ಮುಸ್ಲಿಮರ ಮೀಸಲಾತಿ ರದ್ದು ಪ್ರಕರಣ: ವಿಚಾರಣೆ ಮುಂದಕ್ಕೆ

Advertisement

ನವದೆಹಲಿ: : ಮುಸ್ಲಿಂ ಮೀಸಲಾತಿಯನ್ನು ರಾಜ್ಯ ಸರ್ಕಾರವು ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾದ ಮೇಲ್ಮನವಿ ಅರ್ಜಿ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ. ಇಂದು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ. ರಾಜ್ಯದಲ್ಲಿ ಮುಸ್ಲಿಮರಿಗೆ ಒಬಿಸಿ ವರ್ಗದಲ್ಲಿ ದಶಕಗಳಷ್ಟು ಹಳೆಯದಾದ ನಾಲ್ಕು ಶೇಕಡಾ ಮೀಸಲಾತಿಯನ್ನು ರದ್ದುಗೊಳಿಸುವ ಕರ್ನಾಟಕ ಸರ್ಕಾರದ ನಿರ್ಧಾರದ ವಿರುದ್ಧದ ಅರ್ಜಿಗಳನ್ನು ಜುಲೈಗೆ ಮುಂದೂಡಿತು. ಕಳೆದ ವಿಚಾರಣೆಯಲ್ಲಿ ನೀಡಲಾದ ಮಧ್ಯಂತರ ಆದೇಶಗಳು ಮುಂದಿನ ಆದೇಶದವರೆಗೆ ಮುಂದುವರಿಯುತ್ತದೆ ಎಂದು ಪೀಠವು ನಿರ್ದೇಶಿಸಿತು ಮತ್ತು ಜುಲೈನಲ್ಲಿ ವಿಷಯವನ್ನು ಪಟ್ಟಿ ಮಾಡಿದೆ.