ಮಲೆನಾಡಿನ ಬೇಸಾಯ ವಿಜಯಪುರದಲ್ಲೂ ಆಗಬೇಕು

Advertisement

ವಿಜಯಪುರ: ಮಲೆನಾಡಿನಲ್ಲಿ ಬೆಳೆಯುವ ಅಕ್ಕಿ ಸೇರಿದಂತೆ ಎಲ್ಲ ಬಗೆಯ ಬೇಸಾಯ ಬಿಜಾಪುರದಲ್ಲೂ ಆಗಬೇಕು ಎಂದು ಸಚಿವ ಎಂ. ಬಿ. ಪಾಟೀಲ್‌ ಹೇಳಿದ್ದಾರೆ, ಮಮದಾಪುರ ಕೆರೆಯ ವ್ಯಾಪ್ತಿಯಲ್ಲಿ 2ಲಕ್ಷ ಗಿಡಗಳನ್ನು ಬೆಳೆಸುವ ಗುರಿ ಹೊಂದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮಾಡಿರುವ ಅವರು “ರಾಜ್ಯದಲ್ಲೇ 3ನೇ ಅತಿ ದೊಡ್ಡ ಕೆರೆ ಎಂದೇ ಹೆಸರಾಗಿರುವ #ಮಮದಾಪುರಕೆರೆ ವ್ಯಾಪ್ತಿಯಲ್ಲಿ ಸುಮಾರು 56,000 ಗಿಡಗಳು ಅರಳುತ್ತಿವೆ. ಹಂತ ಹಂತವಾಗಿ 2ಲಕ್ಷ ಗಿಡಗಳನ್ನು ಬೆಳೆಸುವ ಗುರಿನಮ್ಮದು.
ಬಿಜಾಪುರವನ್ನು ಆಳಿದ ಅದಿಲ್ ಶಾಹಿ ಅರಸರಿಗೆ ಮಲೆನಾಡಿನ ವೈಭವನ್ನು ತರುವ ಕನಸಿತ್ತು. ಮಲೆನಾಡಿನಲ್ಲಿ ಬೆಳೆಯುವ ಅಕ್ಕಿ ಸೇರಿದಂತೆ ಎಲ್ಲ ಬಗೆಯ ಬೇಸಾಯ ಬಿಜಾಪುರದಲ್ಲೂ ಆಗಬೇಕೆಂದು ಬಯಸಿದ್ದರು. ಇಂದಿನ ಮಮದಾಪುರ ಕೆರೆಯ ಜಾಗವನ್ನು ಗುರುತಿಸಿ ಅಲ್ಲಿದ್ದ 7 ಹಳ್ಳಿಗಳ ಜನರಿಗೆ ಪುನರ್ವಸತಿ ಕಲ್ಪಿಸಿ ಬೃಹತ್ ಕೆರೆ ನಿರ್ಮಿಸಿದರು. ಜಿಲ್ಲೆಯನ್ನು ಜಲಸಂಪನ್ನವಾಗಿಸಿ ಹಸಿರು ಬಿಜಾಪುರ ಕಟ್ಟಿದರು. ಕೆರೆ ಅಚ್ಚುಕಟ್ಟು ಪ್ರದೇಶದ ಕೆಳಭಾಗದಲ್ಲಿ ಬಾಸುಮತಿ ಅಕ್ಕಿ ಸಹಿತ ಎಲ್ಲ ಬೆಳೆಗಳನ್ನು ಬೆಳೆಯಲು ಅನುಕೂಲ ಕಲ್ಪಿಸಿ ಸಸ್ಯಶಾಮಲೆಯಿಂದ ಕಂಗೊಳಿಸುವಂತೆ ಮಾಡಿದ್ದು ಇತಿಹಾಸವಾಗಿದೆ.


ಕಾಲಾಂತರದಲ್ಲಿ ಕೆರೆ ಸಂಪೂರ್ಣವಾಗಿ ಬತ್ತಿ ಹೋಯಿತು. ಜಾಲಿಗಿಡಗಳು ಬೆಳೆದು ನಿಂತವು. ಜಲಸಂಪನ್ಮೂಲ ಇಲಾಖೆ ಸಚಿವನಾದ ನಂತರ ಈ ಕೆರೆಗೆ ಕಾಯಕಲ್ಪ ನೀಡುವ ಕಾರ್ಯ ಆರಂಭವಾಯಿತು. ಅದಿಲ್ ಶಾಹಿ ಅರಸರಕಾಲದ ಗತ ವೈಭವವನ್ನು ಮತ್ತೆ ತರಬೇಕೆಂಬ ಕನಸು ಹೊತ್ತು, ಕೆರೆಯ ಹೂಳು ತೆಗೆಸಿ, ಕೃಷ್ಣಾನದಿ ನೀರಿನಿಂದ ನೀರು ಹರಿಸುವ ಕಾರ್ಯಮಾಡಿದೆ. ಕೆರೆ ಸುತ್ತಲಿನ ಸುಮಾರು 1,560 ಎಕರೆ (624 ಹೆಕ್ಟೇರ್) ಪ್ರದೇಶದಲ್ಲಿ ರಾಜ್ಯಕ್ಕೆ ಮಾದರಿ ಎನಿಸುವ ಅರಣ್ಯ ನಿರ್ಮಿಸುವ ಯೋಜನೆ ಅನುಷ್ಠಾನಗೊಳಿಸಿದೆ. ನಮ್ಮೆಲ್ಲ ಜನತೆಯ ಸಹಕಾರದಿಂದಾಗಿ ಇಲ್ಲಿ ಅರಣ್ಯ ಅರಳುತ್ತಿದೆ…” ಎಂದಿದ್ದಾರೆ.