ದಸರಾ ಸ್ಪೆಷಲ್‌: ಮೈಸೂರು-ಧಾರವಾಡ, ವಿಜಯಪುರ ನಡುವೆ ಸಂಚಾರ

Advertisement

ಪ್ರಯಾಣಿಕರ ದಟ್ಟಣೆ ನಿವಾರಣೆಗೆ ನೈಋತ್ಯ ರೈಲ್ವೆಯಿಂದ `ದಸರಾ ವಿಶೇಷ ರೈಲುಗಳ ಓಡಾಟ’

ಹುಬ್ಬಳ್ಳಿ: ದಸರಾ ಹಬ್ಬದ ಕಾರಣಕ್ಕಾಗಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆಯು ಮೈಸೂರು ಮತ್ತು ಧಾರವಾಡ ನಡುವೆ ಹಾಗು ಮೈಸೂರು ಮತ್ತು ಬಿಜಾಪುರ ನಡುವೆ ದಸರಾ ವಿಶೇಷ ರೈಲು ಸೇವೆ ಒದಗಿಸಲಿದೆ ಎಂದು ನೈಋತ್ಯ ರೈಲ್ವೆ ವಲಯ ತಿಳಿಸಿದೆ.
ಮೈಸೂರಿನಿಂದ ಧಾರವಾಡಕ್ಕೆ ( ರೈಲು ಸಂಖ್ಯೆ ೦೬೨೦೫ ) ಅಕ್ಟೋಬರ್ ೨೨ ಮತ್ತು ೨೪ ರಂದು ಎರಡು ಸಲ ಪ್ರಯಾಣವನ್ನು ಪ್ರಾರಂಭಿಸುತ್ತದೆ. ರೈಲು ಮೈಸೂರಿನಿಂದ ರಾತ್ರಿ ೧೦.೩೫ ಕ್ಕೆ ಹೊರಡುತ್ತದೆ ಮತ್ತು ಮರುದಿನ ಬೆಳಿಗ್ಗೆ ೮ ಕ್ಕೆ ಧಾರವಾಡ ತಲುಪುತ್ತದೆ. ಮಾರ್ಗದಲ್ಲಿ ರೈಲಿಗೆ ಕೃಷ್ಣರಾಜನಗರ, ಹೊಳೆನರಸೀಪುರ, ಹಾಸನ, ಅರಸೀಕೆರೆ, ಕಡೂರು, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಬ್ಯಾಡಗಿ, ಹಾವೇರಿ ಮತ್ತು ಹುಬ್ಬಳ್ಳಿಯಲ್ಲಿ ವಾಣಿಜ್ಯ ನಿಲುಗಡೆ ನೀಡಲಾಗಿದೆ.
ಧಾರವಾಡದಿಂದ ಮೈಸೂರಿಗೆ ( ರೈಲು ನಂ.೦೬೨೦೬ ) ಪ್ರಯಾಣವನ್ನು ಎರಡು ಸಲ, ಅಂದರೆ, ಅಕ್ಟೋಬರ್ ೨೩ ಮತ್ತು ೨೫ ರಂದು ಪ್ರಾರಂಭಿಸುತ್ತದೆ. ರೈಲು ಧಾರವಾಡದಿಂದ ೧೧:೧೫ ಗಂಟೆಗೆ ಹೊರಡುತ್ತದೆ ಮತ್ತು ಅದೇ ದಿನ ೯.೩೦ ಕ್ಕೆೆ ಮೈಸೂರು ತಲುಪುತ್ತದೆ. ರೈಲು ಮಾರ್ಗದಲ್ಲಿ ಹುಬ್ಬಳ್ಳಿ, ಹಾವೇರಿ, ಬ್ಯಾಡಗಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಕಡೂರು, ಅರಸೀಕೆರೆ, ಹಾಸನ, ಹೊಳೆನರಸೀಪುರ ಮತ್ತು ಕೃಷ್ಣರಾಜನಗರದಲ್ಲಿ ವಾಣಿಜ್ಯ ನಿಲುಗಡೆ ಇರುತ್ತದೆ ಎಂದು ತಿಳಿಸಲಾಗಿದೆ.
ರೈಲು ಸಂಖ್ಯೆ.೦೬೨೦೫ ಮತ್ತು ೦೬೨೦೬ ಒಂದು ಎರಡನೆಯ ದರ್ಜೆ ಎಸಿ, ಮೂರು ಮೂರನೆಯ ದರ್ಜೆ ಎಸಿ, ಎಂಟು ಸ್ಲೀಪರ್ ದರ್ಜೆ ಮತ್ತು ನಾಲ್ಕು ದ್ವಿತೀಯ ದರ್ಜೆ ಆಸನದ ಕೋಚ್‌ಗಳ ಸಂಯೋಜನೆಯನ್ನು ಹೊಂದಿರುತ್ತದೆ ಎಂದು ತಿಳಿಸಲಾಗಿದೆ.
ಅಕ್ಟೋಬರ್ ೨೦ ರಂದು ಮೈಸೂರಿನಿಂದ ಬಿಜಾಪುರಕ್ಕೆ ( ರೈಲು ನಂ.೦೬೨೦೩) ಒಂದು ಬಾರಿಯ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಅದು ಕೆಎಸ್‌ಆರ್ ಬೆಂಗಳೂರು ನಿಲ್ದಾಣದ ಮೂಲಕ ಹಾದು ಹೋಗುತ್ತದೆ. ರೈಲು ಮೈಸೂರಿನಿಂದ ೫.೩೦ ಕ್ಕೆÉ ಹೊರಟು ಮರುದಿನ ೧೦ ಗಂಟೆಗೆ ಬಿಜಾಪುರ ತಲುಪಲಿದೆ. ರೈಲಿಗೆ ಮಾರ್ಗ ಮದ್ಯದಲ್ಲಿ ಮಂಡ್ಯ, ರಾಮನಗರ, ಕೆಂಗೇರಿ, ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಕರಜಗಿ, ಹುಬ್ಬಳ್ಳಿ, ಹೊಳೆ ಆಲೂರು, ಬಾದಾಮಿ ಮತ್ತು ಬಾಗಲಕೋಟೆಯಲ್ಲಿ ವಾಣಿಜ್ಯ ನಿಲುಗಡೆ ಇರುತ್ತದೆ.
ಬಿಜಾಪುರದಿಂದ ಮೈಸೂರಿಗೆ (ರೈಲು ನಂ.೦೬೨೦೪) ಹಾಸನ ಮಾರ್ಗವಾಗಿ ೨೧ ನೇ ಅಕ್ಟೋಬರ್ ರಂದು ದಸರಾ ವಿಶೇಷ ಪ್ರಯಾಣವನ್ನು ನಡೆಸಲಿದೆ. ರೈಲು ಬಿಜಾಪುರದಿಂದ ೧೧.೪೫ ಕ್ಕೆ ಹೊರಟು ಮರುದಿನ ೩ ಗಂಟೆಗೆ ಮೈಸೂರು ತಲುಪುತ್ತದೆ. ಮಾರ್ಗದಲ್ಲಿ ರೈಲಿಗೆ ಬಾಗಲಕೋಟೆ, ಬಾದಾಮಿ, ಹೊಳೆ ಆಲೂರು, ಹುಬ್ಬಳ್ಳಿ, ಕರಜಗಿ, ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ಹಾಸನ, ಹೊಳೆನರಸೀಪುರ ಮತ್ತು ಕೃಷ್ಣರಾಜನಗರದಲ್ಲಿ ವಾಣಿಜ್ಯ ನಿಲುಗಡೆ ಇರುತ್ತದೆ.
ರೈಲು ಸಂಖ್ಯೆ.೦೬೨೦೩ ಮತ್ತು ೦೬೨೦೪ ಒಂದು ಎರಡನೆಯ ದರ್ಜೆ ಎಸಿ, ಮೂರು ಮೂರನೆಯ ದರ್ಜೆ ಎಸಿ, ಎಂಟು ಸ್ಲೀಪರ್ ದರ್ಜೆ ಮತ್ತು ನಾಲ್ಕು ದ್ವಿತೀಯ ದರ್ಜೆ ಆಸನದ ಕೋಚ್‌ಗಳ ಸಂಯೋಜನೆಯನ್ನು ಹೊಂದಿರುತ್ತದೆ.

ಮೈಸೂರು-ಚಾಮರಾಜನಗರ -ಬೆಂಗಳೂರು- ರೈಲು ಸಮಯ ಪರಿಷ್ಕರಣೆ: ಮೈಸೂರಿನಿಂದ ಚಾಮರಾಜನಗರ ಮತ್ತು ಮೈಸೂರಿನಿಂದ ಕೆಎಸ್‌ಆರ್ ಬೆಂಗಳೂರು ನಡುವೆ ಸಂಚರಿಸುವ ದಸರಾ ವಿಶೇಷ ರೈಲುಗಳ ಸಮಯ ಪರಿಷ್ಕರಣೆ ಮಾಡಲಾಗಿದೆ ಎಂದು ತಿಳಿಸಿದೆ.
ರೈಲು ಸಂಖ್ಯೆ.೦೬೫೯೭ ಈಗ ಕೆಎಸ್‌ಆರ್ ಬೆಂಗಳೂರಿನಿಂದ ೫ ಗಂಟೆಗೆ ಹೊರಟು ೮..೧೫ಕ್ಕೆ ಮೈಸೂರು ತಲುಪಲಿದೆ. ಪ್ರತಿಯಾಗಿ ರೈಲು ನಂ.೦೬೫೯೮ ಮೈಸೂರಿನಿಂದ ೮.೩೦ ಗಂಟೆಗೆ ಹೊರಟು ೧೧.೩೦ಗಂಟೆಗೆ ಕೆಎಸ್‌ಆರ್ ಬೆಂಗಳೂರು ತಲುಪಲಿದೆ. ಈ ವಿಶೇಷ ರೈಲುಗಳು ಹೆಚ್ಚುವರಿ ಜನದಟ್ಟಣೆ ತೆರವುಗೊಳಿಸಲು ಅಕ್ಟೋಬರ್ ೨೦ ರಿಂದ ಅಕ್ಟೋಬರ್ ೨೪ ರವರೆಗೆ ಸೇವೆಗಳನ್ನು ಹೊಂದಿರುತ್ತವೆ.
ರೈಲು ನಂ.೦೬೨೮೩ ಮೈಸೂರಿನಿಂದ ಚಾಮರಾಜನಗರಕ್ಕೆ ಅಕ್ಟೋಬರ್ ೨೪ ರಂದು ೮.೪೫ ಗಂಟೆಗೆ ಮೈಸೂರಿನಿಂದ ಹೊರಟು ೧೦.೪೦ ಗಂಟೆಗೆ ಚಾಮರಾಜನಗರ ತಲುಪಲಿದೆ. ಮತ್ತು ಹಿಂದಿರುಗುವ ದಿಕ್ಕಿನಲ್ಲಿ ರೈಲು ನಂ.೦೬೨೮೪ ಅಕ್ಟೋಬರ್ ೨೪ ರಂದು ೧೧ಕ್ಕೆ ಗಂಟೆಗೆ ಚಾಮರಾಜನಗರದಿಂದ ಹೊರಟು ಮರುದಿನ ೧ ಗಂಟೆಗೆ ಮೈಸೂರಿಗೆ ತಲುಪುತ್ತದೆ.
ಪ್ರಯಾಣಿಸುವ ಸಾರ್ವಜನಿಕರು ಈ ದಸರಾ ಹಬ್ಬದ ಋತುವಿನಲ್ಲಿ ತೊಂದರೆ ರಹಿತ ಪ್ರಯಾಣಕ್ಕಾಗಿ ಈ ವಿಶೇಷ ರೈಲು ಸೇವೆಗಳನ್ನು ಬಳಸಿಕೊಳ್ಳಬಹುದು ಮತ್ತು ಪ್ರಯಾಣಿಕರು ಕಾಯ್ದಿರಿಸದ ಟಿಕೆಟ್‌ಗಳನ್ನು ತೊಂದರೆ ಮುಕ್ತವಾಗಿ ಖರೀದಿಸಲು ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ನೈಋತ್ಯ ರೈಲ್ವೆ ವಲಯ ಮನವಿ ಮಾಡಿದೆ.