ಮುಖ್ಯಾಧಿಕಾರಿ ಬದಲಿಸಲು ಒತ್ತಾಯ

ಕುಷ್ಟಗಿ
Advertisement

ಕುಷ್ಟಗಿ: ಪುರಸಭೆ ಮುಖ್ಯಾಧಿಕಾರಿ ಬಿ.ಟಿ.ಬಂಡಿವಡ್ಡರ್ ಪದೇ ಪದೇ ಸಾಮಾನ್ಯ ಸಭೆಗೆ ಗೈರಾಗುತ್ತಿರುವುದರಿಂದ ಈ ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ, ಕಚೇರಿ ಕೆಲಸ ಕಾರ್ಯಕ್ಕೆ ಅಡಚಣೆ ಉಂಟಾಗುತ್ತಿದ್ದು ಕೂಡಲೇ ಅವರನ್ನು ಕುಷ್ಟಗಿ ಪುರಸಭೆ ವತಿಯಿಂದ ಮುಕ್ತಗೊಳಿಸಬೇಕು ಮತ್ತು ಅವರ ಜಾಗಕ್ಕೆ ಬೇರೆಯವರನ್ನು ನೇಮಕ ಮಾಡಬೇಕೆಂದು ಪುರಸಭೆ ಅಧ್ಯಕ್ಷ ಗಂಗಾಧರಯ್ಯ ಹಿರೇಮಠ ಅವರು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಅವರಿಗೆ ಒತ್ತಾಯಿಸಿದ್ದಾರೆ.
ಪುರಸಭೆ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು, ಪುರಸಭೆ ಮುಖ್ಯಾಧಿಕಾರಿ ಕಾರ್ಯವೈಖರಿ ಸರಿ ಇರುವುದಿಲ್ಲ. ಜೊತೆಗೆ ಸಾರ್ವಜನಿಕರಿಗೆ ಸೇವೆ ನೀಡಬೇಕಾದ ಪುರಸಭೆ ಕಾರ್ಯಾಲಯ ಮುಖ್ಯಾಧಿಕಾರಿ ಇಲ್ಲದೇ ಸುಮಾರು 300-400 ಕಡತಗಳು ಬಾಕಿ ಇದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಕೂಡಲೇ ಮುಖ್ಯಾಧಿಕಾರಿ ಬಿ.ಟಿ. ಬಂಡಿವಡ್ಡರ ಅವರಿಗೆ ಅನಾರೋಗ್ಯದ ಕಾರಣ ಕಡ್ಡಾಯ ರಜೆ ನೀಡುವಂತೆ ಮೇಲಧಿಕಾರಿಗಳಿಗೆ ಕ್ರಮ ತೆಗೆದುಕೊಳ್ಳಲು ಮನವಿ ಮಾಡಿಕೊಳ್ಳಲಾಗಿದೆ ಎಂದರು.
ಒಂದೂವರೆ ತಿಂಗಳಿಂದ ಕಚೇರಿಗೆ ಸರಿಯಾಗಿ ಹಾಜರಾಗುತ್ತಿಲ್ಲ. ಫೋನ್ ಮಾಡಿದರೆ ಸ್ವೀಕರಿಸುತ್ತಿಲ್ಲ. ಸಾರ್ವಜನಿಕರಿಗೆ ಕೆಲಸ ಮಾಡಿಕೊಡಲು ದುಡ್ಡು ಕೇಳ್ತಾರೆ, ಜಿಲ್ಲಾಧಿಕಾರಿಗಳಿಗೆ ಸಹ ಈ ಬಗ್ಗೆ ತಿಳಿಸಲಾಗಿದೆ. ಕಚೇರಿಗೆ ಬಾರದೇ ಹಾಜರಿ ಸಹಿ ಇರುವುದು ಗಮನಕ್ಕೆ ಬಂದಿದೆ. ಇಂತಹ ಮುಖ್ಯಾಧಿಕಾರಿಗೆ ಪುರಸಭೆ ವತಿಯಿಂದ ಮುಕ್ತಗೊಳಿಸಬೇಕು ಎಂದರು.