ರಕ್ಷಿತಾ ಪೋಷಕರಿಗೆ ಪರಿಹಾರ ಧನ ಚೆಕ್ ವಿತರಣೆ

ಚೆಕ್ ವಿತರಣೆ
Advertisement

ಚಿಕ್ಕಮಗಳೂರು: ಬಸ್‌ನಿಂದ ಕೆಳಗೆ ಬಿದ್ದು ಮೆದುಳು ನಿಷ್ಕ್ರಿಯವಾಗಿ ಅಂಗಾಂಗ ದಾನ ಮಾಡಿದ್ದ ಕಡೂರು ತಾಲೂಕಿನ ಸೋಮನಹಳ್ಳಿ ತಾಂಡ್ಯಾದ ರಕ್ಷಿತಾ ಬಾಯಿ(17) ಪೋಷಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರು ಜಿಲ್ಲಾಡಳಿತದ ವತಿಯಿಂದ ಪರಿಹಾರ ಧನದ ಚೆಕ್ ನೀಡಿದರು.
ಜಿಲ್ಲಾಡಳಿತ ವತಿಯಿಂದ ರಕ್ಷಿತಾ ಬಾಯಿ ಅವರ ಕುಟುಂಬಕ್ಕೆ ಐದು ಲಕ್ಷ ರೂಪಾಯಿ, ಸಚಿವ ಬೈರತಿ ಬಸವರಾಜ ಅವರು ವೈಯಕ್ತಿಕವಾಗಿ ಎರಡು ಲಕ್ಷ ರೂಪಾಯಿ ಹಾಗೂ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ವೈಯಕ್ತಿಕವಾಗಿ ಒಂದು ಲಕ್ಷ ರೂಪಾಯಿಗಳ ಚೆಕ್ ನೀಡಿದರು.
ನಗರಾಭಿವೃದ್ಧಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ(ಬೈರತಿ) ಅವರು ಮಂಗಳವಾರ ಸೋಮನಹಳ್ಳಿ ತಾಂಡ್ಯಾಕ್ಕೆ ಭೇಟಿ ನೀಡಿ ಅಂಕಿತಾ ಪೋಷಕರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿದರು.
ಕೆಲ ದಿನಗಳ ಹಿಂದೆ ಕಡೂರು ಕಾಲೇಜಿಗೆ ತೆರಳಲು ಬಸ್ ಹತ್ತುವಾಗ ಅಂಕಿತಾ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ತಲೆಗೆ ಪೆಟ್ಟು ಬಿದ್ದು ಮೆದುಳು ನಿಷ್ಕ್ರಿಯಗೊಂಡಿತ್ತು.
ನಂತರ ಆಕೆಯ ತಂದೆ ತಾಯಿ ಗಟ್ಟಿ ಮನಸ್ಸು ಮಾಡಿ ರಕ್ಷಿತಾ ಬಾಯಿ ಅಂಗಾಂಗಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದರು.