ಮೇ ೨೯ರಂದು ಕೋಲ್ಕತ್ತಾ-ಹುಬ್ಬಳ್ಳಿ ನಡುವೆ ವಿಶೇಷ ರೈಲು

Advertisement

ಹುಬ್ಬಳ್ಳಿ: ಪ್ರಯಾಣಿಕರ ದಟ್ಟಣೆ ಹೆಚ್ಚಳ ಕಂಡು ಬರುತ್ತಿರುವುದರಿಂದ ಪೂರ್ವ ರೈಲ್ವೆ ವಲಯವು ಏಕಮುಖ (ಒನ್‌ವೇ) ಸೂಪರ್ ಫಾಸ್ಟ್ ರೈಲು ಸಂಚಾರ ಸೇವೆಯನ್ನು ಕೊಲ್ಕತ್ತಾ-ಹುಬ್ಬಳ್ಳಿ ನಡುವೆ ಮೇ ೨೯ರಂದು ವ್ಯವಸ್ಥೆ ಮಾಡಿದೆ.
ಈ ರೈಲು ಮೇ ೨೯ರಂದು ರಾತ್ರಿ ೯.೪೦ಕ್ಕೆ ಕೋಲ್ಕತ್ತಾದಿಂದ ಹೊರಟು ಮೇ ೩೧ರಂದು ಸಂಜೆ ೪ ಗಂಟೆಗೆ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣ ತಲುಪಲಿದೆ. ಭದ್ರಕ್, ಭುವನೇಶ್ವರ, ವಿಜಿಗ್ರಾಮ್, ವಿಶಾಖಪಟ್ಟಣಂ, ವಿಜಯವಾಡ, ಗೂಡೂರ, ರೇಣುಗುಂಟ, ಕಟ್ಪಾಡಿ, ಜೋಲಾರಪೆಟ್ಟೆ, ಬೆಂಗಳೂರು, ತುಮಕೂರು, ಅರಸಿಕೆರೆ, ದಾವಣಗೆರೆ ಮಾರ್ಗವಾಗಿ ಸಂಚರಿಸಲಿದೆ.
೧ ಎಸಿ ಟು ಟೈಯರ್ ಕೋಚ್, ೧ ಎಸಿ ತ್ರಿ ಟೈಯರ್ ಕೋಚ್, ೯ ಸ್ಲೀಪರ್ ಕ್ಲಾಸ್, ೪ ಜನರಲ್ ಸೆಕೆಂಡ್ ಕ್ಲಾಸ್, ೨ ಸೆಕೆಂಡ್ ಕ್ಲಾಸ್ ಕಂ ಲಗೇಜ್, ಬ್ರೇಕ್ ವ್ಯಾನ್, ೧ ಮೋಟರ್ ಪಾರ್ಸಲ್ ವ್ಯಾನ್ ನನ್ನು ಈ ರೈಲು ಒಂದಿರಲಿದೆ ಎಂದು ನೈಋತ್ಯ ರೈಲ್ವೆ ವಲಯ ಪ್ರಕಟಣೆ ತಿಳಿಸಿದೆ