ರ‍್ಯಾಪಿಡ್ ರಸ್ತೆ ವಿಮರ್ಶೆ ವರದಿಗೆ ₹23 ಲಕ್ಷ

ರ‍್ಯಾಪಿಡ್ ರಸ್ತೆ
Advertisement

ಬೆಂಗಳೂರು: ದೇಶದ ಪ್ರಪ್ರಥಮ ಎಂಬ ಹಿರಿಮೆಗೆ ಪಾತ್ರವಾಗಿದ್ದ ನಗರದ ರ‍್ಯಾಪಿಡ್ ರಸ್ತೆ ನಿರ್ಮಾಣಕ್ಕೆ ಬಿಬಿಎಂಪಿ ತೀರ್ಮಾನಿಸಿತ್ತು. ಪ್ರಾಯೋಗಿಕವಾಗಿ ನಗರದ ಹೊರ ವಲಯದಲ್ಲಿ ರ‍್ಯಾಪಿಡ್ ರಸ್ತೆ ನಿರ್ಮಿಸಲಾಗಿತ್ತು.
ಬೆಂಗಳೂರಿನ ‘ರ‍್ಯಾಪಿಡ್‌ ರಸ್ತೆ’ ವಿಮರ್ಶೆಯ ವರದಿ ನೀಡಲು ಭಾರತೀಯ ವಿಜ್ಞಾನ ಸಂಸ್ಥೆಗೆ (ಐಐಎಸ್‌ಸಿ) ಬಿಬಿಎಂಪಿ ಒಪ್ಪಿಸಿದೆ. ಈ ವರದಿ ನೀಡಲು ಬರೋಬ್ಬರಿ ₹23 ಲಕ್ಷವನ್ನು ನೀಡಲು ಬಿಬಿಎಂಪಿ ಮುಂದಾಗಿದೆ.
ಬೇರೆ ಮಾದರಿಯ ರಸ್ತೆಗಳಿಗಿಂತ ದುಬಾರಿಯಾದರೂ ಶೀಘ್ರ ನಿರ್ಮಾಣ ಮಾಡಬಹುದು ಹಾಗೂ ಬಹು ಕಾಲ ಬಾಳಿಕೆ ಬರಲಿದೆ ಎಂಬ ಕಾರಣಕ್ಕೆ ರ‍್ಯಾಪಿಡ್ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು.