ವಾಕರಸಾ ಸಂಸ್ಥೆಗೆ ೭೯೯ ಬಸ್ ಸೇರ್ಪಡೆ

Advertisement

ಹುಬ್ಬಳ್ಳಿ: ೨೦೨೩-೨೦೨೪ನೇ ಸಾಲಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಹೊಸ ಬಸ್ಸುಗಳ ಖರೀದಿ ಪ್ರಕ್ರಿಯೆಯು ಜಾರಿಯಲ್ಲಿದ್ದು, ೨೦ ಪಲ್ಲಕ್ಕಿ ನಾನ್ ಏಸಿ ಸ್ಲೀಪರ್, ೦೪ ಮಲ್ಟಿ ಆಕ್ಸಲ್ ಏಸಿ ಸ್ಲೀಪರ್ (ಅಂಬಾರಿ ಉತ್ಸವ), ೬೭೫ ಬಿಎಸ್-೬ ಮಾದರಿಯ ಗ್ರಾಮಾಂತರ ಬಸ್ಸುಗಳು ಹಾಗೂ ೧೦೦ ನಗರ ಸಾರಿಗೆ ಬಸ್ಸುಗಳು ಹೀಗೆ ಒಟ್ಟು ೭೯೯ ಹೊಸ ಬಸ್ಸುಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ ಎಂದು ಸಂಸ್ಥೆಯು ತಿಳಿಸಿದೆ.
ಈ ಪೈಕಿ ಈಗಾಗಲೇ ೧೦ ಪಲ್ಲಕ್ಕಿ ನಾನ್ ಏಸಿ ಸ್ಲೀಪರ್, ೨೩೬ ಎಸಿ-೬ ಮಾದರಿಯ ಗ್ರಾಮಾಂತರ ನೂತನ ಬಸ್ಸುಗಳು ರಸ್ತೆಗಿಳಿದಿದ್ದು ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿವೆ. ಉಳಿದಂತೆ ೧೦ ಪಲ್ಲಕ್ಕಿ ನಾನ್ ಏಸಿ ಸ್ಲೀಪರ್, ೦೪ ಮಲ್ಟಿ ಆಕ್ಸಲ್ ಏಸಿ ಸ್ಲೀಪರ್ (ಅಂಬಾರಿ ಉತ್ಸವ), ೪೩೯ ಬಿಎಸ್-೬ ಮಾದರಿಯ ಗ್ರಾಮಾಂತರ ಬಸ್ಸುಗಳು ಹಾಗೂ ೧೦೦ ನಗರ ಸಾರಿಗೆ ಬಸ್ಸುಗಳ ಖರೀದಿಗೆ ಟೆಂಡರ್ ಕರೆಯಲಾಗಿದ್ದು, ಸಾರ್ವಜನಿಕರ ಸೇವೆಗೆ ಲಭ್ಯವಾಗಲಿವೆ ಎಂದು ತಿಳಿಸಿದೆ.
ಇದಲ್ಲದೇ, ೧೫೦ ನಗರ ಹಾಗೂ ೨೦೦ ಗ್ರಾಮಾಂತರ ಹೀಗೆ ಒಟ್ಟು ೩೫೦ ಇಲೆಕ್ಟ್ರಿಕಲ್ ವಾಹನಗಳ ಖರೀದಿಗೆ ಟೆಂಡರ್ ಕರೆಯಲಾಗುತ್ತಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.