ಬೀದರ್ ಜಿಲ್ಲೆ : ಮಹಾರಾಷ್ಟ್ರಕ್ಕೆ ೧೩೦ ಬಸ್‌ಗಳ ಸಂಚಾರ ಸೇವೆ ಸ್ಥಗಿತ

Advertisement

ಬೀದರ್ : ಗಡಿಭಾಗದ ಬೀದರ್ ಜಿಲ್ಲೆಯ ವಿವಿಧೆಡೆಯಿಂದ ಮಹಾರಾಷ್ಟ್ರಕ್ಕೆ ಕೆಎಸ್‌ಆರ್‌ಟಿಸಿಯ ಒಟ್ಟು ೧೩೦ ಬಸ್‌ಗಳ ಸಂಚಾರ ಸೇವೆಯನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ.
ಬೀದರ್ ನಗರದಲ್ಲಿರುವ ೨ ಡಿಪೋ, ಭಾಲ್ಕಿ, ಬಸವಕಲ್ಯಾಣ, ಔರಾದ ಹಾಗೂ ಹುಮನಾಬಾದ್‌ನ ತಲಾ ಒಂದು ಡಿಪೋದಿಂದ ಮಹಾರಾಷ್ಟ್ರದ ಸೋಲಾಪೂರ್, ತುಳಜಾಪೂರ್, ಪುಣೆ, ಮುಂಬಯಿ, ಶಿರಡಿ, ಪಂಢರಪೂರ್, ಲಾತೂರ್, ಉದಗೀರ್, ನಾಂದೇಡ್, ಪೌರಾದೇವಿ, ನೀಲಂಗಾ ಮತ್ತು ಔರಂಗಾಬಾದ ಬಸ್ ಸಂಚಾರವನ್ನು ಮಹಾರಾಷ್ಟ್ರದ ಉಮ್ಮರಗಾ ಬಳಿಯ ತುರುರಿ ಗ್ರಾಮದ ಬಳಿ ಅಲ್ಲಿಯ ಪ್ರತಿಭಟನಾಕಾರರು ಕೆಎಸ್‌ಆರ್‌ಟಿಸಿ ಬಸ್ಸಿಗೆ ಬೆಂಕಿ ಹಚ್ಚಿದ್ದರಿಂದ ತಡೆ ಹಿಡಿಯಲಾಗಿದೆ. ಈ ಎಲ್ಲಾ ಬಸ್‌ಗಳ ಸಂಚಾರ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪೂರ್ ಗ್ರಾಮದ ವರೆಗೆ ಈ ಎಲ್ಲಾ ಬಸ್‌ಗಳ ಸಂಚಾರ ಸೇವೆ ಲಭ್ಯವಿದೆ ಎಂದು ಬೀದರ್ ಸಾರಿಗೆ ಸಂಸ್ಥೆಯಲ್ಲಿನ ಅಧಿಕೃತ ಮೂಲಗಳು ತಿಳಿಸಿವೆ.