ರಾಜಕೀಯವಾಗಿ ಕಾಂಗ್ರೆಸ್, ಎಚ್.ಕೆ. ಪಾಟೀಲರ ಡೇಟ್ ಎಕ್ಸ್ಪೈರ್

ಪ್ರಲ್ಹಾದ್ ಜೋಶಿ
Advertisement

ಹುಬ್ಬಳ್ಳಿ: ರಾಜಕೀಯವಾಗಿ ಕಾಂಗ್ರೆಸ್ ಪಕ್ಷ ಮತ್ತು ಎಚ್.ಕೆ. ಪಾಟೀಲ ಅವರ ಡೇಟ್ ಎಕ್ಸ್ಪೈರ್ ಆಗಿದೆ. ಹೀಗಾಗಿ, ಡೇಟ್ ಬಗ್ಗೆ ಅವರು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳಸಾ ಬಂಡೂರಿ ಯೋಜನೆ ವಿಸ್ತೃತ ಯೋಜನಾ ವರದಿ(ಡಿಪಿಆರ್)ಗೆ ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಪತ್ರ ಬರೆದಿದೆ. ಅದರಲ್ಲಿ ದಿನಾಂಕ ಇರುವುದು ಜಗಜ್ಜಾಹೀರಾಗಿದೆ. ಆದg,ೆ ಕಾಂಗ್ರೆಸ್‌ನವರಿಗೆ ದಿನಾಂಕವಿರುವುದನ್ನು ನೋಡೊಕೆ ಬಂದಿಲ್ಲ. ಎಚ್.ಕೆ. ಪಾಟೀಲ ಅವರು ರಾಜಕೀಯ ಲಾಭಕ್ಕಾಗಿ ಮಾಡಿದ್ದಾರೋ ಅಥವಾ ಮುರ್ಖತನಕ್ಕೆ ಮಾಡಿದ್ದಾರೋ ನಿಜಕ್ಕೂ ಅರ್ಥವಾಗಿಲ್ಲ. ಡಿ.೨೯ ಕ್ಕೆ ಆದೇಶವಾಗಿದೆ ಎಂದು ಸ್ಪಷ್ಟನೆ ನೀಡಿದರು.
ಶುಕ್ರವಾರವಷ್ಟೇ ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ.ಪಾಟೀಲ್ ಅವರು ಪತ್ರಿಕಾಗೋಷ್ಠಿ ನಡೆಸಿ ಜೋಶಿ ಅವರು ಕೇಂದ್ರ ಜಲ ಆಯೋಗ ಡಿಪಿಆರ್‌ಗೆ ಅನುಮತಿ ನೀಡಿದೆ ಎಂದು ಘೋಷಿಸಿರುವುದು ಸುಳ್ಳು. ನಿರ್ಗತಿಕ ಆದೇಶ. ದಿನಾಂಕವಿಲ್ಲ, ಸಹಿ ಇಲ್ಲ ಎಂದು ವಾಗ್ದಾಳಿ ನಡೆಸಿದ್ದರು.
ಕಾಂಗ್ರೆಸ್ ನಾಯಕರು ಬಾಲಿಶವಾಗಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕರ್ನಾಟಕಕ್ಕೆ ಒಂದು ಹನಿ ನೀರು ಬಿಡುವುದಿಲ್ಲ ಎಂದಿದ್ದರು. ಬಳಿಕ ಬಿಜೆಪಿ ನಿಯೋಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ್ದೆವು. ಅನುಮತಿ ನೀಡಲು ಮನವಿ ಮಾಡಿದ್ದೆವು. ಆದರೆ, ಕಾಂಗ್ರೆಸ್‌ನವರು ಏನೂ ಮಾಡಲಿಲ್ಲ ಎಂದು ಹೇಳಿದರು.
ಡಿಪಿಆರ್ ಈಗೇಕೆ ತಂದಿದ್ದಾರೆ. ಇಷ್ಟು ದಿನ ಯಾಕೆ ಮಾಡಲಿಲ್ಲ ಎಂದು ಸಿದ್ದರಾಮಯ್ಯನವರು ಪ್ರಶ್ನೆ ಮಾಡಿದ್ದಾರೆ. ಹೌದು ನಾವು ಈಗ ಡಿಪಿಆರ್ ಮಾಡಿದ್ದೇವೆ. ಆದರೆ, ಕಾಂಗ್ರೆಸ್‌ನವರು ೫೫ ವರ್ಷ ಅಧಿಕಾರದಲ್ಲಿದ್ದರು. ಎಲ್ಲ ಹಂತದಲ್ಲೂ ಕಾಂಗ್ರೆಸ್ ಪಕ್ಷದ್ದೇ ಆಡಳಿತ. ಅರ‍್ಯಾಕೆ ಮಾಡಲಿಲ್ಲ ಎಂದು ಜೋಶಿ ವಾಗ್ದಾಳಿ ನಡೆಸಿದರು.
ಹೀಗಾಗಿ ಎಚ್.ಕೆ. ಪಾಟೀಲ ಮತ್ತು ಸಿದ್ದರಾಮಯ್ಯ ರಾಜಕೀಯವಾಗಿ ಔಟ್‌ಡೇಟೆಡ್ ಆಗುತ್ತಿದ್ದಾರೆ ಆದ್ದರಿಂದ ಡೇಟ್ ಬಗ್ಗೆ ಮಾತನಾಡುತ್ತಿದ್ದಾರೆ. ಕ್ಷುಲ್ಲಕ ತನಕ್ಕೂ ಹಾಗೂ ಬಾಲಿಶ್ ತನಕ್ಕೂ ಒಂದು ಮೀತಿ ಇರಬೇಕು ಎಂದು ಹೇಳಿದರು.
ಅರಣ್ಯ ಇಲಾಖೆ ಅನುಮೋದನೆ ಶೀಘ್ರ
ಡಿಪಿಆರ್ ಅನುಮತಿ ದೊರೆತ ಬಳಿಕ ಅರಣ್ಯ ಇಲಾಖೆಯ ಅನುಮೋದನೆ ಸಿಗಲಿದೆ. ಕಳಸಾ ಹಾಗೂ ಬಂಡೂರಿ ಬೇರೆ ಬೇರೆ ಯೋಜನೆಯಾಗಿದ್ದು, ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಯೋಜನೆ ಅನುಷ್ಠಾನಕ್ಕೆ ಸುಮಾರು ೬೫ ಎಕರೆ ಭೂಮಿ ಬೇಕಾಗುತ್ತದೆ ಎಂದು ಜೋಶಿ ಹೇಳಿದರು.
ಕರ್ನಾಟಕದಲ್ಲಿ ಅರಣ್ಯ ಇಲಾಖೆಯ ಅನುಮೋದನೆ ದೊರೆಯಲಿದೆ. ಆದಷ್ಟು ಬೇಗ ಅನುಮತಿ ಪಡೆದು ಎರಡು ತಿಂಗಳಲ್ಲಿ ಯೋಜನೆಯ ಕಾಮಗಾರಿಗೆ ಶಂಕುಸ್ಥಾಪನೆ ಮಾಡುತ್ತೇವೆ. ಕುಡಿಯುವ ನೀರಿಗಾಗಿ ಪರಿಸರ ಇಲಾಖೆಯ ಅನುಮತಿ ಅಗತ್ಯವಿಲ್ಲ.