ಮೋದಿಯೂ ಇಲ್ಲ, ಪಾದಿಯೂ ಇಲ್ಲ… ನಾನೇ ದೇವ್ರು

Shivaraj Patil
Advertisement

ರಾಯಚೂರು: ಬಿಜೆಪಿ ಶಾಸಕರೊಬ್ಬರು ಸ್ವತಃ ತಮ್ಮನ್ನು ತಾವು ಹೊಗಳಿಕೊಳ್ಳುವ ಭರದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ವರಿಷ್ಠರ ಬಗ್ಗೆ ಲಘುವಾಗಿ ಮಾತನಾಡಿದ ಆಡಿಯೋವೊಂದು ವೈರಲ್‌ ಆಗಿದೆ.
ರಾಯಚೂರು ನಗರ ಬಿಜೆಪಿ ಶಾಸಕ ಡಾ. ಶಿವರಾಜ್ ಪಾಟೀಲ್‌ ಮಾತನಾಡಿದ 3 ನಿಮಿಷಗಳ ಫೋನ್‌ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯಾರೊಬ್ಬರೂ ತಮ್ಮನ್ನು ಪ್ರಶ್ನಿಸಲು ಸಾಧ್ಯವಿಲ್ಲ ಮತ್ತು ತಾನು ಯಾವುದೇ ಗೂಂಡಾಗಳ ಮಾತನ್ನು ಕೇಳುವುದಿಲ್ಲ ಎಂದು ಪಾಟೀಲ್ ಆರೋಪಿಸಿದ್ದಾರೆ. ಮೋದಿ ಇಲ್ಲ, ಪಾದಿಯೂ ಇಲ್ಲ. ಇರೋದು ನಾನೊಬ್ಬನೇ ಶಿವರಾಜ್ ಪಾಟೀಲ್, ನಾನೇ ದೇವ್ರು, ನಾನಿದ್ರೆ ಜಗತ್ತು. ನಾನು ಯಾವುದೇ ವ್ಯಕ್ತಿಗಳ ಮಾತನ್ನು ಕೇಳುವುದಿಲ್ಲ. ಮೋದಿಯವರ ರೈಟ್ ಹ್ಯಾಂಡ್ ಬಗ್ಗೆನೂ ನಾನೇನೂ ತಲೆಕೆಡಿಸಿಕೊಂಡಿಲ್ಲ. ನನಗೆ ಯಾವುದೇ ಬಲ ಅಥವಾ ಎಡ ಇಲ್ಲ. ನನ್ನ ಕೈಯಿ, ನನ್ನ ಕಾಲು. ನಾನು ಸಿಂಗಲ್ ಮ್ಯಾನ್ ಆರ್ಮಿ. ನಾನೇ ಮೋದಿ, ನಾನೇ ಟ್ರಂಪ್. ನನ್ನೊಂದಿಗೆ ಯಾರೂ ಆಟವಾಡಲು ಸಾಧ್ಯವಿಲ್ಲ’ “ಸೋಮಶೇಖರ್ ರೆಡ್ಡಿ, ಶ್ರೀರಾಮುಲುಗೂ ನಾನು ಕೇರ್ ಮಾಡಲ್ಲ. ನನ್ನ ಮುಂದೆ ಏನೂ ನಡೆಯಂಗಿಲ್ಲ. ಮೊದಲಿನಿಂದಲೂ ನನ್ನ ಕ್ಷೇತ್ರಕ್ಕೆ ಲೀಡರ್ ಗಳಿಗೆ ಬಾ ಅಂತೀನಾ…? ನನಗೆ ಯಾರೂ ಇಲ್ಲ.. ನಾನು ಸಿಂಗಲ್ ಆರ್ಮಿ” ಎಂದಿದ್ದಾರೆ. ನಾನು ದೇವರಂತೆ, ಪ್ರತಿದಿನ ನನ್ನ ಕಾಲಿಗೆ ಸ್ಪರ್ಶಿಸಿ ಆಶೀರ್ವಾದ ಪಡೆಯಲು ನನ್ನ ಹುಡುಗರನ್ನು ಕೇಳುತ್ತೇನೆ’ ಎಂದು ಹೇಳಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾದ ಸಂದರ್ಭದಲ್ಲಿಯೇ ಈ ಆಡಿಯೋ ವೈರಲ್‌ ಆಗಿರುವುದು ಪಕ್ಷಕ್ಕೆ ಮುಜುಗರ ತಂದಿದೆ.