ಮಥುರಾ ಶ್ರೀಕೃಷ್ಣ ಜನ್ಮಭೂಮಿ: ಮಸೀದಿ ಸರ್ವೆಗೆ ಹೈಕೋರ್ಟ್‌ ಸಮ್ಮತಿ

Advertisement

ಅಲಹಾಬಾದ್: ಅಲಹಾಬಾದ್ ಹೈಕೋರ್ಟ್ ಮಥುರಾದ ಕೃಷ್ಣಜನ್ಮಭೂಮಿ ವಿವಾದದ ಸ್ಥಳದ ಸರ್ವೆಗೆ ಅನುಮತಿ ನೀಡಿದೆ.
ಮಥುರಾದ ಕೃಷ್ಣಜನ್ಮಭೂಮಿ ವಿವಾದದ ಸ್ಥಳದ ಸರ್ವೆಗೆ ಅಲಹಾಬಾದ್ ಹೈಕೋರ್ಟ್ ಅನುಮತಿ ನೀಡಿದೆ. ಮಥುರಾದ ಶಾಹಿ ಈದ್ಗಾ ಮಸೀದಿಯಲ್ಲಿ ದೇವಸ್ಥಾನವಿದೆ ಎಂಬ ವಿವಾದದ ಕುರಿತು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ಮಥುರಾದ ಕೃಷ್ಣಜನ್ಮಭೂಮಿ ವಿವಾದದ ಸ್ಥಳದ ಸರ್ವೆಗೆ ಅನುಮತಿ ನೀಡಿದೆ. ಅಲ್ಲದೇ, ಸರ್ವೆಗೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳ ನೇಮಕಕ್ಕೆ ಸೂಚನೆ ನೀಡಿದೆ. ಜಸ್ಟೀಸ್ ಮಯಾಂಕ್ ಕುಮಾರ್ ಜೈನ್ ಮಹತ್ವದ ಆದೇಶ ನೀಡಿದ್ದಾರೆ. ಸಮೀಕ್ಷೆ ನಡೆಸಲು ಕಮಿಷನರ್ ತಂಡ ರಚನೆ ಮಾಡಲು ಕೋರ್ಟ್ ಸೂಚಿಸಿದೆ. ಮೂವರು ಅಧಿಕಾರಿಗಳ ಸಮಿತಿ ರಚಿಸಿ ಸರ್ವೆ ನಡೆಸುವಂತೆ ಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ. ಭಗವಾನ್ ಶ್ರೀಕೃಷ್ಣ ವಿರಾಜಮಾನ ಸಮಿತಿ ಹಾಗೂ ಇತರ 7 ಮಂದಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್, ಈ ಆದೇಶ ನೀಡಿದೆ. ಹಿಂದೂ ದೇವಸ್ಥಾನವನ್ನು ಬೀಳಿಸಿ ಮಥುರಾದ ಶಾಹಿ ಈದ್ಗಾ ಮಸೀದಿ ಕಟ್ಟಲಾಗಿದೆ. ಶಾಹಿ ಈದ್ಗಾ ಮಸೀದಿಯಲ್ಲಿ ಹಿಂದೂ ದೇವಸ್ಥಾನದ ಕುರುಹುಗಳಿವೆ. ಕಮಲದಳದ ಆಕಾರದಲ್ಲಿ ಕಂಬಗಳು ಹಿಂದೂ ದೇವಸ್ಥಾನ ಶೈಲಿಯಾಗಿದೆ. ಇದೇ ಕಂಬದಲ್ಲಿ ಹಿಂದೂ ದೇವಸ್ಥಾನ ಚಿಹ್ನೆಗಳು ಕಾಣುತ್ತಿದೆ. ಹೀಗಾಗಿ ಈದ್ಗಾ ಮಸೀದಿಯನ್ನು ಸಮೀಕ್ಷೆಗೆ ಒಳಪಡಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ಪೀಠ, ಇದೀಗ ಜ್ಞಾನವಾಪಿ ಮಸೀದಿ ರೀತಿಯಲ್ಲೇ ಸರ್ವೇಗೆ ಅನುಮತಿ ನೀಡಲಾಗಿದೆ.