ಮಂತ್ರಾಲಯದಲ್ಲಿ ರಾಯರ 429ನೇ ವರ್ಧಂತಿ ಉತ್ಸವ

Advertisement

ರಾಯಚೂರು: ಮಂತ್ರಾಲಯದಲ್ಲಿ ಗುರುವೈಭವೋತ್ಸವ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ನಡೆದ ಶ್ರೀರಾಘವೇಂದ್ರ ಸ್ವಾಮಿಗಳ 429 ನೇ ವರ್ಧಂತಿ ಉತ್ಸವ ಶ್ರೀ ಮಠದ ಆವರಣದಲ್ಲಿ ಹಲವಾರು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಶನಿವಾರ ನಡೆದವು.
ಬೆಳಿಗ್ಗೆ ತಿರುಪತಿ ತಿರುಮಲ ದೇವಸ್ಥಾನದಿಂದ ಬಂದ ಶ್ರೀ ನಿವಾಸದೇವರ
ಶೇಷವಸ್ತ್ರ
ರಾಯರಿಗೆ ಸಮರ್ಪಣೆ ಮಾಡಿದ ಶ್ರೀಮಠದ ಪೀಠಾಧಿಪತಿಗಳಾದ ಸುಬುಧೇಂದ್ರ ತೀರ್ಥಶ್ರೀಪಾದಂಗಳವರು ಸಮರ್ಪಣೆ ಮಾಡಿದರು. ಶ್ರೀ ರಾಘವೇಂದ್ರ ಸ್ವಾಮಿಗಳವರ ಮೂಲ ಬೃಂದಾವನಕ್ಕೆ ಮಹಾ ಪಂಚಾಮೃತಾಭಿಷೇಕ ನೆರವೇರಿಸಿ, ನವರತ್ನ ರಥಕ್ಕೆ ಮಂಗಳಾರತಿ ಮಾಡಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಇದೇ ವೇಳೆ ಶ್ರೀಮಠದ ಪ್ರಾಕಾರದಲ್ಲಿ ಚೆನ್ನೈನ ಶ್ರೀ ರಾಘವೇಂದ್ರ ನಾದಹಾರ ಟ್ರಸ್ಟ್ ನ 350 ಕಲಾವಿದರು ನಾದಹಾರ ಸಂಗೀತ ನಾದಹರ ಸೇವೆ ಸಲ್ಲಿಸಿದರು.