ರಾಜ್ಯದ ಜನರಿಗೆ ಈಗ ಭ್ರಷ್ಟಾಚಾರದ ಗ್ಯಾರಂಟಿ ಸಿಕ್ಕಿದೆ

Advertisement

ಬೆಂಗಳೂರು: ರಾಜ್ಯದ ಜನರಿಗೆ ಈಗ ಭ್ರಷ್ಟಾಚಾರದ ಗ್ಯಾರಂಟಿ ಸಿಕ್ಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್‌ ಮೂಲಕ ಕುಟಕಿದ್ದಾರೆ, ಸಾಮಾಜಿಕ ಜಾಲತಾಣದಲ್ಲಿ ಸರಣಿ ಟ್ವೀಟ್‌ ಮಾಡಿರುವ ಅವರು “ರಾಜ್ಯದ ಜನರಿಗೆ ಈಗ ಭ್ರಷ್ಟಾಚಾರದ ಗ್ಯಾರಂಟಿ ಸಿಕ್ಕಿದೆ. ‘ಕೈ’ಕಮಾಂಡ್ #ATMSarkara ಕ್ಕೆ ಕಲೆಕ್ಷನ್ ಟಾಸ್ಕ್ ನೀಡುತ್ತಿದೆ. ಅದನ್ನು ಸಚಿವರು ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಈಗ ಸಚಿವ ಚೆಲುವರಾಯಸ್ವಾಮಿ ಸರದಿ. ಅಧಿಕಾರಿಗಳನ್ನು ಬಳಸಿಕೊಂಡು ಕಲೆಕ್ಷನ್ ಮಾಡಿ ಎನ್ನುವುದನ್ನು ಹೈಕಮಾಂಡ್ ಸಭೆಯಲ್ಲಿ ಸೂಚನೆ ಕೊಟ್ಟಿದ್ದೇ? ಭ್ರಷ್ಟಾಚಾರದ‌ ಪ್ರಕರಣವನ್ನು ದಿಕ್ಕು ತಪ್ಪಿಸಲು ಕಾಂಗ್ರೆಸ್ ವಿರುದ್ಧದ ಪತ್ರಗಳನ್ನೆಲ್ಲಾ ‘ನಕಲಿ ಪತ್ರ’ ಎನ್ನುವುದು ಕಾಂಗ್ರೆಸ್ ತಂತ್ರ.
ಈಗ ಚೆಲುವರಾಯಸ್ವಾಮಿ ವಿರುದ್ಧದ ಪತ್ರವನ್ನೇ ನಕಲಿ ಎನ್ನುವ ಮೂಲಕ ರಾಜಭವನದ ಘನತೆ, ರಾಜ್ಯಪಾಲರ ನಡೆಗೆ ಈ ಸರ್ಕಾರ ಅವಮಾನ ಮಾಡುತ್ತಿದೆ. ಅಧಿಕಾರಕ್ಕೆ ಬಂದಾಗಿನಿಂದ ಒಂದಿಲ್ಲೊಂದು ಹಳವಂಡಗಳನ್ನು ಮಾಡುತ್ತಿರುವ ಚೆಲುವರಾಯಸ್ವಾಮಿ, ಈಗ ತಮ್ಮ ಇಲಾಖೆಯಲ್ಲೇ ಕಲೆಕ್ಷನ್ ಮಾಡಲು ಇಳಿದಿದ್ದಾರೆ. ಇಂತಹ ಪರಮ ಭ್ರಷ್ಟ ಸಚಿವರ ರಾಜೀನಾಮೆ ಪಡೆಯಲು ಮೀನಾಮೇಷ ಎಣಿಸುತ್ತಿರುವುದೇಕೆ ಸಿದ್ದರಾಮಯ್ಯ ಅವರೇ, ಇನ್ನೂ ನಿಮ್ಮ ಕಲೆಕ್ಷನ್ ಟಾರ್ಗೆಟ್ ಮುಟ್ಟಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.