ಭವದ ಬಂಧನ ಬಿಟ್ಟಾಗ ಮಾತ್ರ ಪರಮಸುಖ

Advertisement

ಮನುಷ್ಯ ಸಂಸಾರಿಕ ಜೀವನದಲ್ಲಿ ತಾನು ತನ್ನ ಹೆಂಡಿರು ಮಕ್ಕಳು ತಮ್ಮ ಕುಟುಂಬಕ್ಕೆ ತೃಪ್ತಿ ಪಡಿಸುವದಕ್ಕಾಗಿ ದಿನ ನಿತ್ಯ ಹೋರಾಟ ಮಾಡುತ್ತಲೇ ಇರುತ್ತಾನೆ. ಆದರೆ ತನಗೂ ಆ ಸುಖ ಸಿಗಲಿಲ್ಲ. ತನ್ನ ಕುಟುಂಬಕ್ಕೂ ಸಿಗಲಿಲ್ಲ ಸಿಕ್ಕರೂ ಅವರು ನಿನಗೆ ಕೃತಜ್ಞರಾಗಲಿಲ್ಲ. ಆದರೆ ನಮ್ಮ ಹೋರಾಟ ನಿಲ್ಲಲಿಲ್ಲ. ಜೀವನವಿಡೀ ಸುಖದ ಬೆಂಬತ್ತಿ ಆಯುಷ್ಯ ಹಾಳು ಮಾಡಿಕೊಳ್ಳುತ್ತೇವೆ.
ಸುಖ ಬೇಕಾದರೆ ಮೊತ್ತ ಮೊದಲು ನಾವು ಮನುಷ್ಯರೆಂಬ ಅರಿವು ನಮಗೆ ಇರಬೇಕು. ಆಗ ಮನುಷ್ಯ ಕುಕರ್ಮ ಮಾಡಲು ಹೋಗುವದಿಲ್ಲ. ನಾನು ಯಾರು ಎಂಬ ಅರಿವು ಆದಾಗ ಮಾತ್ರ. ಪ್ರಪಂಚದ ಅರಿವು ನಮಗಾಗಲು ಸಾಧ್ಯ. ಭಗವಂತ ನಮಗೆ ಮನುಷ್ಯರನ್ನಾಗಿ ಮಾಡಿ ಪ್ರಾಣಿ ಪಕ್ಷಿಗಳಿಗಿಂತಲೂ ಮಿಗಿಲಾದ ಜ್ಞಾನಶಕ್ತಿ ನಮಗೆ ಕೊಟ್ಟು ಈ ಭುವಿಗೆ ಕಳಿಸಿದ್ದಾನೆ. ಯಾವುದು ಸರಿ? ಯಾವದು ತಪ್ಪು? ಯಾವುದು ಹೌದು? ಯಾವುದು ಅಲ್ಲ; ಎಂಬ ಅರಿವು ಇರಬೇಕು. ಈ ಅರಿವಿನ ಜನ್ಮ ನಮಗೆ ಕೊಟ್ಟು ಕಳಿಸಿದ ಭಗವಂತನಿಗೆ ನಾವು ಒಂದೆ ಒಂದು ದಿನ ಅವನಿಗೆ ನೆಎನಪಿಸುವದಿಲ್ಲ. ಬದಲಾಗಿ ಐಹಿಕ ಸಂಬಂಧಗಳನ್ನೇ ನಮ್ಮ ಸಂಬಂಧಗಳು ಎಂದು ತಿಳಿದಿದ್ದೇವೆ. ಆದರೆ ಶರೀರ ನೋಡಲು ಕಣ್ಣು, ಕೇಳಲು ಕಿವಿ. ಮಾತಾಡಲು ಬಾಯಿ ಇಂದ್ರಿಯಗಳನ್ನು ಕೊಟ್ಟಿದ್ದಾನೆ. ಇದು ದೇವರು ಕೊಟ್ಟ ಉಪಕಾರವಾಗಿದೆ. ಆದರೆ ನಾವು ಆತನನ್ನು ನೆನಪಿಸುವದಿಲ್ಲ. ಅವನ ಅಸ್ತಿತ್ವವಿಲ್ಲದೇ ಹುಲ್ಲುಕಡ್ಡಿಯೂ ಅಲಗಾಡುವದಿಲ್ಲ. ಪ್ರಪಂಚ ಅವನ ಸಂಕಲ್ಪವೆಂಬುದನ್ನು ಮರೆತು ದುಃಖಗಳಿಗೆ ಈಡಾಗುತ್ತಲಿದ್ದೇವೆ. ಸೃಷ್ಟಿಕರ್ತ ಭಗವಂತನ ಅಸ್ತಿತ್ವದಲ್ಲಿ ನಂಬಿಕೆಯನ್ನು ಇಡಬೇಕು. ಸಾಧಕರು, ಶರಣರು ತೋರಿದ ದಾರಿಯಲ್ಲಿ ನಡೆಯಬೇಕು. ಸುಖದ ಲೋಲುಪತೆಯಲ್ಲಿ ಮೈ ಮರೆಯಬಾರದು. ನಾವು ಲೌಕಿಕ ಸುಖಕ್ಕಾಗಿ ಬಂಧನಗಳನ್ನು ಪರಿತ್ಯಜಿಸಬೇಕು. ಋಷಿಮುನಿಗಳು, ಶರಣರಿಗೆ ಐಹಿಕ ಸುಖ ಎಂದಿಗೂ ಮುಖ್ಯವಾಗಲೇ ಇಲ್ಲ. ಅವರ ಮಾರ್ಗದಲ್ಲಿಯೇ ಸಾಗಿದ್ದಾದರೆ. ನಿಜಸುಖದ ದರ್ಶನವಾಗುತ್ತದೆ.