ವಿಜಯಪುರದಲ್ಲಿ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ…

Advertisement

ವಿಜಯಪುರ : ನಗರದಲ್ಲಿ ಬಾರಿ ಪ್ರಮಾಣದಲ್ಲಿ ಮಳೆ ಬೀಳುತ್ತಿದ್ದು, ಮಳೆಯ ಆರ್ಭಟಕ್ಕೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.

ನಗರದ ಅಪ್ಸರಾ ಚಿತ್ರ ಮಂದಿರದಲ್ಲಿ ಪಾರ್ಕ್ ಮಾಡಿ ಚಿತ್ರ ವೀಕ್ಷಣೆಗೆ ಹೋಗಿದ್ದ ಸಾರ್ವಜನಿಕರ ವಾಹನಗಳು ನೀರಿನಲ್ಲಿ ತೆಲಾಡುತ್ತಿವೆ. ಸುಮಾರು 50 ಕ್ಕೂ ಹೆಚ್ಚು ಬೈಕ್ ಗಳು ನೀರಿನಲ್ಲಿ ಮುಳುಗಿದ್ದು, 4 ಕಾರುಗಳು ಸಹಿತ ಸಂಪೂರ್ಣ ಜಲ ಸಮಾಧಿಯಾಗಿವೆ.

ಮೂರು ಗಂಟೆಗಳಿಗೂ ಹೆಚ್ಚು ಕಾಲ ಮಳೆ ಬಿದ್ದಿದ್ದು ನಗರದ ಬಡಿಕಾಮಾನ, ಬಸ್ ನಿಲ್ದಾಣ ಪಕ್ಕದಲ್ಲಿರುವ ಬಾಗವಾನ ಕಾಲೋನಿ, ಮೀನಾಕ್ಷಿ ಚೌಕ್, ಸಕಾಫ್ ರೋಜಾ, ಇಬ್ರಾಹಿಂ ರೋಜಾ, ಕೆ. ಸಿ. ಮಾರ್ಕೆಟ್, ರಾಮನಗರ, ನಿಸಾರ ಮಡ್ಡಿ, ದರ್ಬಾರ್ ಗಲ್ಲಿ, ಮನಗೂಳಿ ಬೇಸ್ ಕಾಮಾನ ಖಾನ್ ಬಜಾರ್ ಶಾಹಪೇಟಿ ಸೇರಿದಂತೆ ವಿವಿಧ ಕಾಲೋನಿಗಳಲ್ಲಿ ನೀರು ನುಗ್ಗಿದ್ದು ಅಪಾರ ಪ್ರಮಾಣ ಹಾನಿ ಸಂಭವಿಸಿದೆ.

ತಗ್ಗು ಪ್ರದೇಶದ ಎಲ್ಲ ಮನೆಗಳಲ್ಲೂ ನೀರು ಹೊಕ್ಕಿದ್ದು, ಕೇವಲ ಎರಡೇ ಗಂಟೆಗಳಲ್ಲಿ ಸಾರ್ವಜನಿಕರ ಬದುಕು ಬೀದಿಗೆ ಬಂದಿದೆ. ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು ನೀರು ಚರಂಡಿ ಸೇರಲು ಕಾರ್ಯಾಚರಣೆ ಮಾಡುತ್ತಿದ್ದಾರೆ.