ಲಘು ಯುದ್ಧ ವಿಮಾನ: ತೇಜಸ್ ಭಾರತೀಯ ವಾಯುಪಡೆಗೆ ಹಸ್ತಾಂತರ

Advertisement

ಬೆಂಗಳೂರ: ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಿರ್ಮಿಸಿರುವ 2 ಆಸನದ ತೇಜಸ್ ಯುದ್ಧವಿಮಾನವನ್ನು ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಸಮ್ಮುಖದಲ್ಲಿ ಹಸ್ತಾಂತರ ಮಾಡಲಾಯಿತು.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಮುಖ್ಯಸ್ಥರು ಎಲ್ ಸಿಎ ಮಾದರಿ ವಿಮಾನವನ್ನು ಕೇಂದ್ರ ರಕ್ಷಣಾ ಇಲಾಖೆಯ ರಾಜ್ಯಸಚಿವ ಅಜಯ್ ಭಟ್ ಅವರಿಗೆ ಹಸ್ತಾಂತರಿಸುವ ಮೂಲಕ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಿದರು. ಕಾರ್ಯಕ್ರಮದಲ್ಲಿ ತೇಜಸ್ ನ ನಿರ್ಮಾಣ, ವಿಶೇಷತೆ ಬಿಂಬಿಸುವ ವಿಶೇಷ ಸಾಕ್ಷ್ಯ ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.


ವಾಯುಪಡೆ ಮುಖ್ಯಸ್ಥ ವಿವೇಕ್ ರಾಮ್ ಚೌಧರಿ, ವಾಯುಪಡೆಗೆ ತೇಜಸ್ ಯುದ್ಧ ವಿಮಾನದ ಸೇರ್ಪಡೆ ಇತಿಹಾಸದಲ್ಲಿ ಹೊಸ ಅಧ್ಯಾಯ ಸೃಷ್ಟಿಸಿದೆ. ಅಲ್ಲದೇ, ಅದರ ಕಾರ್ಯಕ್ಷಮತೆ ಹಾಗೂ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ. 83 ಲಘು ಯುದ್ಧ ವಿಮಾನಗಳ ಹಸ್ತಾಂತರಕ್ಕೆ ಈಗಾಗಲೇ ಮಾತುಕತೆ ನಡೆದಿದ್ದು, ಮುಂಬರುವ ದಿನಗಳಲ್ಲಿ 220 ಲಘು ಯುದ್ಧ ವಿಮಾನದ ಪಡೆಯನ್ನು ಹೊಂದುವ ಉದ್ದೇಶವಿದೆ ಎಂದು ಹೇಳಿದರು.