ರಸ್ತೆ ಮಧ್ಯೆ ಸ್ಪ್ರೈಟ್…

Advertisement

ವಿಜಯಪುರ: ನಸುಕಿನಜಾವ  ಜಮಖಂಡಿ-ವಿಜಯಪುರ ಮಾರ್ಗವಾಗಿ ಸ್ಪ್ರೈಟ್ ಕಂಪನಿಯ ಪೇಯದ ಬಾಟಲಿಗಳನ್ನು ಸಾಗಿಸುತ್ತಿದ್ದ ಲಾರಿ ರಸ್ತೆ ಮಧ್ಯೆಯೇ ಪಲ್ಟಿಯಾಗಿ ಬಿದ್ದಿದ್ದು, ಪೇಯದ ಬಾಟಲಿಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅಪಘಾತದಲ್ಲಿ ಚಾಲಕ ಸೇರಿದಂತೆ ಯಾರಿಗೂ ಅಪಾಯವಾಗಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.