ರಾಜಯೋಗದಲ್ಲಿ BA ಕಲಿತ ಗಂಡು

Advertisement

ಬೆಂಗಳೂರು: ಧರ್ಮಣ್ಣ ಅಭಿನಯದ ರಾಜಯೋಗ ಚಿತ್ರದ B.A ಗಂಡು ಎಂಬ ಹಾಡು ಇಂದು ಆನಂದ ಆಡಿಯೋ ಮೂಲಕ ಬಿಡುಗಡೆಯಾಗಿದೆ.
ಈ ಸಿನಿಮಾದ ಮೊದಲ ಹಾಡನ್ನು ಅಭಿಷೇಕ್ ಅಂಬರೀಷ್ ಬಿಡುಗಡೆ ಮಾಡಿದ್ದಾರೆ, ಹಾಡಿಗೆ ಲಿಂಗರಾಜು ಅವರೇ ಸಾಹಿತ್ಯ ರಚಿಸಿದ್ದು, ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಮತ್ತು ಗಾಯಕಿ ಅನನ್ಯಾ ಭಟ್ ಧ್ವನಿ ನೀಡಿದ್ದಾರೆ.
ರಾಜಯೋಗ ಚಿತ್ರಕ್ಕೆ ಲಿಂಗರಾಜ ಉಚ್ಚಂಗಿ ದುರ್ಗ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದ ಹಾಡುಗಳಿಗೆ ಅಕ್ಷಯ್ ಎಸ್ ರಿಷಬ್ ಸಂಗೀತ ನೀಡಿದ್ದಾರೆ. ನವೆಂಬರ್‌ ಮೊದಲ ವಾರದಲ್ಲಿ ಈ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.
ರಾಜಯೋಗದಲ್ಲಿ BA ಕಲಿತ ಗಂಡಿನ ಖಯಾಲಿಯ ಹಾಡನ್ನು ನೀವು ಒಮ್ಮೆ ನೋಡಿ..