ಚನ್ನಪಟ್ಟಣ: ಯಾವುದೇ ಸೂಚನೆ ಇದ್ದರೆ ಕಾಂಗ್ರೆಸ್ ಕಚೇರಿ ಒಳಗೆ ಸಭೆ ಮಾಡ್ಕೊಳಿ. ಸರ್ಕಾರಿ ಅಧಿಕಾರಿಗಳ ಜೊತೆ ಕೂತು ಸೂಚನೆ ಕೊಡೋದಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಂದು ಕಿಡಿಕಾರಿದರು. ನಿನ್ನೆ ಅಧಿಕಾರಿಗಳ ಜೊತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ ಸಭೆ ವಿಚಾರಕ್ಕೆ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಎವಿ ಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಈ ರಾಷ್ಟ್ರೀಯ ಪಕ್ಷಗಳು ಕರ್ನಾಟಕದ ಸಂಪತ್ತನ್ನು ಯಾವ ರೀತಿ ಲೂಟಿ ಮಾಡ್ತಿದ್ದಾರೆ ಗೊತ್ತಾಗ್ತಿದೆ. ಯಾವುದೇ ಸೂಚನೆ ಇದ್ದರೆ ಕಾಂಗ್ರೆಸ್ ಕಚೇರಿ ಒಳಗೆ ಸಭೆ ಮಾಡ್ಕೊಳಿ. ಸರ್ಕಾರಿ ಅಧಿಕಾರಿಗಳ ಜೊತೆ ಕೂತು ಸೂಚನೆ ಕೊಡೋದಲ್ಲ ಎಂದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿಗೂ ರಾಜ್ಯದ ಜನತೆಗೂ ಸಂಬಂಧ ಇಲ್ಲ. ಅವರಿಗೆ ಸರ್ಕಾರದ ಅಧಿಕಾರಿಗಳ ಜೊತೆ ಸಭೆ ಮಾಡುವ ಯಾವುದೇ ಅಧಿಕಾರ ಇಲ್ಲ.
ಯಾವುದೇ ಸಭೆ ಮಾಡಿಲ್ಲ ಎಂದು ಹೇಳಿರುವ ಅವರು, ಸಭೆ ನಡೆಸುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಬಂದಿದೆ ಅವರ ಮಂತ್ರಿಗಳೇ ಅದನ್ನು ಹೊರಗೆ ಬಿಟ್ಟಿದ್ದಾರೆ. ಟೇಬಲ್ ಮೇಲೆ ಕೂತಿದ್ದವರೆಲ್ಲಾ ಯಾರು. ಅಲ್ಲಿ ಸಭೆ ನಡೆಸಿ ತೆಗೆದುಕೊಂಡಿರುವ ನಡಾವಳಿ ಬಗ್ಗೆ ಎಲ್ಲಾ ಪತ್ರಿಕೆಗಳಲ್ಲೂ ಬಂದಿದೆ. ನಾಡಿನ ಜನತೆಗೆ ಎಷ್ಟರ ಮಟ್ಟಿಗೆ ಮಂಕುಬೂದಿ ಎರಚಿದ್ದಾರೆ ಅಂತ ಗೊತ್ತಾಗ್ತಿದೆ. ಸುರ್ಜೆವಾಲಾ ಮೀಟಿಂಗ್ ಮಾಡಲು ಯಾರು ಪವರ್ ಕೊಟ್ಟಿದ್ದು. ಇದಕ್ಕೆ ಸರ್ಕಾರ ಲಘುವಾಗಿ ಉಢಾಫೆ ಉತ್ತರ ಕೊಡ್ತಿದೆ ಎಂದು ಕಿಡಿಕಾರಿದರು.