ಮಾನವ ಮಹಾನ್ ಆಗುವದು ಹೀಗೆ….

Annadanishwara Swami
Advertisement

ಪ್ರಪಂಚದ ಎಲ್ಲ ಪ್ರಾಣಿಗಳು ಒಂದೇ ತೆರನಾಗಿಲ್ಲ. ಅದರಲ್ಲಿಯೂ ಮನುಷ್ಯನಂತೆ ಎಲ್ಲವೂ ಇಲ್ಲ. ಮನುಷ್ಯರೂ ಕೂಡ ಎಲ್ಲರಂತೆಯೂ ಇರುವದಿಲ್ಲ. ಇದು ಕೇವಲ ಸಾಕಾರದ ವಿಷಯವಲ್ಲ. ಅದರಾಚೆಗೆ ಬುದ್ಧಿ ಶಕ್ತಿಯ ಮಾತು. ವೈಚಾರಿಕತೆಯ ವಿಷಯ.
ಇಷ್ಟಕ್ಕೂ ಶಿವನು ಎಲ್ಲ ಜೀವಿಗಳಿಗಿಂತ ಭಿನ್ನವಾಗಿ ಮಾನವನಿಗೆ ಮೂರು ಶಕ್ತಿಗಳನ್ನು ಕರುಣಿಸಿದ್ದಾನೆ. ಅವು ಯಾವೆಂದರೆ ವಾಕ್‌ಶಕ್ತಿ, ಧೀಶಕ್ತಿ, ಕೃತಶಕ್ತಿ.
ಈ ತ್ರೈಶಕ್ತಿಗಳು ಮಾನವರಿಗೆ ಮಾತ್ರ ಲಭಿಸಿದೆ, ಇನ್ನಾವ ಪ್ರಾಣಿಗಳಿಗೆ ಯಾವ ವಿಶೇಷ ಶಕ್ತಿಯು ಇರುವುದಿಲ್ಲ.
ಈ ಶಕ್ತಿಗಳ ಪ್ರಭಾವದಿಂದ ಮನುಷ್ಯ ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಿದೆ. ವಾಕ್‌ಶಕ್ತಿ ಎಂದರೆ ಮಾತು. ಮಾನವನಂತೆ ಇತರ ಪ್ರಾಣಿಗಳಿಗೆ ಈ ಮಾತನಾಡುವ ಶಕ್ತಿ ಇಲ್ಲ. ಮಾತು ಮನುಷ್ಯನಿಗೆ ದೇವ ಕೊಟ್ಟ ಕೊಡುಗೆ ಈ ಮಾತುಗಾರಿಕೆಯಿಂದ ಪರಸ್ಪರರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾನೆ. ಭಾವನೆಗಳನ್ನು ಒಬ್ಬರಿಗೊಬ್ಬರು ತಿಳಿಸಬಲ್ಲರು.
ಧೀಶಕ್ತಿ ಎಂದರೆ ಬುದ್ಧಿ, ಬುದ್ಧಿಯ ಪ್ರಭಾವದಿಂದ ವಿಚಾರ ಸರಣಿ ಬೆಳೆಯುವುದು ಅಲೋಚನೆಗಳು ಹೆಚ್ಚುವವು. ಹೊಸ ಹೊಸ ಅಲೋಚನೆಗಳನ್ನು ಸ್ಪಷ್ಟ ಪಡಿಸುವುದರಿಂದ ಪ್ರಬುದ್ಧತೆ ಬೆಳೆಯುವುದು. ಜಗತ್ತಿನ ವಿಕಾಸ ಮತ್ತು ಅಭಿವೃದ್ಧಿಗಳನ್ನು ಇಂಥ ಧೀಶಕ್ತಿಯ ಮೂಲಕವೇ ನಡೆಯುತ್ತದೆ.
ಮಾನವನು ತನ್ನ ತನ್ನ ಬದ್ಧತೆಯಂತೆ ನಡೆಯಬೇಕಾಗುವದು. ಅವರವರ ಕರ್ತವ್ಯ ಕರ್ಮದಂತೆ ಕಾರ್ಯ ಮಾಡುವುದರಿಂದ ಬದ್ಧತೆ ಹೆಚ್ಚುವುದು.
ತಂದೆಯಾದವನು ಜವಬ್ದಾರಿ ಅಂತ ನಡೆಯುವುದರಿಂದ ಮಕ್ಕಳಿಗೆ ತಮ್ಮ ಕರ್ತವ್ಯದ ಅರಿವುಗಾವುದು. ಕರ್ತವ್ಯಕ್ಕೆ ಬದ್ಧತೆ ಎನಿಸುವುದು. ಇದರಲ್ಲಿಯೆ ಅಲೋಚನೆಗಳ ಪಕ್ವತೆ ಎದ್ದು ತೋರುವದು. ಯಾವುದೇ ವಿಚಾರವನ್ನು ಸ್ಪಷ್ಟವಾಗಿ ತಿಳಿಸುವದರಿಂದ ಅವರವರ ಸಿದ್ಧಾಂತದ ಬದ್ಧತೆ ವ್ಯಕ್ತವಾಗುವದು. ಇಂತಹ ವ್ಯಕ್ತಿಗಳು ಸಮಾಜದ ನಾಯಕರಾಗ ಬಲ್ಲರು. ಸಮಾಜವನ್ನು ಮುನ್ನಡೆಸಬಲ್ಲರು ಇಂತಹ ವ್ಯಕ್ತಿಗಳು ಸ್ಮರಣೀಯರಾಗುತ್ತಾರೆ. ದೇವರು ಎಲ್ಲರಂತೆ ಈ ತ್ರೈಶಕ್ತಿಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡ ಮಾನವ ಮಹಾನ್ ಆಗಲು ಸಾಧ್ಯವಿದೆ.