ಮನೆಗಳ್ಳರಿಬ್ಬರ ಬಂಧನ: 11.99 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಶ

Advertisement

ನಿಪ್ಪಾಣಿ: ನವಲಿಹಾಳ ಮತ್ತು ನಿಪ್ಪಾಣಿ ಸಾಯಿ ಶಂಕರ ನಗರದಲ್ಲಿ ಮೂರು ಮನೆ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ನಿಪ್ಪಾಣಿ ಪೊಲೀಸರು ಇಬ್ಬರು ಮನೆಕಳ್ಳರನ್ನು ಬಂಧಿಸಿ 11.99 ಲಕ್ಷ ರೂ. ಮೌಲ್ಯದ‌‌ ಚಿನ್ನ ಹಾಗೂ ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ.
ಚಿಕ್ಕೋಡಿ ತಾಲೂಕಿನ ಪಟ್ಟಣಕುಡಿ ಗ್ರಾಮದ ಆದಿತ್ಯ ಪ್ರದೀಪ ಶ್ರೀಪನ್ನವರ(28) ಹಾಗೂ ಅಕ್ಷಯ ಶಂಕರ ನಾರೆ (27) ಬಂಧಿತ ಆರೋಪಿಗಳು.
ಈ ಪ್ರಕರಣಗಳನ್ನು ಭೇದಿಸಲು ಕಾರ್ಯಾಚರಣೆ ನಡೆಸಿದ ಪೊಲೀಸರು ಬುಧವಾರ ಬೆಳಗ್ಗೆ ಕುರ್ಲಿ ಫಾಟಾದಲ್ಲಿ ಬಂಧಿಸಿ ಅವರಿಂದ 208.5 ಗ್ರಾಂ ಬಂಗಾರದ ಆಭರಣ, 760 ಗ್ರಾಂ ಬೆಳ್ಳಿಯ ವಸ್ತುಗಳು ಹಾಗೂ ಕಳ್ಳತನ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಚಿಕ್ಕೋಡಿ‌ ಡಿಎಸ್ಪಿ ಜಿ.ಬಿ. ಗೌಡರ ಮಾರ್ಗದರ್ಶದಲ್ಲಿ ನಿಪ್ಪಾಣಿ ಸಿಪಿಐ ಬಿ.ಎಸ್. ತಳವಾರ ನೇತೃತ್ವದ ತನಿಖಾ ತಂಡದ ಸದಸ್ಯರಾದ ಪಿಎಸ್ಐಗಳಾದ ಅನಿಲ್ ಕುಂಬಾರ, ಖಡಕಲಾಟ ಪಿಎಸ್ ಅನಿತಾ ರಾಠೋಡ, ರಮೇಶ ಪವಾರ, ಎಎಸ್‌ಐ ಎನ್.ಎಚ್. ಪೂಜೇರಿ, ಎ.ಜಿ. ತಹಸೀಲ್ದಾರ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ನಿಪ್ಪಾಣಿ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಶ್ಲಾಘಿಸಿದ್ದಾರೆ.