ರಾಹುಲ್‌ ವಿರುದ್ಧ ಬಹಿರಂಗ ಚರ್ಚೆಗೆ ಅಭಿನವ್ ಪ್ರಕಾಶ್‌ರನ್ನು ನೇಮಸಿದ ಬಿಜೆಪಿ

ರಾಹುಲ್‌ ಗಾಂಧಿ
Advertisement

ನವದೆಹಲಿ: ಲೋಕಸಭಾ ಚುನಾವಣೆ ಕುರಿತು ಬಹಿರಂಗ ಚರ್ಚೆಗೆ ನೀಡಿದ್ದ ಆಹ್ವಾನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಪ್ಪಿಗೆ ಸೂಚಿಸಿದ್ದು, ಪ್ರಧಾನಿ ನರೇಂದ್ರ ಮೋದಿಯನ್ನ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದರು, ರಾಹುಲ್‌ ಗಾಂಧಿಯ ಬಹಿರಂಗ ಚರ್ಚೆಯ ಸವಾಲನ್ನು ಸ್ವೀಕಾರ ಮಾಡಿರುವ ಬಿಜೆಪಿ, ಭಾರತೀಯ ಜನತಾ ಯುವ ಮೋರ್ಚಾ ಉಪಾಧ್ಯಕ್ಷ ಅಭಿನವ್ ಪ್ರಕಾಶ್‌ರನ್ನು ರಾಹುಲ್‌ ಗಾಂಧಿ ವಿರುದ್ಧ ಬಹಿರಂಗ ಚರ್ಚೆಗೆ ನೇಮಿಸಿದೆ. ಬಿಜೆವೈಎಂ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಈ ಕುರಿತಾದ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮತ್ತು ರಾಹುಲ್‌ ಗಾಂಧಿ ಅವರೇ, BJYM ನಮ್ಮ ಉಪಾಧ್ಯಕ್ಷ ಅಭಿನಾ ಪ್ರಕಾಶ್‌ ಅವರನ್ನು ನಿಮ್ಮೊಂದಿಗೆ ಚರ್ಚೆಗಾಗಿ ನಿಯೋಜನೆ ಮಾಡಿದೆ. ಅವರು ರಾಯ್ ಬರೇಲಿಯಲ್ಲಿ ಸುಮಾರು 30% ರಷ್ಟಿರುವ ಪಾಸಿ (SC) ಸಮುದಾಯದ ಯುವ ಮತ್ತು ವಿದ್ಯಾವಂತ ನಾಯಕರಾಗಿದ್ದಾರೆ. ಇದು ರಾಜಕೀಯ ಕುಡಿ ಮತ್ತು ಕಠಿಣ ದಾರಿಯಲ್ಲಿ ಬಂದ ಸಾಮಾನ್ಯ ಯುವಕನ ನಡುವಿನ ಸಮೃದ್ಧ ಚರ್ಚೆಯಾಗಿದೆ. ಚರ್ಚೆಯನ್ನು ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ.