ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಆರಂಭಕ್ಕೆ ಆಗ್ರಹ

Advertisement

ಕುಷ್ಟಗಿ: ತಾಲೂಕಿನ ರೈತರು ಈಗಾಗಲೇ ಈಗಾಗಲೇ ಕಡಲೆ ರಾಶಿ ಮಾಡಿ, ಮಾರುಕಟ್ಟೆಗೆ ಕಳುಹಿಸಲು ರೈತರು ಉತ್ಸಾಹ ತೋರಿದ್ದಾರೆ. ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಖರೀದಿ ಕೇಂದ್ರ ತೆರೆಯದೇ ಇರುವುದರಿಂದ ರೈತರನ್ನು ಚಿಂತೆಗೆ ದೂಡಿದೆ. ಕೂಡಲೇ ಕಡಲೆ ಖರೀದಿಗೆ ಕೇಂದ್ರ ತೆರೆಯುವಂತೆ ಒತ್ತಾಯಿಸಿ ರೈತರು ಗ್ರೇಡ್-೨ ತಹಶಿಲ್ದಾರರ ಮುರಲಿಧರ ಮುಕ್ತಿದಾರ ಅವರ ಮುಖಾಂತರ ಕೃಷಿ ಸಚಿವ ಹಾಗೂ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರಿಗೆ ಬರದೆ ಮನವಿ ಪತ್ರ ಸಲ್ಲಿಸಿದರು.
ರೈತ ಚನ್ನಪ್ಪ ನಾಲಗಾರ ಮಾತನಾಡಿ, ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಕಡಲೆಯನ್ನು ಬೆಳೆಯಲಾಗಿದ್ದು ಈಗಾಗಲೇ ರಾಶಿ ಮಾಡಿಕೊಂಡು ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಾರಾಟಕ್ಕೆ ತೊಂದರೆ ಸಾಕು ಕಡಲಿಗೆ ಸೂಕ್ತವಾದ ಬೆಲೆ ಸಿಗದೇ ಇರುವುದರಿಂದ ರೈತರಿಗೆ ಬಹಳ ತೊಂದರೆಯಾಗಿದ್ದು. ಸರಕಾರ ತಕ್ಷಣ ರೈತರ ನೆರವಿಗೆ ಧಾವಿಸಿ ಬೆಂಬಲ ಖರೀದಿ ಕೇಂದ್ರ ಸ್ಥಾಪನೆ ಮಾಡುವುದರ ಮೂಲಕ ಬೆಳೆಗಾರ ಹಿತವನ್ನು ಕಾಪಾಡಲು ಸರ್ಕಾರ ಮುಂದಾಗಬೇಕು ಇಲ್ಲದಿದ್ದರೆ ರೈತ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದರು.
ತಾಲೂಕಿನಲ್ಲಿ ಈ ವರ್ಷ ಪ್ರತಿಶತ 100ಕ್ಕೆ 80 ರಷ್ಟು ರೈತರು ಮಾತ್ರ ಜಮೀನಿನಲ್ಲಿ ಕಡಲೆ ಬಿತ್ತನೆ ಮಾಡಿದ್ದಾರೆ. ಅದಲ್ಲದೆ ಈ ವರ್ಷ ಕಡಲೆ ಇಳುವರಿ ಚೆನ್ನಾಗಿ ಬಂದಿರುತ್ತದೆ ಆದರೆ ರೈತರು ಬೆಳೆದ ಕಡಲೆ ಕುಷ್ಟಗಿಯ ಕೃಷಿ ಉತ್ಪನ್ನ ಮಾರುಕಟ್ಟೆಗೆ  ತಂದರೆ ದಲ್ಲಾಳಿಗಳು ಸೂಕ್ತವಾದ ಬೆಲೆಕೊಟ್ಟು ಖರೀದಿ ಮಾಡುತ್ತಿಲ್ಲ  ಇದರಿಂದ ಈ ರೈತರಿಗೆ ತುಂಬಲಾರದ ನಷ್ಟ ಉಂಟಾಗಿದೆ. ರೈತರ ಶ್ರೇಯಾಭಿವೃದ್ಧಿಗೆ ಕುಷ್ಟಗಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕಡಲೆಗೆ ಬೆಲೆ ನಿಗದಿ ಮಾಡಿ ಮೂಲಕ ಸರಕಾರ ರೈತರ ನೆರವಿಗೆ ಧಾವಿಸಬೇಕಾಗಿದೆ ಎಂದರು. ಕಡಲೆ ಹಲವು ಬೆಳೆಗಳು ಅತಿಯಾದ ಮಳೆಯಿಂದ ಇಳುವರಿ ಕಡಿಮೆಯಾಗಲಿವೆ. ಹೀಗಾಗಿ ಸರ್ಕಾರ ಇಂತಹ ಸಮಸ್ಯೆಗಳಿಗೆ ಸ್ಪಂದಿಸಿ ತಕ್ಷಣ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಸ್ಥಾಪಿಸುವುದು ಅಗತ್ಯವಾಗಿದೆ ಎಂದರು. ಹನಮಂತ, ರಾಮಣ್ಣ, ಈಶಪ್ಪ, ಹನುಮಪ್ಪ, ಶಿವಪುತ್ರಪ್ಪ,ರಾಮಣ್ಣ ಹನಮಸಾಗರ, ಯಮನೂರಪ್ಪ,ಅಜ್ಜಪ್ಪ, ಮುತ್ತುರಾಜ ಹನಮಂತ ಸಾಸ್ವಿಹಾಳ  ಸೇರದಂತೆ ಇನ್ನಿತರದಿದ್ದರು.