ಮಧ್ಯರಾತ್ರಿಯಲ್ಲಿ ರಂಗೇರಿದ ಚೆನ್ನಮ್ಮ ವೃತ್ತ: ಹೊನಲು ಬೆಳಕಿನಲ್ಲಿ ರಾಜ್ಯೋತ್ಸವ ಸಂಭ್ರಮ

ಬೆಳಗಾವಿ
Advertisement

ಬೆಳಗಾವಿ: ರಾಜ್ಯೋತ್ಸವ ಎಂದರೆ ಬೆಳಗಾವಿ ಎನ್ನುವಷ್ಟರ ಮಟ್ಟಿಗೆ ಬೆಳಗಾವಿಯ ರಾಜ್ಯೋತ್ಸವದ ಕೀರ್ತಿ ಎಲ್ಲೆಡೆ ಹರಡಿದೆ.
ನವೆಂಬರ್ ಒಂದರಂದು ರಾಜ್ಯೋತ್ಸವ ಆಚರಣೆ ಸಂಭ್ರಮವನ್ನು ಬೆಳಗಾವಿಗರು ನಿನ್ನೆ ತಡರಾತ್ರಿ 12ರ ನಂತರ ಶುರುವಿಟ್ಟುಕೊಳ್ಳುವ ಮೂಲಕ ಅದ್ಧೂರಿ ರಾಜ್ಯೋತ್ಸವಕ್ಕೆ ಚಾಲನೆ ನೀಡಿದ್ದಾರೆ. ಈ ವರ್ಷದ ವಿಶೇಷ ಎಂದರೆ ರಾಜ್ಯೋತ್ಸವವನ್ನು ಅಪ್ಪು ಸ್ಮರಣೆಯಲ್ಲಿ ಆಚರಣೆ ಮಾಡಿರುವುದು.
ಅದರ ಅಂಗವಾಗಿಯೇ ಸೋಮವಾರ ತಡರಾತ್ರಿ ಅಪ್ಪು ಭಾವಚಿತ್ರದೊಂದಿಗೆ ಹಾಡಿಗೆ ಕುಣಿದು ಕುಪ್ಪಳಿಸಿದ ಬೆಳಗಾವಿಯ ಕನ್ನಡ ಮನಸುಗಳು ಚೆನ್ನಮ್ಮ ವೃತ್ತದಲ್ಲಿಯೇ ಅಪ್ಪು ಭಾವಚಿತ್ರವಿರುವ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಕನ್ನಡದ ಪರ ಜಯಘೋಷ ಕೂಗುತ್ತಿರುವುದರ ಜತೆ ಜತೆಗೆ ರಾಜರತ್ನ ಅಪ್ಪು ಪರ ಘೋಷಣೆ ಕೂಗುತ್ತಿದ್ದುದು ವಿಶೇಷವಾಗಿತ್ತು. ರಾತ್ರಿ ನಿಧಾನಕ್ಕೆ ಬಂದು ಚೆನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಜನಸ್ತೋಮ ತಡರಾತ್ರಿಯಾದರೂ ಕರಗದೆ ಇದ್ದಾಗ ಪೊಲೀಸರೇ ಕನ್ನಡ ಪರ ಸಂಘಟನೆಗಳವರ ಮನವೊಲಿಸಿ ಮನೆಗೆ ಕಳುಹಿಸಿದ್ದು ಕಂಡುಬಂತು.