನೆ. ವೈಯಕ್ತಿಕ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದು ಅದು ಸಹ ಅಂಗೀಕಾರವಾಗಿದೆ. ಕೆಲವು ನೋವುಗಳನ್ನು ವರಿಷ್ಠರ ಮುಂದೆ ಹೇಳಿದ್ದೇನೆ ಎಂದರು.
ಮೊಳಕಾಲ್ಮೂರು ಕ್ಷೇತ್ರಕ್ಕೆ ಬಂದ ಮೇಲೆ ಬೆಳಿಗ್ಗೆಯಿಂದ ಜನರು ಬಂದು ನಿಮ್ಮ ಅವಶ್ಯಕತೆ ಇದೆ ಎಂದು ಹೇಳುತ್ತಿದ್ದಾರೆ. ಬೇರೆ ಕ್ಷೇತ್ರಗಳಂತೆ ನಮ್ಮ ಕ್ಷೇತ್ರ ಅಭಿವೃದ್ಧಿ ಮಾಡಬೇಕು ಎಂದು ಹೇಳುತ್ತಿದ್ದಾರೆ. ಕ್ಷೇತ್ರಕ್ಕೆ ಬರಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಬಿಜೆಪಿಗೆ ವಾಪಸ್ ಹೋಗುವ ಪ್ರಶ್ನೆ ಉದ್ಬವಿಸಲ್ಲ. ಕ್ಷೇತ್ರದ ದೃಷ್ಠಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಹೋಗಬೇಕು ಎಂದುಕೊAಡಿದ್ದೆನೆ. ಹೈಕಮಾಂಡ್ ಅವಕಾಶ ಕೊಟ್ಟರೇ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೆನೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಇರುವ ಎಲ್ಲರೂ ಕೂಡಾ ನನ್ನ ಸ್ನೇಹಿತರು. ಘರ್ ವಾಪ್ಸಿ ಎಂದ ಹೇಳುತ್ತಿದ್ದರು. ಕೂಡ್ಲಿಗಿ, ಮೊಳಕಾಲ್ಮೂರು ಕ್ಷೇತ್ರದಲ್ಲಿ ಅನುಕೂಲ ಆಗುತ್ತದೆ ಎಂದಿದ್ದರು. ಎರಡನೇ ಪಟ್ಟಿ ಬಿಡುಗಡೆ ಆಗುವ ವೇಳೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಕೆಲ ಕಾಂಗ್ರೆಸ್ ಸ್ನೇಹಿತರ ಸಂಪರ್ಕ ಇದೆ. ಗೋಪಾಲಕೃಷ್ಣ ಬೇಕು ಎಂದು ಹೇಳುವ ಕೆಲ ನಾಯಕರು ಇದ್ದಾರೆ. ನಾಳೆ ಅಥವಾ ನಾಡಿದ್ದು ಪಕ್ಷಕ್ಕೆ ಸೇರ್ಪಡೆ ಆಗುತ್ತೇನೆ. ರಾಜಕೀಯ ಪಾದಾರ್ಪಣೆ ವೇಳೆ ಅವರು ಇನ್ನೂ ಹುಡುಗರು ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.
ನನ್ನದು ಮೊಳಕಾಲ್ಮೂರು ತಾಲ್ಲೂಕು. ಅನಿವಾರ್ಯತೆಯಿಂದ ನಾನು ಬೇರೆ ಕ್ಷೇತ್ರಕ್ಕೆ ಹೋಗಿದ್ದೆ. ನಾನು ಹುಟ್ಟಿದ ಊರು ಮೊಳಕಾಲ್ಮೂರು. ಗೋ ಬ್ಯಾಕ್ ಗೋಪಾಲಕೃಷ್ಣ ಎನ್ನಲು ಯಾರಿಗೂ ನೈತಿಕತೆ ಇಲ್ಲ. ಮೊಳಕಾಲ್ಮೂರು ಕ್ಷೇತ್ರದ ಗೌರವ, ಸ್ವಾಭಿಮಾನ ಇರುವ ಪ್ರಶ್ನೆ. ಬಿಜೆಪಿ ಪಕ್ಷದಿಂದ ಅನಾಹುತ ಅಲ್ಲ, ವ್ಯಕ್ತಿಗಳಿಂದ ಆಗಿದೆ. ಕಾಂಗ್ರೆಸ್ ಹೈಕಮಾಂಡ್ ನಾಯಕರು ಹೇಳಿದ ತಕ್ಷಣ ಪಕ್ಷ ಸೇರ್ಪಡೆಯಾಗುತ್ತೆನೆ. ಕಾಂಗ್ರೆಸ್ ನನ್ನ ಸ್ವಂತ ಮಾನೆ. ಬಿಜೆಪಿ ಬಾಡಿಗೆ ಮನೆ. ಬಾಡಿಗೆ ಮನೆ ಬಿಟ್ಟಿದ್ದೇನೆ ಸ್ವಂತ ಮನೆಗೆ ಪ್ರವೇಶ ಮಾಡುತ್ತೆನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.