ಮತ್ತೊಂದು ಶುಭ ಸಮಾಚಾರ ಹಂಚಿಕೊಂಡ ಬಿ.ವೈ. ರಾಘವೇಂದ್ರ

Advertisement

ಬೆಂಗಳೂರು: ಮತ್ತೊಂದು ಶುಭ ಸಮಾಚಾರ ಎಂದು ಶಿವಮೊಗ್ಗದ ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ, ಜೆ.ಪಿ .ಮಾರ್ಗನ್ ತನ್ನ ಮಾರುಕಟ್ಟೆ ಸೂಚ್ಯಂಕವನ್ನು ನಿರ್ಧರಿಸಲು ಪರಿಗಣಿಸುವ ಮಾನದಂಡಗಳ ಪಟ್ಟಿಗೆ ಭಾರತೀಯ ಸರ್ಕಾರೀ ಬಾಂಡ್‌ಗಳನ್ನು ಅಂದರೆ ಗವರ್ನಮೆಂಟ್ ಸೆಕ್ಯೂರಿಟಿಗಳನ್ನು ಸೇರ್ಪಡೆಗೊಳಿಸಲು ನಿರ್ಧರಿಸಿದೆ. ಇದರಿಂದ ನಮ್ಮ ದೇಶಕ್ಕೆ ವಿದೇಶಿ ಬಂಡವಾಳ ಹೂಡಿಕೆಯ ಪ್ರಮಾಣ ಹೆಚ್ಚಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದಿರ್ಘ ಟ್ವೀಟ್‌ ಮಾಡಿದ್ದಾರೆ ಅವರ ಹಾಕಿರುವ ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದಾರೆ
ಮತ್ತೊಂದು ಶುಭ ಸಮಾಚಾರ : ಪ್ರಧಾನಿ ಶ್ರೀ ಮೋದೀಜೀ ನೇತೃತ್ವದಲ್ಲಿ ಮುಂದುವರಿದ ಯಶೋಗಾಥೆಗಳ ಸರಮಾಲೆ! ಜಾಗತಿಕ ಹಣಕಾಸು ಸಂಸ್ಥೆ ಜೆ.ಪಿ .ಮಾರ್ಗನ್ ತನ್ನ ಮಾರುಕಟ್ಟೆ ಸೂಚ್ಯಂಕವನ್ನು ನಿರ್ಧರಿಸಲು ಪರಿಗಣಿಸುವ ಮಾನದಂಡಗಳ ಪಟ್ಟಿಗೆ ಭಾರತೀಯ ಸರ್ಕಾರೀ ಬಾಂಡ್‌ಗಳನ್ನು ಅಂದರೆ ಗವರ್ನಮೆಂಟ್ ಸೆಕ್ಯೂರಿಟಿಗಳನ್ನು ಸೇರ್ಪಡೆಗೊಳಿಸಲು ನಿರ್ಧರಿಸಿದೆ.
ಇದು ಅತ್ಯಂತ ಮಹತ್ವದ ಸೂಚ್ಯಂಕ. ಇದರ ಆಧಾರದ ಮೇಲೆಯೇ ಸಾಗರೋತ್ತರ ನಿಧಿಗಳ ವ್ಯವಸ್ಥಾಪಕರು ಯಾವ ದೇಶಗಳ ಮಾರುಕಟ್ಟೆಗಳಲ್ಲಿ ಬಂಡವಾಳ ಹೂಡಿಕೆ ಮಾಡಬೇಕೆಂಬ ನಿರ್ಧಾರಗಳನ್ನು ಮಾಡುತ್ತಾರೆ. ಆದ್ದರಿಂದ ಜೆ .ಪಿ .ಮಾರ್ಗನ್ ಕಂಪನಿಯ ಈ ಕ್ರಮದಿಂದಾಗಿ ನಮ್ಮ ದೇಶಕ್ಕೆ ವಿದೇಶಿ ಬಂಡವಾಳ ಹೂಡಿಕೆಯ ಪ್ರಮಾಣ ಹೆಚ್ಚಲಿದೆ.
2025 ರ ಮಾರ್ಚ್ ವೇಳೆಗೆ 25 ಶತಕೋಟಿ ಡಾಲರ್ ನಷ್ಟು ವಿದೇಶಿ ಬಂಡವಾಳವನ್ನು ಭಾರತ ಆಕರ್ಷಿಸಲಿದೆ ಎಂದು ಬ್ಲೂಮ್ ಬರ್ಗ್ ನ್ಯೂಸ್ ಏಜೆನ್ಸಿ ಅಂದಾಜು ಮಾಡಿದೆ.ಈ ಬೆಳವಣಿಗೆ ಡೋಲಾಯಮಾನ ಮನಃ ಸ್ಥಿತಿಯಲ್ಲಿರುವ ದೇಶೀಯ ಹೂಡಿಕೆದಾರರೂ ಉದ್ಯಮಗಳಲ್ಲಿ ಧೈರ್ಯದಿಂದ ಬಂಡವಾಳ ತೊಡಗಿಸಲು ಪ್ರೇರಣೆಯಾಗಲಿದೆ.ಜತೆಗೆ ಭಾರತ ಸರ್ಕಾರದ ಸಾಲ ಎತ್ತುವಳಿಗೂ ಅನುಕೂಲವಾಗಲಿದೆ. ಜೆ.ಪಿ.ಮಾರ್ಗನ್ ಸಂಸ್ಥೆಯ ಈ ನಿರ್ಧಾರ ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಅಂತಾರಾಷ್ಟ್ರೀಯ ಹೂಡಿಕೆದಾರರಿಗೆ ಹೆಚ್ಚುತ್ತಿರುವ ಆಕರ್ಷಣೆಯ ಪ್ರತೀಕವಾಗಿದೆ.ಭಾರತದ ಆರ್ಥಿಕ ಪ್ರಗತಿ ಈಗಾಗಲೇ ಅದರ ಸರೀಕ ದೇಶಗಳನ್ನೂ ಹಿಂದಕ್ಕೆ ಸರಿಸಿದ್ದು,ಭೌಗೋಳಿಕ ರಾಜಕೀಯ(geo political)ಸನ್ನಿವೇಶದಲ್ಲಿ ಅದರ ಪ್ರಭಾವ ದಿನೇ ದಿನೇ ಹೆಚ್ಚುತ್ತಿದೆ.ಇದರಿಂದಾಗಿ ಜಾಗತಿಕ ಕಂಪೆನಿಗಳು ಭಾರತವನ್ನು ಚೀನಾ ದೇಶಕ್ಕೆ ಪರ್ಯಾಯವಾಗಿ ನೋಡುತ್ತಿವೆ.ಇದರ ಜತೆಗೆ ದೇಶದೊಳಗಿನ ಭದ್ರವಾದ ಆಸ್ತಿಪಾಸ್ತಿಗಳ ನೆಲೆಗಟ್ಟಿನಿಂದಾಗಿ ಇತರೆ ಅಭಿವೃದ್ಧಿಶೀಲ ರಾಷ್ಟ್ರಗಳು ಎದುರಿಸುತ್ತಿರುವ ಆರ್ಥಿಕ ತಲ್ಲಣಗಳಿಂದ ಪಾರಾಗಿದೆ. ಭಾರತದ ವಿದೇಶಿ ವಿನಿಮಯ ಮೀಸಲು ಪ್ರಮಾಣ ಕೊಂಚ ಇಳಿಮುಖವಾಗುತ್ತಿರುವ ಇಂತಹ ನಿರ್ಣಾಯಕ ಸಂದರ್ಭದಲ್ಲಿ ಮಾರ್ಗನ್ ಸಂಸ್ಥೆಯ ಈ ಪ್ರಕಟಣೆಯಿಂದ ಮತ್ತೆ ಭಾರತದ ಹಣಕಾಸು ಮಾರುಕಟ್ಟೆ ಪುಟಿದೇಳುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.