ಮಂಗಳೂರು ಸ್ಫೋಟ ಪ್ರಕರಣ: ತುಮಕೂರು, ಮೈಸೂರು, ಹುಬ್ಬಳ್ಳಿಯಲ್ಲಿ ತನಿಖೆ

ಮಂಗಳೂರು
Advertisement

ಕಳೆದ ದಿನ ಕಂಕನಾಡಿ ಪೊಲೀಸ್ ಠಾಣೆ ಬಳಿ ಚಲಿಸುತ್ತಿದ್ದ ಅಟೋ ರಿಕ್ಷಾದಲ್ಲಿ ನಿಗೂಢ ರೀತಿಯಲ್ಲಿ ಸ್ಫೋಟಗೊಂಡಿದ್ದ ಸ್ಥಳಕ್ಕೆ ನಾಲ್ವರು ಅಧಿಕಾರಿಗಳಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆಯ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆಟೋ ರಿಕ್ಷಾ ಸ್ಫೋಟಗೊಂಡ ಸ್ಥಳದಲ್ಲಿ‌ ಪರಿಶೀಲನೆ ನಡೆಸಿದ ತನಿಖಾಧಿಕಾರಿಗಳು, ಬಳಿಕ ಅಲ್ಲೇ ರಸ್ತೆಯ ಮತ್ತೊಂದೆಡೆ ಆಟೋ‌ ಇರಿಸಿದ್ದ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಸ್ಥಳದಲ್ಲಿ ನಗರ ಪೊಲೀಸರು ಬೀಡು ಬಿಟ್ಟಿದ್ದಾರೆ‌. ಸ್ಪೋಟವಾದ ಆಟೋದಲ್ಲಿ ಹುಬ್ಬಳ್ಳಿ ಮೂಲದ ಪ್ರೇಮರಾಜ ಎಂಬ ವ್ಯಕ್ತಿಯ ಆಧಾರ ಕಾರ್ಡ್‌ ಪತ್ತೆಯಾಗಿದ್ದು, ಸದ್ಯ ಪ್ರೇಮರಾಜ ತುಮಕೂರಿನಲ್ಲಿ ಉದ್ಯೋಗಿಯಾಗಿದ್ದು ಆತನನ್ನು ಹಾಗೂ ಹುಬ್ಬಳ್ಳಿಯಲ್ಲಿರುವ ಅವನ ಪಾಲಕರನ್ನು ಮಂಗಳೂರ ಮೂಲದ ಪೊಲೀಸರು ತನಿಖೆ ನಡೆಸಿದ್ದಾರೆ ಎನ್ನಲಾಗಿದೆ. ಶಂಕಿತ ಉಗ್ರ ಪ್ರೇಮರಾಜ ಹೆಸರಿನಲ್ಲಿರುವ ಆಧಾರ ಕಾರ್ಡ್‌ ಬಳಸಿಕೊಂಡು ಮೈಸೂರಿನಲ್ಲಿ ಮನೆ ಭಾಡಿಗೆ ಪಡೆದು ವಿದ್ವಂಸಕ ಕೃತ್ಯದಲ್ಲಿ ತೊಡಗಿದ್ದ ಎನ್ನಲಾಗಿದೆ. ಪ್ರೇಮರಾಜ್‌ ತಾನು ರೈಲ್ವೇ ಉದ್ಯೋಗಿಯಾಗಿದ್ದು,6 ತಿಂಗಳ ಹಿಂದೆ ತನ್ನ ಆಧಾರ ಕಾರ್ಡ್‌ ಕಳೆದುಕೊಂಡಿದ್ದು ಈ ಬಗ್ಗೆ ಪೊಲೀಸ್‌ ಠಾಣೆಗೆ ದೂರು ನೀಡಿರುವುದಾಗಿ ತುಮಕೂರ ಪೊಲೀಸ್‌ ವರಿಷ್ಠಾಧಿಕಾರಿಗೆ ಮಾಹಿತಿ ನೀಡಿದ್ದಾರೆ.