ರಾಜ್ಯದಲ್ಲಿ ಮತ್ತಷ್ಟು ಜಪಾನ್ ಹೂಡಿಕೆ

Advertisement

ಬೆಂಗಳೂರು: ಜಪಾನಿನ ಮತ್ತಷ್ಟು ಕಂಪನಿಗಳು ಕರ್ನಾಟಕದಲ್ಲಿಯೇ ತಮ್ಮ ಉತ್ಪಾದನಾ ಚಟುವಟಿಕೆಗಳನ್ನು ಆರಂಭಿಸುವಂತೆ ಆಹ್ವಾನಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು “ಭಾರತದಲ್ಲಿನ ಜಪಾನ್ ಕಾನ್ಸೋಲ್ ಜನರಲ್ ಶ್ರೀ #NakaneTsutomu ಹಾಗೂ ಆ ದೇಶದ ಸಂಸದೀಯ ನಿಯೋಗದ ಸದಸ್ಯರು ಈ ದಿನ ನನ್ನನ್ನು ಭೇಟಿಮಾಡಿ ಮಾತುಕತೆ ನಡೆಸಿದರು. ಕರ್ನಾಟಕ ಮತ್ತು ಜಪಾನ್ ನಡುವಿನ ಸಂಬಂಧ ಮೊದಲಿನಿಂದಲೂ ರಚನಾತ್ಮಕವಾಗಿದೆ. ಇದನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ರಾಜ್ಯ ಸರಕಾರವು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ.
ಈಚಿನ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ, ಮಶೀನ್ ಲರ್ನಿಂಗ್, EVಗಳ ತಯಾರಿಕೆ ಮುಂತಾದ ಕ್ಷೇತ್ರಗಳಲ್ಲಿ ರಾಜ್ಯವು ಮುಂಚೂಣಿಯಲ್ಲಿದ್ದು, ಜಾಗತಿಕ ಮಟ್ಟದ ಸಂಶೋಧನಾ ಕೇಂದ್ರಗಳನ್ನೂ ಹೊಂದಿದ್ದು ಹೂಡಿಕೆದಾರರಿಗೆ ನೆರವಾಗಲಿದೆ.
ರಾಜ್ಯದಲ್ಲಿ ಟೊಯೋಟಾ, ಹಿಟಾಚಿ, ಮಿತ್ಸುಬಿಶಿ, ಹೋಂಡಾ ಸೇರಿದಂತೆ ಜಪಾನಿನ 525ಕ್ಕೂ ಹೆಚ್ಚು ಕಂಪನಿಗಳಿವೆ. ತುಮಕೂರಿನಲ್ಲಿ ಜಪಾನ್ ಕೈಗಾರಿಕಾ ಟೌನ್ ಶಿಪ್ ಇದೆ. ತಂತ್ರಜ್ಞಾನ ಪರಿಣತಿಗೆ ಹೆಸರಾಗಿರುವ ಜಪಾನಿನ ಮತ್ತಷ್ಟು ಕಂಪನಿಗಳು ಕರ್ನಾಟಕದಲ್ಲಿಯೇ ತಮ್ಮ ಉತ್ಪಾದನಾ ಚಟುವಟಿಕೆಗಳನ್ನು ಆರಂಭಿಸುವಂತೆ ಆಹ್ವಾನಿಸಿದೆ ಎಂದಿದ್ದಾರೆ.