ರಾಜ್ಯಮಟ್ಟದ ಕಿತ್ತೂರ ಉತ್ಸವಕ್ಕೆ ಸಕಲ ಸಿದ್ಧತೆ

ಕಿತ್ತೂರ ಉತ್ಸವ
Advertisement

ಚನ್ನಮ್ಮನ ಕಿತ್ತೂರು: ಪ್ರಧಾನಿ ನರೆಂದ್ರ ಮೋದಿ ಅವರು ಐತಿಹಾಸಿಕ ಕಿತ್ತೂರು ಮೇಲೆ ವಿಶೇಷ ಕಾಳಜಿಯನ್ನು ಹೊಂದಿದ್ದು. ಈ ಸಲದ ಉತ್ಸವಕ್ಕೆ ಪ್ರಧಾನಿಗಳನ್ನು ಹಾಗೂ ಕಿತ್ತೂರು ಮಹಿಳಾ ಶೌರ್ಯದ ಪ್ರತೀಕವಾದ್ದರಿಂದ ರಾಷ್ಟ್ರಪತಿಗಳಾಧ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಲಾಗುವುದು ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಜಿಲ್ಲಾ ಮಟ್ಟದಲ್ಲಿನ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವನ್ನಾಗಿ ಉನ್ನತ್ತೀಕರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕ ಸಲಹೆಗಳನ್ನು ಆಲಿಸಿ ಮಾತನಾಡಿದ ಅವರು, ಪ್ರಧಾನಿಗಳು ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಲು ಕಿತ್ತೂರನ್ನು ಆಯ್ಕೆ ಮಾಡಿದ್ದರು. ಆಗಸ್ಟ್ 15ರ ಭಾಷಣದಲ್ಲಿ ಚನ್ನಮ್ಮಾಜಿಯನ್ನು ಸ್ಮರಿಸಿದರು. ಹೀಗೆ ಕಿತ್ತೂರಿನ ಮೇಲೆ ಅವರ ಪ್ರೇಮ ಸ್ಮರಣೀಯವಾಗಿದೆ. ಮುಖ್ಯಮಂತ್ರಿಗಳು ಕೂಡ ವಿಶೇಷ ಕಾಳಜಿ ವಹಿಸಿ ಜಿಲ್ಲಾ ಉತ್ಸವವಾಗಿದ್ದ ಇದನ್ನು ರಾಜ್ಯ ಉತ್ಸವನ್ನಾಗಿಸಿದ್ದಾರೆ. ಇದಕ್ಕೆ ಬೇಕಾಗುವ 5 ಕೋಟಿ ಅನುದಾನದ ಬೇಡಿಕೆ ಇಟ್ಟಿದ್ದು 5 ದಿನಗಳ ಅಥವಾ 6 ದಿನಗಳವರೆಗೆ ಉತ್ಸವವನ್ನು ವಿವಿಧ ವೇದಿಕೆಗಳ ಮೂಲಕ ಆಚರಿಸಲು ಸರಕಾರ ಜೊತೆ ಸುದೀರ್ಘ ಚರ್ಚೆ ನಡೆಸಲಾಗುವುದು. ರಾಜ್ಯ ಮಟ್ಟದ ಈ ಉತ್ಸವಕ್ಕೆ ರಾಷ್ಟ್ರಮಟ್ಟದ ಕಲಾವಿದರನ್ನು ಕ್ರೀಡಾ ಸ್ಪರ್ಧಿಗಳನ್ನು ಕರೆಯಿಸಿ ಉತ್ಸವವನ್ನು ಅವಿಸ್ಮರಣೀಯಗೊಳಿಸಲಾಗುವುದು. ಉತ್ಸವದಲ್ಲಿ ಮಹಿಳೆಯರಿಗಾಗಿಯೇ ಒಂದು ದಿನವನ್ನು ಮೀಸಲಾಗಿರಿಸಲಾಗುವುದು. ಜತೆಗೆ ಉತ್ಸವದಲ್ಲಿ ಇತಿಹಾಸ ಮೆಲಕು ಹಾಕುವ ಕೆಲಸವಾಗಬೇಕಿದೆ. ಉತ್ಸವಕ್ಕೆ 2 ತಿಂಗಳು ಬಾಕಿ ಉಳಿದಿದ್ದು, ವಿವಿಧ ಸಮಿತಿಗಳನ್ನು ಕೂಡಲೇ ರಚಿಸಿ ಉತ್ಸವ ಯಶಸ್ವಿ ಕುರಿತು 10 ದಿನಗಳಿಗೆ ಒಮ್ಮೆಯಂತೆ ಸಮಿತಿ ಸಭೆ ಕರೆದು ಚರ್ಚಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರನ್ನು ಹಾಗೂ ಜಿಲ್ಲಾಧಿಕಾರಿಗಳನ್ನು ಮುಂದೆ ನಡೆಯಲಿರುವ ಸಭೆಯಲ್ಲಿ ಕರೆದು ಅವರ ಸಲಹೆಗಳನ್ನು ಪಡೆಯಲಾಗುವುದು ಎಂದರು.

ಕಿತ್ತೂರ ಉತ್ಸವ