ಮೋಹನ ಭಾಗವತ್ ಅವರಂತೆ ನಾನು ಹೇಳಿಲ್ಲ

Advertisement


ಹುಬ್ಬಳ್ಳಿ : ಜಾತಿ ವ್ಯವಸ್ಥೆ ಮಾಡಿದವರು ಪಂಡಿತರು ಎಂದು ಮೋಹನ್ ಭಾಗವತ್ ಅವರ ತರಹ ನಾನು ಅಷ್ಟೊಂದು ಗಂಭೀರವಾಗಿ ಹೇಳಿಲ್ಲ. ಭಾಗವತ್ ಅವರಷ್ಟು ನಾನು ದೊಡ್ಡವನಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾಗವತರ ಹೇಳಿಕೆಗೂ ನನ್ನ ಹೇಳಿಕೆಗೂ ವಿಭಿನ್ನತೆ ಇದೆ. ನಾನು ಬ್ರಾಹ್ಮಣರನ್ನು ಟೀಕಿಸಿಲ್ಲ. ಪೇಶ್ವೆ ಡಿಎನ್ಎ ಒಡೆದಾಳುವ, ಹಿಂಸಾಚಾರ ಮನೋಭಾವದ ಬಗ್ಗೆ ಹೇಳಿದ್ದೇನೆ. ಕೆಲವರು ನನ್ನ ಹೇಳಿಕೆ ಬಗ್ಗೆ ಮಾತನಾಡಿದ್ದಾರೆ ಅಷ್ಟೇ. ಇಡೀ ಬ್ರಾಹ್ಮಣ ಸಮುದಾಯ ನನ್ನ ವಿರುದ್ಧ ಪ್ರತಿಭಟಿಸಿಲ್ಲ. ನನ್ನ ಹೇಳಿಕೆ ಸರಿಯಾಗಿ ಅರ್ಥ ಮಾಡಿಕೊಳ್ಳದೇ ಇರುವವರು ತಪ್ಪು ಮಾರ್ಗದರ್ಶನ ಮಾಡಿ ಪ್ರತಿಭಟನೆ ಮಾಡಿಸರಬಹುದಷ್ಟೇ ಎಂದು ಹೇಳಿದರು.