ಮಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ

Advertisement

ಮಂಗಳೂರು: ಮೂರು ದಿನ ಪ್ರಾಯೋಗಿಕ ಓಡಾಟ ನಡೆಸಲಿರುವ ಸೆಮಿ ಹೈ ಸ್ಪೀಡ್ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮೂರು ದಿನ ಪ್ರಾಯೋಗಿಕ ಓಡಾಟ ನಡೆಸಲಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನಳಿನ್ ಕುಮಾರ್ ಕಟೀಲ್ ‘ವಂದೇ ಭಾರತ್’ ರೈಲು ವೀಕ್ಷಿಸಿ ಕೆಲ ಚಿತ್ರಗಳನ್ನು ಪೋಸ್ಟ್‌ ಮಾಡಿ ಮಂಗಳೂರಿನ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಪರೀಕ್ಷಾರ್ಥ ಸಂಚಾರಕ್ಕೆ ಆಗಮಿಸಿದ ‘ವಂದೇ ಭಾರತ್’ ರೈಲು ವೀಕ್ಷಿಸಲಾಯಿತು. ಹಾಗೂ ಈ ಸಂಧರ್ಭದಲ್ಲಿ 30 ವರುಷಗಳ ಬಳಿಕ ಮಂಗಳೂರು ಕೇಂದ್ರ ನಿಲ್ದಾಣದಲ್ಲಿ ನಿರ್ಮಾಣಗೊಂಡಿರುವ ಪ್ಲಾಟ್‌ಫಾರ್ಮ್ 4 ಮತ್ತು 5ರ ಕಾಮಗಾರಿಯನ್ನು ವೀಕ್ಷಿಸಲಾಯಿತು ಎಂದಿದ್ದಾರೆ.