ಮರಗಳ ನಾಶಕ್ಕೆ ಕಾರಣವಾಗಿರುವ ಸುತ್ತೋಲೆ ವಾಪಸ್ ಪಡೆಯಲು ಆಗ್ರಹ

Advertisement

ಕಲಬುರಗಿ: ಅರಣ್ಯ ಇಲಾಖೆ ಅಧೀನ ಕಾರ್ಯದರ್ಶಿ 2022ರ ನ. 17ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಬೇವು, ಕರಿಜಾಲಿ, ಮಹಾಗನಿ, ಹೊಂಗೆ, ಬಳ್ಳಾರಿ ಜಾಲಿ, ಅಗರ್‍ವುಡ್, ಬಾರೆ, ಶಿವನಿ, ಜೌಗ್ ಬಿದಿರು, ಮೆದರಿ ಬಿದಿರು ಸೇರಿ 10 ಮರಗಳನ್ನು ಪಟ್ಟಿ ಮಾಡಿ ಅವುಗಳನ್ನು ವೃಕ್ಷ ಸಂರಕ್ಷಣಾ ಕಾಯ್ದೆಯಿಂದಲೇ ಹೊರಗಿಟ್ಟಿರೋದರಿಂದ ಕಲ್ಯಾಣ ಕರ್ನಾಟಕದಲ್ಲಿನ ಅರಣ್ಯಕ್ಕೆ ಭಾರಿ ಕುತ್ತು ಬಂದೆರಗಿದೆ ಎಂದು ಕಳವಳ ಹೊರಹಾಕಿರುವ ಪ್ರಗತಿಪರ ರೈತ ಹಣಮಂತರಾವ ಭೂಸನೂರ್ ಕಲ್ಯಾಣ ನಾಡಲ್ಲಿ ಹೆಚ್ಚಾಗಿರುವ ಕರಿಜಾಲಿ, ಬೇವು, ಹೊಂಗೆ, ಹುಣಸೆಯಂತಹ ಮರಗಳಿದಂಲೇ ಅರಣ್ಯ ಇರೋದು. ಇವುಗಳನ್ನು ಕಡಿದರೂ ಕೇಳೋರಿಲ್ಲ ಎಂಬಂತಾದಲ್ಲಿ ಅರಣ್ಯ ನಾಶ ಹೆಚ್ಚುತ್ತದೆ. ಇಲಾಖೆ ತಕ್ಷಣ ಈ ಸುತ್ತೋಲೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಕಲಬುರಗಿ ಭಾಗದಲ್ಲಿ ಮೊದಲೇ ಅರಣ್ಯ ಇಲ್ಲ. ಇದ್ದಬದ್ದ ಕರಿಜಾಲಿ, ಬೇವಿನಂತಹ ಮರಗಳನ್ನೂ ಕಡಿದರೂ ಕೇಳೋರಿಲ್ಲ ಎಂದಾದರೆ ಮುಂದೆ ಹೇಗೆ? ಅರಣ್ಯ ಇಲಾಖೆ ರೈತರಿಗೆ ಅನುಕೂಲ ಮಾಡಿಕೊಡಲು ಈ ಸುತ್ತೋಲೆ ಮಾಡಿದ್ದರೂ ಕೂಡಾ ಇದರಿಂದ ಮರಗಳಿಗೆ ಏಟು ಹೇಚ್ಚುತ್ತಿದೆ. ಇದರಿಂದ ಪರೋಕ್ಷವಾಗಿ ಟಿಂಬರ್ ಮಾಫಿಯಾ ಬೆಳೆಯುತ್ತಿದೆ. ಎಲ್ಲೆಂದರಲ್ಲಿ ಮರಗಳಿಗೆ ಕೊಡಲಿ ಹಾಕೋರು ಹೆಚ್ಚುತ್ತಿದ್ದಾರೆಂದು ಕಳವಳ ಹೊರಹಾಕಿದ್ದಾರೆ.
2022ರ ನ. 17ರಂದು ಹೊರಬಿದ್ದಿರುವ ಕಲ್ಯಾಣ ನಾಡಿನ ಕರಿಜಾಲಿ, ಬೇವು, ಒಹಂಗೆಯಂತಹ ಮರಗಳಿಗೆ ಮಾರಕವಾಗಿರುವ ಸುತ್ತೋಲೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಲು ತಾವೇ ಖುದ್ದಾಗಿ ಶೀಘ್ರದಲ್ಲೇ ಅರಣ್ಯ ಸಚಿವ ಈಶ್ವರ ಖಂಡ್ರೆಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಆಗ್ರಹಿಸುವುದಾಗಿಯೂ ಹಣಮಂತರಾವ ಭೂಸನೂರ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.