ಬಿತ್ತನೆ ಬೀಜದ ಹಣ ದುರುಪಯೋಗ: ಕೃಷಿ ಅಧಿಕಾರಿ ರಾಘವೇಂದ್ರ ಅಮಾನತು

Advertisement

ಕುಷ್ಟಗಿ: ಪಟ್ಟಣದ ರೈತ ಸಂಪರ್ಕ ಕೇಂದ್ರದ ಅಧಿಕಾರಿ ರಾಘವೇಂದ್ರ ಕೊಂಡಗುರಿ ಅವರು 2022-23 ನೇ ಸಾಲಿನ ಮುಂಗಾರು,ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಮಾಡಿದ ಬಳಿಕ ಸಂಬಂಧಿಸಿದ ಹಣವನ್ನು ಕೃಷಿ ಇಲಾಖೆಗೆ ಜಮಾ ಮಾಡುವಲ್ಲಿ ವಿಳಂಬ ನೀತಿ, ಕರ್ತವ್ಯ ಲೋಪ ಎಸೆಗಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯ ಆಯುಕ್ತರಾದ ಶರತ್.ಬಿ ಕೂಡಲೇ ಜಾರಿಗೆ ಬರುವಂತೆ ರಾಘವೇಂದ್ರ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಮಾರ್ಗಸೂಚಿ ನಿಯಮ
ಉಲ್ಲಂಘನೆ: 2022-23 ನೇ ಸಾಲಿನಲ್ಲಿ ಮುಂಗಾರು,ಹಿಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಕುಷ್ಟಗಿ ರೈತ ಸಂಪರ್ಕ ಕೇಂದ್ರದಲ್ಲಿ ದಾಖಲಾತಿಗಳನ್ನು ಪರಿಶೀಲಿಸಿ ವರದಿ ಮಾಡಲು ಸಹಾಯಕ ಕೃಷಿ ನಿರ್ದೇಶಕರು ಜಾಗೃತಿದಳ ಒಗೊಂಡಂತೆ ತಂಡ ರಚನೆ ಮಾಡಿ ಆದೇಶ ಮಾಡಲಾಯಿತು. ಬಿತ್ತನೆ ಬೀಜಗಳ ವಿತರಣೆಯ ದಾಖಲಾತಿಗಳನ್ನು ಪರಿಶೀಲಿಸಿ ವರದಿ ನೀಡಿರುತ್ತಾರೆ. 

ವರದಿ ನೀಡಿದ ಮಾಹಿತಿ: ರೈತ ಸಂಪರ್ಕ ಕೇಂದ್ರ ಕುಷ್ಟಗಿ ಮತ್ತು ತಾಲೂಕಿನ ದೋಟಿಹಾಳ ಗ್ರಾಮದ ಹೆಚ್ಚುವರಿ ಮಾರಾಟ ಕೇಂದ್ರದ 2022 ಮುಂಗಾರು ಹಂಗಾಮಿನ ಬಿತ್ತನ ಬೀಜಗಳನ್ನು ದಿ.24,05.2022 ರಿಂದ 21,09,2022 ರ ವರೆಗೆ ಬೀಜ ವಿತರಣೆ ಮಾಡಿರುವುದು (ಸೇಡ ಎಂಐಎಸ) ವರದಿಯಿಂದ ಕಂಡು ಬಂದಿದೆ. ಮುಂಗಾರು ಹಂಗಾಮಿನ ಬಿತ್ತನೆ ಬೀಜದ ರೈತರ ವಂತಿಕೆ ಬಾಕಿ ರೂ11,56,043 ಗಳನ್ನು ದಿ.14-12-2022ರಂದು 5 ತಿಂಗಳು ತಡವಾಗಿ ಜಮಾ ಮಾಡಿರುತ್ತಾರೆ.ಹಾಗೂ 2022 ನೇ ಸಾಲಿನ ಹಿಂಗಾರು ಹಂಗಾಮಿನ ಬಿತ್ತನೆ ಬೀಜಗಳನ್ನು ದಿ. 29.09.2022 ರಿಂದ 20.11.2022 ರ ವರೆಗೆ ಬೀಜ ವಿತರಣೆ ಮಾಡಿರುವುದು ವರದಿಯಿಂದ ಕಂಡು ಬಂದಿದ್ದು, ಹಿಂಗಾರು ಹಂಗಾಮಿನ ರೂ.21,48,942.50 ಗಳನ್ನು ದಿ.15-1-2022ರಂದು ರೂ.14,00,150.00ಗಳನ್ನು ಹಾಗೂ ದಿವಾಂಶ 16-12-2022ರಂದು ರೂ. 7,48,800.00 ಗಳನ್ನು 2 ತಿಂಗಳು ತಡವಾಗಿ ರೈತ ಸಂಪರ್ಕ ಕೇಂದ್ರ ಬ್ಯಾಂಕ್ ಖಾತೆಗೆ ಜಮಾ ಮಾಡಿ ಒಟ್ಟು ರೂ.33,04,985 ಲಕ್ಷ ರೂಗಳನ್ನು ತಾತ್ಕಾಲಿವಾಗಿ ದುರುಪಯೋಗ ಪಡಿಸಿಕೊಂಡಿರುತ್ತಾರೆ. 
ದಿ.15.05.2021 ರೈತ ಸಂಪರ್ಕ ಕೇಂದ್ರ ಹಾಗೂ ಹೆಚ್ಚುವರಿ ಮಾರಾಟ ಕೇಂದ್ರಗಳು ಕೃಷಿ ಸಹಕಾರಿ ಪತ್ತಿನ ಸಹಕಾರ ಸಂಘಗಳಿಗೆ ಸಂಬಂಧಿಸಿದಂತೆ ಮಾರಾಟ ಮಾಡಿದ ಬೀಜದ ವಂತಿಕೆಯನ್ನು ಪಡೆದು ಪ್ರತಿದಿನ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರದ ಖಾತೆಗೆ ಜಮಾ ಮಾಡಬೇಕು. ಹಾಗೂ ಸಂಬಂಧಿಸಿದ ಸಂಸ್ಥೆಗಳಿಗೆ ರೈತರ ಒಂಟಿಕೆಯನ್ನು 15 ದಿನಗಳ ಒಳಗಾಗಿ ಪಾವತಿಸಬೇಕಾಗಿರುತ್ತದೆ.ರಾಘವೇಂದ್ರ ಅವರು  ಪ್ರತಿದಿನ ರೈತ ಸಂಪರ್ಕ ಕೇಂದ್ರದ ಬ್ಯಾಂಕ್ ಖಾತೆಗೆ ಜಮಾ ಮಾಡಿರುವುದಿಲ್ಲ. ೧೦೦ ಬಿತ್ತನೆ ಬೀಜ ಸರಬರಾಜು ಮಾಡಿದ ಇನ್ವಾಯ್ಸ್  ದಾಖಲಾತಿ ರಿಜಿಸ್ಟರ್ ನಲ್ಲಿ ನಮೂದಿಸಿರುವುದಿಲ್ಲ ಇದರಿಂದಾಗಿ ಮಾರ್ಗಸೂಚಿಯನ್ನು ಸ್ಪಷ್ಟವಾಗಿ ನಿಯಮ ಉಲ್ಲಂಘಿಸಿದ ಕಾರಣದಿಂದಾಗಿ 
ಕರ್ತವ್ಯಚುತಿ ಎಸಿಗಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತ ಮಾಡಿ ಆದೇಶ ಹೊರಡಿಸಿದ್ದಾರೆ.