ಮನುಷ್ಯನ ಮುಖ ಹೋಲುವ ಹಿಟ್ಲರ್ ಕೀಟ

ಹಿಟ್ಲರ್
Advertisement

ಗಜೇಂದ್ರಗಡ: ತಾಲೂಕಿನ ಬೈರಾಪುರ ಬೆಟ್ಟದಲ್ಲಿ ಮನುಷ್ಯನ ಮುಖ ಹೋಲುವ ಹಿಟ್ಲರ್ ಕೀಟ ಪತ್ತೆಯಾಗಿದೆ.
ಪೆಂಟ್ಯಾಟೊಮಿಡ್ ಜಾತಿಗೆ ಸೇರಿದ ಈ ಅಪರೂಪದ ಕೀಟ ಹಳದಿ ಬಣ್ಣದಿಂದ ಕೂಡಿದೆ. ಈ ಕೀಟವನ್ನು ವೈಜ್ಞಾನಿಕವಾಗಿ ಕೆಟಾಕ್ಯಾಂಥಸ್ ಇನ್‌ಕಾರ್ನೇಟಸ್ ಎಂದು ಕರೆಯಲಾಗುತ್ತದೆ ಎಂದು ಇದನ್ನು ಪತ್ತೆ ಹಚ್ಚಿದ ಜೀವ ವೈವಿಧ್ಯ ಸಂಶೋಧಕ ಮಂಜುನಾಥ ನಾಯಕ, ಸಂಗಮೇಶ ಕಡಗದ ಹಾಗೂ ಶರಣು ಗೌಡರ ತಿಳಿಸಿದರು.
ಸಾಮಾನ್ಯ ಭಾಷೆಯಲ್ಲಿ ಹಿಟ್ಲರ್ ಕೀಟ ಎಂದು ಕರೆಯಲಾಗುತ್ತಿದ್ದು, ಈ ಕೀಟವು ೩೦ ಎಂಎಂ ಗಾತ್ರದ್ದಿರುತ್ತದೆ. ಅತಿಥೇಯ ಸಸ್ಯಗಳ ಎಲೆಗಳಡಿಯಲ್ಲಿ ಹೆಣ್ಣು ಕೀಟವು ೧೫೦ ರಿಂದ ೨೦೦ ಮೊಟ್ಟೆಗಳನ್ನು ಇಡುತ್ತದೆ. ಹಿಟ್ಲರ್ ಕೀಟವು ೭ ರಿಂದ ೯ ತಿಂಗಳ ಜೀವಿತಾ ಅವಧಿ ಹೊಂದಿದ್ದು, ಇವು ತಮ್ಮ ಜೀವನ ಚಕ್ರದಲ್ಲಿ ಎರಡು ಪೀಳಿಗೆಗಳನ್ನು ಉತ್ಪಾದಿಸುತ್ತವೆ ಎಂದು ಜೀವ ವೈವಿಧ್ಯ ಸಂಶೋಧಕರು ತಿಳಿಸಿದ್ದಾರೆ.