ಬುಡಕಟ್ಟು ಆದಿವಾಸಿಗಳ ಭಾಷೆಗಳಿಗೆ ಧ್ವನಿಭಾಷಾನುವಾದ ರೋಬೋಟ್ ಸಂಶೋಧನೆ

ರೋಬೋಟ್
Advertisement

ಧಾರವಾಡ: ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗೆ(ಐಐಐಟಿ) ರಾಷ್ಟ್ರಪತಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳ ತವರು ರಾಜ್ಯ ಓರಿಸ್ಸಾದ ಬುಡಕಟ್ಟು ನಿವಾಸಿಗಳಿಗಾಗಿ ಬಹುಭಾಷಾ ಧ್ವನಿ ಅನುವಾದ ಮಾಡುವ ರೋಬೋಟ್ ಯಂತ್ರವನ್ನು ಸಿದ್ಧಪಡಿಸಲಾಗುತ್ತಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 26ರಂದು ಐಐಐಟಿ ಸಂಸ್ಥೆಯನ್ನು ನಾಡಿಗೆ ಸಮರ್ಪಿಸಲಿದ್ದಾರೆ. ಈ ಸಂದರ್ಭದಲ್ಲಿಯೇ ಸಂಸ್ಥೆ ಉನ್ನತ ಮಟ್ಟದಲ್ಲಿ ತಯಾರಿಸುತ್ತಿರುವ ಹ್ಯೂಮನಾಯ್ಡ್ ರೋಬೋಟ್ ಯಂತ್ರದ ಮಾಹಿತಿಯನ್ನು ರಾಷ್ಟ್ರಪತಿಗಳ ಗಮನಕ್ಕೆ ತರಲಿದೆ. ಅತ್ಯಾಧುನಿಕ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವನ್ನು ಬಳಸಿಕೊಂಡು ಬುಡಕಟ್ಟು ಭಾಷೆಗಳಿಂದ ಇತರ ಭಾಷೆಗಳಿಗೆ ಧ್ವನಿಭಾಷಾನುವಾದದ ಉಪಕರಣವನ್ನು ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಈ ಸಂಸ್ಥೆಯ ಇಸಿಇ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಟಿ. ದೀಪಕ ತಿಳಿಸಿದ್ದಾರೆ.