ಬೆಂಗಳೂರು ́ಎಂದರೆ ‘ಬಂಗಾರದ ಊರುʼ, ಹೃದಯವಂತರ ಊರು: ಬಸವರಾಜ ಬೊಮ್ಮಾಯಿ

ಟೆಕ್‌
Advertisement

ಬೆಂಗಳೂರು: ಬೆಂಗಳೂರು ಟೆಕ್ ಸಮ್ಮಿಟ್ 2022ರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಯೂನಿಕಾರ್ನ್‌ಗಳಿಗೆ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬೆಂಗಳೂರು ಅಂದರೆ ಬಂಗಾರದ ಊರು, ಬಂಗಾರದ ನಗರಿ ಅಂದರೆ ಚಿನ್ನ ಹೃದಯವಂತರು ಇರುವ ಊರು ಎಂದು ಸಿಎಂ ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು. ಬೆಂಗಳೂರು ಟೆಕ್ ಸಮ್ಮಿಟ್ ಸಮಾರೋಪದಲ್ಲಿ ಮಾತನಾಡಿದ ಅವರು, ಟೆಕ್ ಸಮ್ಮಿಟ್ ಯಶಸ್ವಿಯಾಗಿದೆ. ಈ ಯಶಸ್ಸನ್ನು ಮುಂದುವರಿಸಬೇಕು ಎಂದು ಕರೆ ನೀಡಿದರು. ಬೆಂಗಳೂರಿನಲ್ಲಿ ಮಹಾ ಸರಸ್ವತಿ ನಾಡಾಗಿತ್ತು. ಇದೀಗ ಮಹಾ ಸರಸ್ವತಿಯ ಜೊತೆಗೆ ಮಹಾಲಕ್ಷ್ಮಿಯೂ ಕರ್ನಾಟಕ ಹಾಗೂ ಬೆಂಗಳೂರಿನಲ್ಲಿ ನೆಲೆಸಿದೆ ಎಂದು ಮಾರ್ಮಿಕವಾಗಿ ಶಿಕ್ಷಣದ ಜೊತೆಗೆ ಆರ್ಥಿಕತೆಯೂ ಅಭಿವೃದ್ಧಿಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬೆಂಗಳೂರನ್ನು ನಂಬರ್ ಒನ್ ಸ್ಥಾನದಲ್ಲಿ ಇಡಲು ಮತ್ತಷ್ಟು ಕಠಿಣ ಪರಿಶ್ರಮ ಪಡಬೇಕಿದೆ ಎಂದು ಕರೆ ನೀಡಿದರು.